ಗಡಿಯಲ್ಲಿ ಚೀನಾದಿಂದ ಇನ್ನಷ್ಟು ಸೈನಿಕರ ಜಮಾವಣೆ!

ಗಡಿಯಲ್ಲಿ ಚೀನಾದಿಂದ ಇನ್ನಷ್ಟು ಸೈನಿಕರ ಜಮಾವಣೆ| ಚೀನಾ ಮಾಧ್ಯಮದಿಂದಲೇ ವರದಿ

Chinese state media says its troops tightened control in Galwan Valley after India face off

ಬೀಜಿಂಗ್(ಮೇ.19)‌: ಭಾರತ ಮತ್ತು ಚೀನಾ ಯೋಧರ ಮಧ್ಯೆ ಗಡಿಯಲ್ಲಿ ಸಂಘರ್ಷ ಏರ್ಪಟ್ಟಬೆನ್ನಲ್ಲೇ, ಅಕ್ಸಾಯ್‌ ಚಿನ್‌ ಪ್ರದೇಶದ ಗಲ್ವಾನ್‌ ಕಣಿವೆಯಲ್ಲಿನ ಗಡಿಗೆ ಚೀನಾ ಇನ್ನಷ್ಟುಸೈನಿಕರನ್ನು ರವಾನಿಸಿದೆ.

ಇದೇ ವೇಳೆ ಗಲ್ವಾನ್‌ ಗಡಿಯನ್ನು ದಾಟಿ ಚೀನಾದ ಪ್ರದೇಶವನ್ನು ಭಾರತದ ಪಡೆಗಳು ಪ್ರವೇಶಿಸಿದೆ ಮತ್ತು ಅಕ್ಸಾಯ್‌ ಚಿನ್‌ ಪ್ರದೇಶದಲ್ಲಿ ರಕ್ಷಣಾ ನೆಲೆಗಳನ್ನು ಭಾರತ ಸ್ಥಾಪಿಸಿದೆ. ಮೇ ತಿಂಗಳ ಆರಂಭದಿಂದಲೂ ಭಾರತದ ಪಡೆಗಳು ಗಡಿಯ ಒಳಕ್ಕೆ ಪ್ರವೇಶಿಸುತ್ತಿದ್ದು, ಗಡಿಯನ್ನು ಕಾಯುತ್ತಿರುವ ಚೀನಾದ ಯೋಧರಿಗೆ ತೊಂದರೆ ನೀಡುತ್ತಿವೆ. ಹೀಗಾಗಿ ಚೀನಾ ತನ್ನ ಸಾರ್ವಭೌಮತೆಯನ್ನು ಉಳಿಸಿಕೊಳ್ಳಲು ಗಡಿಗೆ ಇನ್ನಷ್ಟುಪಡೆಗಳನ್ನು ಸೇನೆ ಕಳುಹಿಸಿಕೊಟ್ಟಿದೆ ಎಂದು ಚೀನಾ ಸರ್ಕಾರದ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ.

ಗಡಿಯಲ್ಲಿ ಭಾರತ, ಚೀನಾ ಯೋಧರ ಭಾರಿ ಜಮಾವಣೆ!

ಆದರೆ, ಚೀನಾದ ಆರೋಪಕ್ಕೆ ಭಾರತದ ವಿದೇಶಾಂಗ ಇಲಾಖೆ ತಕ್ಷಣವೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತ ಹಾಗೂ ಚೀನಾ 3,488 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿದ್ದು, ಗಡಿ ನಿರ್ಧಾರವಾಗದೇ ಇರುವ ಸ್ಥಳಗಳಲ್ಲಿ ಗೊಂದಲದಿಂದಾಗಿ ಈ ರೀತಿಯ ಆರೋಪಗಳನ್ನು ಚೀನಾ ಮಾಡುತ್ತಿರಬಹುದು ಎಂದು ಸೇನಾ ಅಧಿಕಾರಿಯೊಬ್ಬರು ಮಧ್ಯಮಕ್ಕೆ ತಿಳಿಸಿದ್ದಾರೆ.

ಭಾರತ- ಚೀನಾ ಸೈನಿಕರ ನಡುವೆ ಗಡಿಯಲ್ಲಿ ಘರ್ಷಣೆ!

ಗಡಿ ವಿಚಾರದಲ್ಲಿ ಚೀನಾ ಪದೇ ಪದೇ ಕ್ಯಾತೆ ತೆಗೆಯುತ್ತಲೇ ಇದ್ದು, ಡೋಕ್ಲಾಂ ಪ್ರದೇಶಕ್ಕೆ ಸಂಬಂಧಿಸಿದಂತೆ 73 ದಿನಗಳ ಬಳಿಕ ಬಿಕ್ಕಟ್ಟು ಶಮನಗೊಂಡಿತ್ತು.

Latest Videos
Follow Us:
Download App:
  • android
  • ios