ಅಯೋಧ್ಯೆ: ಮುಸ್ಲಿಂ ಯುವಕನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹನುಮನ ಚಿತ್ರ!
ಮುಸ್ಲಿಂ ಯುವಕನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂ ದೇವರ ಚಿತ್ರ| ನೋಡಿದವರು ಅಚ್ಚರಿ ವ್ಯಕ್ತಪಡಿಸಿದಾಗ, ಇದರ ಹಿಂದಿನ ಕಾರಣವನ್ನೂ ಬಹಿರಂಗಪಡಿಸಿದ್ರು
ಅಯೋಧ್ಯೆ[ನ.. 22]: ಭಗವಂತ ರಾಮನ ಮೇಲಿನ ಶ್ರದ್ಧೆ ಇಡೀ ಅಯೋಧ್ಯೆಯಲ್ಲಿ ಕಾಣಲಾರಂಭಿಸಿದೆ. ಇದೇ ಕಾರಣದಿಂದ ಶ್ರದ್ಧೆ ಭಕ್ತಿ ಎಂದು ಜನರನ್ನು ಧರ್ಮದ ಹೆಸರಲ್ಲಿ ಬೇರ್ಪಡಿಸುತ್ತಿದ್ದ ರೇಖೆ ಸದ್ಯ ಮಸುಕಾಗಲಾರಂಭಿಸಿದೆ. ಇದಕ್ಕೆ ಉದಾಹರಣೆಯಂತಿದೆ ಇಲ್ಲಿನ ಮುಸ್ಲಿಂ ಕುಟುಂಬ ತಯಾರಿಸಿದ ತಮ್ಮ ಮಗನ ಮದುವೆ ಆಮಂತ್ರಣದ ಪತ್ರಿಕೆ.
ಹೌದು ಆಮಂತ್ರಣ ಪತ್ರಿಕೆಯನ್ನು ವಿಭಿನ್ನವಾಗಿ ತಯಾರಿಸಿರುವ ಮುಸ್ಲಿಂ ಕುಟುಂಬ, ರಾಮನ ಬಂಟ ಹನುಮನ ಚಿತ್ರವುಳ್ಳ ಕ್ಯಾಲೆಂಡರ್ ಒಂದನ್ನು ಮುದ್ರಿಸಿದೆ. ಇಷ್ಟೇ ಅಲ್ಲ, ಇನ್ವಿಟೇಷನ್ ಕಾರ್ಡ್ ನಲ್ಲಿ ಬ್ರಹ್ಮ, ವಿಷ್ಣು, ಶಿವ ಹಾಗೂ ನಾರದರ ಚಿತ್ರವನ್ನೂ ಮುದ್ರೀಕರಿಸಲಾಗಿದೆ.
ರಾಮನ ಮಡಿಲಿಗೆ ಅಯೋಧ್ಯೆ: ಇವರೆಲ್ಲರ ಹೇಳಿಕೆಯಲ್ಲಿದೆ ಸಹೋದರತ್ವದ ವಿದ್ಯೆ!
ಆಮಂತ್ರಣ ಪತ್ರಿಕೆ ಕಂ ಕ್ಯಾಲೆಂಡರ್ ಹಿಂಬಾಗದಲ್ಲಿ ಮದುವೆ ಸಂಬಂಧಿತ ಸೂಚನೆಗಳನ್ನು ನೀಡಲಾಗಿದೆ. ಮೊಹಮ್ಮದ್ ಮುಬೀನ್ ಹಾಗೂ ಅಮೀನಾ ಬಾನೋ ಮದುವೆ ಕ್ರಮಶಃ ಶುಕ್ರವಾರ ಹಾಗೂ ರವಿವಾರದಂದು ನಡೆಯಲಿದೆ ಎಂದು ಮುದ್ರಿಸಲಾಗಿದೆ. ಇನ್ನು ಹಿಂದೂ ದೇವರ ಚಿತ್ರ ಮುದ್ರಿಸಿರುವುದರ ಕುರಿತು ಪ್ರತಿಕ್ರಿಯಿಸಿರುವ ಈ ಕುಟುಂಬ 'ಅಲ್ಲಾಹುವಿನ ಮೇಲೆ ಎಷ್ಟು ನಂಬಿಕೆ ಇದೆಯೋ ಅಷ್ಟೇ ನಂಬಿಕೆ ಹಿಂದೂ ದೇವ, ದೇವತೆಯರ ಮೇಲಿದೆ' ಎಂದಿದ್ದಾರೆ.
ಇನ್ನು ರಸೂಲಾಬಾದ್ ನ ರಾಜಕೀಯ ಹೋಮಿಯೋಪತಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮುಬೀನ್ ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, 'ಆಮಂತ್ರಣ ಪತ್ರಿಕೆ ಮುದ್ರಿಸುವ ವಿಚಾರದಲ್ಲಿ ಯಾರೂ ನನ್ನ ಮೇಲೆ ಒತ್ತಡ ಹೇರಿರಲಿಲ್ಲ. ಕುಟುಂಬ ಸದಸ್ಯರ ಅನುಮತಿ ಪಡೆದು ನಾನು ಪತ್ರಿಕೆ ಆಯ್ಕೆ ಮಾಡಿದ್ದೆ' ಎಂದಿದ್ದಾರೆ.
ಮುಬೀನ್ ತನ್ನ 700 ಮಂದಿ ಹಿಂದೂ ಮಿತ್ರರಿಗೂ ಆಮಂತ್ರಣ ಪತ್ರಿಕೆಯನ್ನು ಕಳುಹಿಸಿದ್ದಾರೆ.
ಭಾರತೀಯ ಮುಸ್ಲಿಮರು ಚೆನ್ನಾಗಿರಲು ಕಾರಣವೇನು?: ಭಾಗವತ್ ಅನಿಸಿಕೆ ಒಪ್ಪೋಣವೇನು?