ಕೊರೋನಾ ಚಿಕಿತ್ಸೆಗೆ ದೇಶದಲ್ಲಿ 586 ಆಸ್ಪತ್ರೆ!

ಕೊರೋನಾ ಚಿಕಿತ್ಸೆಗೆ ದೇಶದಲ್ಲಿ 586 ಆಸ್ಪತ್ರೆ| 1 ಲಕ್ಷ ಐಸೋಲೇಷನ್‌ ಬೆಡ್‌| 11,500 ಐಸಿಯು ಬೆಡ್‌ ಮೀಸಲು| ದೇಶದಲ್ಲಿ 1.7 ಲಕ್ಷ ಸ್ಯಾಂಪಲ್‌ಗಳ ಪರೀಕ್ಷೆ| ಮೊನ್ನೆ ಒಂದೇ ದಿನ 16564 ಸ್ಯಾಂಪಲ್‌ ತಪಾಸಣೆ

586 Coronavirus hospitals with 1 lakh isolation beds over 11K ICU beds across country

ನವದೆಹಲಿ(ಏ.12): ಕೇವಲ ಕೊರೋನಾ ವೈರಸ್‌ ಚಿಕಿತ್ಸೆಗೆಂದೇ ದೇಶದಲ್ಲಿ 586 ಆಸ್ಪತ್ರೆ ಮೀಸಲಿರಿಸಲಾಗಿದೆ. 1 ಲಕ್ಷ ಐಸೋಲೇಶನ್‌ ಬೆಡ್‌ಗಳು ಹಾಗೂ 11,500 ಐಸಿಯು ಬೆಡ್‌ಗಳನ್ನು ಕಾದಿರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಶನಿವಾರ ಕೊರೋನಾ ಕುರಿತ ತಮ್ಮ ದೈನಂದಿನ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್‌ವಾಲ್‌ ಈ ವಿಷಯ ತಿಳಿಸಿದರು. ಪರಿಸ್ಥಿತಿಗೆ ತಕ್ಕಂತೆ ಇವುಗಳ ಸಂಖ್ಯೆ ಹೆಚ್ಚಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ದೇಶದ 200 ವೈದ್ಯ ಸಿಬ್ಬಂದಿಗೆ ಕೊರೋನಾ ಸೋಂಕು ದೃಢ!

ಆಯುಷ್‌ ಸಚಿವಾಲಯವು ರೋಗ ನಿರೋಧಕತೆ ಹೆಚ್ಚಲು ಹಾಗೂ ಉಸಿರಾಟ ಸುಧಾರಿಸಲು ಹಲವು ಮಾರ್ಗದರ್ಶಿಗಳನ್ನು ನೀಡಿದೆ. ಜಿಲ್ಲೆಗಳಿಗೆ ಇವುಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಸೂಚಿಸಲಾಗಿದೆ. ದೇಶದಲ್ಲಿ ಕೊರೋನಾ ಚಿಕಿತ್ಸೆಗೆ ಬಳಕೆ ಆಗುತ್ತಿರುವ ಮಲೇರಿಯಾ ಮಾತ್ರೆ ‘ಹೈಡ್ರೋಕ್ಸಿಕ್ಲೋರೋಕ್ವಿನ್‌’ ಕೊರತೆ ಇಲ್ಲ ಎಂದು ಅವರು ಹೇಳಿದರು.

ಆದರೆ, ‘5 ಲಕ್ಷ ರೋಗ ತಡೆ ಕಿಟ್‌ಗಳನ್ನು ಐಸಿಎಂಆರ್‌ ಆರ್ಡರ್‌ ಮಾಡಿದೆ. ಅವಿನ್ನೂ ನಮ್ಮ ಕೈಸೇರಿಲ್ಲ’ ಎಂದು ಐಸಿಎಂಆರ್‌ ಅಧಿಕಾರಿಯೊಬ್ಬರು ಇದೇ ವೇಳೆ ತಿಳಿಸಿದರು.

ಈವರೆಗೆ 1.7 ಲಕ್ಷ ಸ್ಯಾಂಪಲ್‌ಗಳನ್ನು ಕೊರೋನಾ ಸಂಬಂಧ ತಪಾಸಿಸಲಾಗಿದೆ. ಶುಕ್ರವಾರ ಒಂದೇ ದಿನ 16,564 ಸ್ಯಾಂಪಲ್‌ ಪರೀಕ್ಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios