Asianet Suvarna News Asianet Suvarna News

‘100 ಕೋಟಿ ಜನರ ಮಣಿಸಲು 15 ಕೋಟಿ ಮುಸ್ಲಿಮರು ಸಾಕು’

‘100 ಕೋಟಿ ಜನರ ಮಣಿಸಲು 15 ಕೋಟಿ ಮುಸ್ಲಿಮರು ಸಾಕು’ | ಬಹುಸಂಖ್ಯಾತರಿಗೆ ಎಐಎಂಐಎಂ ಮುಖಂಡ ಪಠಾಣ್‌ ಎಚ್ಚರಿಕೆ |  ಕಲಬುರಗಿಯಲ್ಲಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ವಿವಾದಿತ ಹೇಳಿಕೆ

15 crore is there but 100 crore will be heavy controversial statement by AIMIM leader Waris Pathan
Author
Bengaluru, First Published Feb 21, 2020, 8:53 AM IST

ಮುಂಬೈ (ಫೆ. 21): ‘ಮುಸ್ಲಿಮರ ಜನಸಂಖ್ಯೆ ದೇಶದಲ್ಲಿ 15 ಕೋಟಿಗಿಂತ ಕಮ್ಮಿಯೇ ಇರಬಹುದು. ಆದರೆ ಅಗತ್ಯಬಿದ್ದರೆ 100 ಕೋಟಿ ಬಹುಸಂಖ್ಯಾತರಿಗೆ ತಕ್ಕ ತಿರುಗೇಟು ನೀಡಬಲ್ಲರು’ ಎಂದು ಮಹಾರಾಷ್ಟ್ರದ ಎಐಎಂಐಎಂ ಮುಖಂಡ ವಾರಿಸ್‌ ಪಠಾಣ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಒವೈಸಿ ಅವರ ಈ ಪಕ್ಷದ ವಕ್ತಾರರೂ ಆಗಿರುವ ಪಠಾಣ್‌ ಅವರು ಕರ್ನಾಟಕದ ಕಲಬುರಗಿಯಲ್ಲಿ ಫೆಬ್ರವರಿ 15ರಂದು ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಈ ಮಾತುಗಳನ್ನಾಡಿದ್ದಾರೆ. ಈ ಭಾಷಣದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಪಾಕ್‌ಗೆ ಹೋಗಿ ಭಾರತ್‌ ಮಾತಾ ಕೀ ಜೈ ಎಂದಿದ್ರಂತೆ ಓವೈಸಿ..!

‘ಅವರು (ಬಹುಸಂಖ್ಯಾತರು), ನೀವು ಮುಸ್ಲಿಂ ಮಹಿಳೆಯರನ್ನು ಮುಂದೆ ಇರಿಸಿಕೊಂಡು ಹೋರಾಡುತ್ತಿದ್ದೀರಿ ಎಂದು ಹೇಳುತ್ತಿದ್ದಾರೆ. ಆದರೆ ಒಂದು ತಿಳಿಯಿರಿ. ಈಗ ಕೇವಲ ಸಿಂಹಿಣಿಯರು ಹೊರಬಂದಿದ್ದಾರೆ. ಅದಕ್ಕೇ ನೀವು ಬೆವರುತ್ತಿದ್ದೀರಿ. ಎಲ್ಲರೂ ಹೊರಬಂದರೆ ಏನಾಗುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ನಾವು ಕೇವಲ 15 ಕೋಟಿ ಇದ್ದೇವೆ. ಆದರೆ ಈ ಸಂಖ್ಯೆ 100 ಕೋಟಿ ಬಹುಸಂಖ್ಯಾತರಿಗಿಂತ ದೊಡ್ಡ ಪಡೆಯಾಗಬಲ್ಲದು’ ಎಂದು ಪಠಾಣ್‌ ಹೇಳಿದರು.

‘ಈಗ ಕೇವಲ ಮುಸ್ಲಿಂ ಮಹಿಳೆಯರು ದೇಶವನ್ನು ನಡುಗಿಸಿದ್ದಾರೆ. ಇಡೀ ಸಮುದಾಯ ಒಟ್ಟಾಗಿ ಬಂದರೆ, ಅದರ ಪರಿಣಾಮ ಇನ್ನೂ ತೀವ್ರವಾಗಿರುತ್ತದೆ’ ಎಂದೂ ಅವರು ಎಚ್ಚರಿಸಿದರು. ‘ಅಲ್ಪಸಂಖ್ಯಾತರು ನಿಮ್ಮ (ಬಹುಸಂಖ್ಯಾತರು) ಸ್ವಾತಂತ್ರ್ಯವನ್ನು ಕಸಿಯುವಷ್ಟುಶಕ್ತಿ ಹೊಂದಿದೆ’ ಎಂದೂ ಅವರು ಹೇಳಿದರು.

Follow Us:
Download App:
  • android
  • ios