ಚಿತ್ರಗಳು: ಕೊರೋನಾ ಸೋಂಕಿತರಿಗೆ ರೈಲು ಬೋಗಿಯಲ್ಲಿ ರೆಡಿಯಾಯ್ತು ಐಸೋಲೇಶನ್ ವಾರ್ಡ್
ದೇಶದಲ್ಲಿ ಗಂಟೆಗೊಮ್ಮೆ ರಕ್ತಬೀಜಾಸುರನಂತೆ ಕೊರೋನಾ ಸೋಂಕಿತರ ಸಂಖ್ಯೆಗಳು ಹುಟ್ಟಿಕೊಳ್ಳುತ್ತಿವೆ. ಲಾಕ್ಡೌನ್ ಮಾಡಿದ್ರೂ ಕೊರೋನಾ ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಿದ್ದು, ಎಲ್ಲಿ ಮೂರನೇ ಹಂತಕ್ಕೆ ತಲುಪಿಡುತ್ತೋ ಎನ್ನುವ ಆತಂಕ ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಜತೆಗೆ ರೈಲ್ವೆ ಇಲಾಖೆಯೂ ಕೈ ಜೋಡಿಸಿದ್ದು, ಬೋಗಿಗಳಲ್ಲಿ ಕೊರೋನಾ ಸೋಂಕಿತರಿಗೆ ಮತ್ತು ಶಂಕಿತರಿಗಾಗಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುದೆ. ಎಲ್ಲಿ..? ಏನು..? ಹೇಗಿರಲಿದೆ ಎನ್ನುವ ಮಾಹಿತಿ ಚಿತ್ರಗಳೇ ತಿಳಿಸುತ್ತವೆ ನೋಡಿ.
ರೈಲಿನಲ್ಲಿರುವ ವಿವಿಧ ಬೋಗಿಗಳನ್ನ ಐಸೋಲೇಶನ್ ವಾರ್ಡ್ಗಳಾಗಿ ಮಾರ್ಪಾಡು ಮಾಡಲು ಸಿದ್ಧ ಎಂದು ರೈಲ್ವೆ ಇಲಾಖೆ ಹೇಳಿದೆ. ಈಗಾಗಲೇ ಕೆಲ ಪ್ರೋಟೋಟೈಪ್ಗಳನ್ನ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾಪ ಕಳುಹಿಸಿಕೊಟ್ಟಿದೆ.
ಪೇಷೆಂಟ್ ಇರುವ ಕ್ಯಾಬಿನ್ನಲ್ಲೂ ಮೇಲೇರುವ ಏಣಿಯನ್ನು ತೆಗೆಯಲಾಗಿದೆ. ಪ್ಲಾಸ್ಟಿಕ್ ಕರ್ಟನ್ನಿಂದ ಕ್ಯಾಬಿನ್ ಕವರ್ ಮಾಡಲಾಗಿದೆ.
ಹೆಚ್ಚುವರಿ ಬಾಟಲ್ ಹೋಲ್ಡರ್ಗಳು, ಕೋಟ್ ಹ್ಯಾಂಗರ್ಗಳನ್ನು ಹಾಕಲಾಗಿದೆ. ಮೆಡಿಕಲ್ ಉಪಕರಣ ಇಟ್ಟುಕೊಳ್ಳಲು ಈ ವ್ಯವಸ್ಥೆ ಮಾಡಲಾಗಿದೆ.
ಡಾಕ್ಟರ್, ನರ್ಸ್ ಸೇರಿ ವೈದ್ಯಕೀಯ ಸಿಬ್ಬಂದಿಗೂ ಪ್ರತ್ಯೇಕ ಕ್ಯಾಬಿನ್ ಕೊಡಲಾಗಿದೆ. ರೋಗಿ ಮತ್ತು ವೈದ್ಯರ ಕ್ಯಾಬಿನ್ ಮಧ್ಯೆ ಅಡ್ಡವಾಗಿ ಪ್ಲಾಸ್ಟಿಕ್ ಕರ್ಟನ್ ಹಾಕಲಾಗಿದೆ.
ಇಂಡಿಯನ್ ಸ್ಟೈಲ್ ಟಾಯ್ಲೆಟ್ಗಳನ್ನು ಬಾಥ್ ರೂಮ್ ಆಗಿ ಪರಿವರ್ತಿಸಲಾಗಿದೆ.
ಹ್ಯಾಂಡ್ ಶವರ್ಗಳನ್ನ ಹಾಕಲಾಗಿದೆ.
ಕೆಳಗಿದ್ದ ಟ್ಯಾಪ್ನ ಎತ್ತರವನ್ನು ಸಹ ಹೆಚ್ಚಿಸಲಾಗಿದೆ.
ಈ ಮಾದರಿಗೆ ಕೇಂದ್ರ ಸರ್ಕಾರ ಒಪ್ಪಿದರೆ ರೈಲ್ವೆ ಇಲಾಖೆಯು ತನ್ನಲ್ಲಿರುವ 20 ಸಾವಿರ ಬೋಗಿಗಳನ್ನು 10 ಸಾವಿರ ಐಸೋಲೇಶನ್ ವಾರ್ಡ್ಗಳಾಗಿ ಮಾರ್ಪಡಿಸಬಹುದು. ಇದರಿಂದ ಕೊರೋನಾ ಎದುರಿಸಲು ಹೆಚ್ಚು ಸಹಾಯಕವಾಗುವ ನಿರೀಕ್ಷೆ ಇದೆ.
ರೈಲ್ವೆಯ ಪ್ರತೀ ವಲಯದಲ್ಲೂ ವಾರದೊಳಗೆ 10 ಬೋಗಿಗಳನ್ನು ಐಸೋಲೇಶನ್ ವಾರ್ಡ್ಗಳನ್ನಾಗಿ ಪರಿವರ್ತಿಸುವುದಾಗಿ ಇಲಾಖೆ ತಿಳಿಸಿದೆ.