ಆಘಾತಕಾರಿ ಅಂಶ; ಕೊಲೆ ಪ್ರಕರಣಗಳಲ್ಲಿ ಕರ್ನಾಟಕ ನಂ.1!

ಕೊಲೆ: ದಕ್ಷಿಣ ಭಾರತದಲ್ಲಿ ಕರ್ನಾಟಕ ನಂ.1! ದೇಶದಲ್ಲೇ 5ನೇ ಸ್ಥಾನ | ಒಂದೇ ವರ್ಷದಲ್ಲಿ 28000 ಕೊಲೆಗೆ ಭಾರತ ಸಾಕ್ಷಿ |  ಜಾತಿ ಹತ್ಯೆಯಲ್ಲಿ 2, ಬಲಿಗಾಗಿ ಹತ್ಯೆಯಲ್ಲಿ ಪ್ರಥಮ ಸ್ಥಾನಕ್ಕೇರಿದೆ ಕರುನಾಡು|  ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ ವರದಿಯಲ್ಲಿ ಕರ್ನಾಟಕಕ್ಕೆ ಕ್ರೈಮ್‌ ಕಳಂಕ

NCRB Report karnataka listed top in murder cases

ನವದೆಹಲಿ (ಅ. 23): ಶಾಂತಿಯ ನೆಲೆವೀಡು ಎಂದೇ ಪರಿಗಣಿತವಾಗಿರುವ, ಕಾನೂನು- ಸುವ್ಯವಸ್ಥೆಯಲ್ಲಿ ಇತರೆ ರಾಜ್ಯಗಳಿಗೆ ಮಾದರಿಯಾಗಿರುವ ಕರ್ನಾಟಕಕ್ಕೆ ಕೊಲೆ ಕಳಂಕ ಅಂಟಿಕೊಂಡಿದೆ. ಕೊಲೆಗಳ ಸಂಖ್ಯೆಯಲ್ಲಿ ದಕ್ಷಿಣ ಭಾರತದಲ್ಲೇ ಕರ್ನಾಟಕ ಪ್ರಥಮ ಸ್ಥಾನ ಪಡೆದಿರುವ ಅತ್ಯಂತ ಕಳವಳಕಾರಿ ವಿಚಾರ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್‌ಸಿಆರ್‌ಬಿ)ಯು 2017ನೇ ಸಾಲಿನ ಅಪರಾಧ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕರ್ನಾಟಕದ ಕುರಿತಾದ ಅಂಶಗಳು ಬೆಚ್ಚಿಬೀಳಿಸುವಂತಿವೆ. ದೇಶದಲ್ಲಿ ಅತಿ ಹೆಚ್ಚು ಕೊಲೆಗಳು ನಡೆಯುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದ್ದರೆ, ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನ ಪಡೆದಿದೆ.

ಕಂಟೇನರ್ ನಲ್ಲಿ 39 ಹೆಣಗಳು: ಬೆಚ್ಚಿ ಬಿತ್ತು ವಿಶ್ವದ ಪ್ರಮುಖ ನಗರ!

2017ನೇ ಸಾಲಿನಲ್ಲಿ ದೇಶಾದ್ಯಂತ 28653 ಕೊಲೆಗಳು ನಡೆದಿವೆ. ಆ ಪೈಕಿ 1384 ಪ್ರಕರಣಗಳೊಂದಿಗೆ ಕರ್ನಾಟಕ 5ನೇ ಸ್ಥಾನ ಪಡೆದಿದೆ. ಈ ಪೈಕಿ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲೇ 235 ಹತ್ಯೆ ಪ್ರಕರಣಗಳು ನಡೆದಿವೆ.

ಉಳಿದಂತೆ ಉತ್ತರಪ್ರದೇಶ (4324) ಪ್ರಥಮ ಸ್ಥಾನದಲ್ಲಿದ್ದರೆ, ಬಿಹಾರ (2803) ದ್ವಿತೀಯ, ಮಹಾರಾಷ್ಟ್ರ (2103) ತೃತೀಯ ಹಾಗೂ ಪಶ್ಚಿಮ ಬಂಗಾಳ (2001) ನಾಲ್ಕನೇ ಸ್ಥಾನದಲ್ಲಿವೆ.

ಜಾತಿವಾರು ಕೊಲೆಯಲ್ಲೂ ಕುಖ್ಯಾತಿ:

‘ಕುಲ ಕುಲವೆಂದು ಹೊಡೆದಾಡದಿರಿ..’ ಎಂಬ ಸಂದೇಶ ನೀಡಿದ ಕನಕದಾಸರ ನಾಡು ಕರ್ನಾಟಕ ಜಾತಿಗಾಗಿ ನಡೆಯುವ ಹತ್ಯೆಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನ ಪಡೆದಿದೆ. ಜಾತಿ ವಿಚಾರಕ್ಕಾಗಿ ದೇಶದಲ್ಲಿ 56 ಕೊಲೆಗಳು ನಡೆದಿವೆ. ಆ ಪೈಕಿ 29 ಪ್ರಕರಣಗಳೊಂದಿಗೆ ಉತ್ತರಪ್ರದೇಶ ಪ್ರಥಮ ಸ್ಥಾನದಲ್ಲಿದ್ದರೆ, 8 ಪ್ರಕರಣಗಳೊಂದಿಗೆ ಕರ್ನಾಟಕ 2ನೇ ಸ್ಥಾನ ಗಳಿಸಿದೆ.

ಮಾನವ ಬಲಿಯಲ್ಲೂ ಮುಂದೆ:

2017ನೇ ಸಾಲಿನಲ್ಲಿ 19 ಮಾನವ ಬಲಿ ಪ್ರಕರಣಗಳು ವರದಿಯಾಗಿವೆ. ತಲಾ 5 ಪ್ರಕರಣಗಳೊಂದಿಗೆ ಕರ್ನಾಟಕ, ಹರಾರ‍ಯಣ ಹಾಗೂ ಮಹಾರಾಷ್ಟ್ರ ಈ ಅಪರಾಧದಲ್ಲಿ ಮುಂಚೂಣಿಯಲ್ಲಿವೆ.

ನೀರಿನ ವಿಚಾರಕ್ಕಾಗಿ ದೇಶದಲ್ಲಿ 50 ಹತ್ಯೆಗಳು ನಡೆದಿದ್ದು, ತಲಾ 14 ಪ್ರಕರಣಗಳೊಂದಿಗೆ ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿವೆ. 5 ಪ್ರಕರಣದೊಂದಿಗೆ ಗುಜರಾತ್‌, ತಲಾ 4 ಪ್ರಕರಣಗಳೊಂದಿಗೆ ಪಂಜಾಬ್‌ ಹಾಗೂ ಬಿಹಾರ ನಂತರದ ಸ್ಥಾನ ಪಡೆದುಕೊಂಡಿವೆ. ತಲಾ 2 ಪ್ರಕರಣಗಳೊಂದಿಗೆ ಕರ್ನಾಟಕ ಹಾಗೂ ಉತ್ತರಪ್ರದೇಶ ಕೂಡ ಸ್ಥಾನ ಗಳಿಸಿವೆ.

ಕೊಲೆಗಳು

ವರ್ಷ ಹತ್ಯೆಗಳ ಸಂಖ್ಯೆ

2015 32,127

2016 30,450

2017 28,653

ರಾಜ್ಯವಾರು ಸಂಖ್ಯೆ

ಉತ್ತರಪ್ರದೇಶ- 4324

ಬಿಹಾರ- 2803

ಮಹಾರಾಷ್ಟ್ರ- 2103

ಪಶ್ಚಿಮ ಬಂಗಾಳ- 2001

ಕರ್ನಾಟಕ- 1384

Latest Videos
Follow Us:
Download App:
  • android
  • ios