ಅಮೆರಿಕದಲ್ಲಿ ಪ್ರತಿ ಎರಡೂವರೆ ನಿಮಿಷಕ್ಕೊಂದು ಸಾವು: ವುಹಾನ್ ಹಿಂದಿಕ್ಕಿದ ನ್ಯೂಯಾರ್ಕ್!
ಕೊರೋನಾ ತಾಂಡವ, ಚೀನಾ ಬಳಿಕ ಅಮೆರಿಕಾದಲ್ಲಿಹೆಚ್ಚಾಯ್ತು ಮೃತರ ಸಂಖ್ಯೆ| ವುಹಾನ್ ಆಗಿ ಮಾರ್ಪಾಡಾಗುತ್ತಿದೆ ಅಮೆರಿಕಾದ ನ್ಯೂಯಾರ್ಕ್| ಶವಗಳ ಸಮಾಧಿ ಮಾಡಲೂ ಪರದಾಡುತ್ತಿರುವ ಅಮೆರಿಕಾ
ನ್ಯೂಯಾರ್ಕ್(ಏ. 01): ಕೊರೋನಾ ಅಟಟ್ಟಹಾಸಕ್ಕೆ ನಲುಗಿರುವ ಅಮೆರಿಕಾದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇಲ್ಲಿ ಪ್ರತಿ ಎರಡೂವರೆ ನಿಮಿಷಕ್ಕೆ ಒಬ್ಬರಂತೆ ಜನರು ಸಾವನ್ನಪ್ಪುತ್ತಿದ್ದಾರೆ. ಈ ಮಹಾಮಾರಿಗೆ ಅತಿ ಹೆಚ್ಚು ನಲುಗಿದ ನಗರ ಎಂದರೆ ನ್ಯೂಯಾರ್ಕ್, ಇದು ಸಾವಿನ ಸಂಖ್ಯೆಯಲ್ಲಿ ಚೀನಾದ ಹುಬೇ ಪ್ರ್ಯಾಂತ್ಯವನ್ನೇ ಮೀರಿಸಿದೆ. ಇಲ್ಲಿ ಈವರೆಗೂ ಒಟ್ಟು 3890 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ ಹಾಗೂ ಈ ಸಂಖ್ಯೆ ಏರುತ್ತಲೇ ಇದೆ.
ಇನ್ನು ಕೇವಲ ನ್ಯೂಯಾರ್ಕ್‌ನಲ್ಲಷ್ಟೇ ಪ್ರತಿ ಆರು ನಿಮಿಷಕ್ಕೆ ಒಬ್ಬರು ಮೃತಪಡುತ್ತಿದ್ದಾರೆ. ಇಲ್ಲಿ ಸಾವನ್ನಪ್ಪಿದವರ ಸಂಖ್ಯೆ ಒಂದು ಸಾವಿರ ದಾಟಿದೆ. ನಿನ್ನೆ ಇಲ್ಲಿ ಬರೋಬ್ಬರಿ 182 ಮಂದಿ ಮೃತಪಟ್ಟಿದ್ದಾರೆ. ನ್ಯೂಯಾರ್ಕ್‌ನಲ್ಲಿ 41,771 ಮಂದಿ ಸೋಂಕಿತರಿದ್ದಾರೆ. ಹೀಗಾಗಿ ಇಡೀ ವಿಶ್ವದಲ್ಲೇ ನ್ಯೂಯಾರ್ಕ್ ಅತಿ ದೊಡ್ಡ ಕೂಪವಾಗಿ ಮಾರ್ಪಾಡಾಗಿದೆ.
"
ಅಂತ್ಯಕ್ರಿಯೆ ನೆರವೇರಿಸಲು ಸಂಕಷ್ಟ
ನ್ಯೂಯಾರ್ಕ್‌ನಲ್ಲೆ ಮೃತರ ಸಂಖ್ಯೆ ಎಷ್ಟು ವೇಗವಾಗಿ ಹೆಚ್ಚುತ್ತಿದೆ ಎಂದರೆ ಅವರನ್ನು ಸಮಾಧಿ ಮಾಡಲೂ ಸಮಸ್ಯೆಯುಂಟಾಗುತ್ತಿದೆ. ಕಳೆದ ಮೂವತ್ತು ವರ್ಷಗಳಿಂದ ಶವಗಳನ್ನು ಹೂಳುವ ಕೆಲಸ ಮಾಡುವ ಕಂಪನಿಯ ಸಿಇಓ ಮರ್ಮೋ ಈ ಸಂಬಂಧ ಪ್ರತಿಕ್ರಿಯಿಸಿದ್ದು, ಇಡೀ ನ್ಯೂಯಾರ್ಕ್‌ನಲ್ಲೇ ಇಷ್ಟು ಶವಗಳನ್ನು ಸಮಾಧಿ ಮಾಡಬಲ್ಲ ಒಂದು ಖಾಲಿ ನಿವೇಶನ ಇಲ್ಲ ಎಂದಿದ್ದಾರೆ. ಇನ್ನು ಇಲ್ಲಿನ ಆಸ್ಪತ್ರೆಗಳ ಬಹುತೇಕ ಎಲ್ಲಾ ಶವಾಗಾರಗಳು ತುಂಬಿವೆ. ಹೀಗಿರುವಾಗ ಮೃತದೇಹಗಳನ್ನು ಹೂಳುವುದು ಕೂಡಾ ಸಂಕಷ್ಟ ತರಲಿದೆ ಎಂಬುವುದು ಮರ್ಮೋ ಮಾತಾಗಿದೆ.