ದೇಶದಿಂದ ಪರಾರಿಗೆ ತಬ್ಲೀಘಿಗಳ ಪ್ರಯತ್ನ| ಚೆನ್ನೈಲ್ಲಿ 10, ದಿಲ್ಲಿಯಲ್ಲಿ 8 ಮಂದಿ ವಶ
ನವದೆಹಲಿ/ಚೆನ್ನೈ(ಏ.06): ಭಾರತದಲ್ಲಿ ಕೊರೋನಾ ಸೋಂಕು ಹರಡುವಿಕೆಯ ತಾಣಗಳಲ್ಲಿ ಒಂದಾದ ತಬ್ಲೀಘಿ ಜಮಾತ್ ಸಂಘಟನೆಯ ಧರ್ಮಸಭೆಯಲ್ಲಿ ಪಾಲ್ಗೊಂಡು ಮಲೇಷ್ಯಾಗೆ ಪರಾರಿಯಾಗಲು ಯತ್ನಿಸಿದ 18 ಮಂದಿ ಮಲೇಷ್ಯಾ ನಾಗರಿಕರನ್ನು ಚೆನ್ನೈ ಹಾಗೂ ದಿಲ್ಲಿ ವಿಮಾನ ನಿಲ್ದಾಣಗಳಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
Add Asianetnews Kannada as a Preferred Source

ಲಾಕ್‌ಡೌನ್ ಕಾರಣ ದಿಲ್ಲಿ ಹಾಗೂ ತಮಿಳುನಾಡಿನ ವಿವಿಧೆಡೆ ಅನೇಕ ಮಲೇಷ್ಯಾ ನಾಗರಿಕರು ಸಿಲುಕಿದ್ದರು. ಇವರನ್ನು ಸ್ವದೇಶಕ್ಕೆ ಮರಳಿಸುವ ಉದ್ದೇಶದಿಂದ ಮಲೇಷ್ಯಾ ಸರ್ಕಾರದ ಕೋರಿಕೆಯ ಮೇರೆಗೆ ಭಾರತ ಸರ್ಕಾರ ಮಲೇಷ್ಯಾಗೆ 2 ವಿಶೇಷ ವಿಮಾನಗಳನ್ನು ಭಾನುವಾರ ಚೆನ್ನೈ ಹಾಗೂ ದಿಲ್ಲಿಯಿಂದ ಕಳಿಸಿತು.
ಈ ವೇಳೆ ದಿಲ್ಲಿಯಿಂದ 8 ಮಂದಿ ಹಾಗೂ ಚೆನ್ನೈನಿಂದ 10 ಮಂದಿ ತಬ್ಲೀಘಿಗಳು ಮಲೇಷ್ಯಾಗೆ ಪರಾರಿಯಾಗಲು ಯತ್ನಿಸಿದ್ದರು, ಅವರನ್ನು ವಶಕ್ಕೆ ಪಡೆಯಲಾಗಿದೆ. ಇವರು ಪ್ರವಾಸಿ ವೀಸಾ ಅಡಿ ಭಾರತಕ್ಕೆ ಬಂದು ಅಕ್ರಮವಾಗಿ ತಬ್ಲೀಘಿ ಸಭೆಯಲ್ಲಿ ಪಾಲ್ಗೊಂಡ ಆರೋಪ ಹೊತ್ತಿದ್ದಾರೆ.
