Asianet Suvarna News Asianet Suvarna News

ದೆಹಲಿಯಿಂದ ಕೊರೋನಾ ನಂಜು: ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆ ಏರಿಕೆಯಾಯ್ತು ಮತ್ತಷ್ಟು

ಒಂದೆಡೆ ಲಾಕ್‌ಡೌನ್ ಯಾವಾಗ ಮುಗಿದಿತ್ತೋ ಎನ್ನುವುದನ್ನು ಕೂಲಿ ಕಾರ್ಮಿಕರು ಎದುರು ನೋಡುತ್ತಿದ್ರೆ, ಮತ್ತೊಂದೆಡೆ ರಾಜ್ಯದಲ್ಲಿ ಮತ್ತೆ 12 ಕೇಸ್‌ಗಳು ಪತ್ತೆಯಾಗಿದ್ದು, ಕೊರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. 

12 New covid 19 positive On April 7th Total cases rises to 175 in Karnataka
Author
Bengaluru, First Published Apr 7, 2020, 4:01 PM IST

ಬೆಂಗಳೂರು, (ಏ.07): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು (ಮಂಗಳವಾರ) ಮತ್ತೆ 12 ಹೊಸ ಪ್ರಕರಣಗಳು ಪತ್ತೆಯಾಗಿವೆ. 

ಈ ಮೂಲಕ ಸೋಂಕಿತರ ಸಂಖ್ಯೆ 175ಕ್ಕೆ ಏರಿಯಾಗಿದ್ರೆ, ಇದುವರೆಗೆ 25 ಮಂದಿ ಗುಣಮುಖರಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಿದೆ.

ತಬ್ಲೀಘಿಗಳಿಂದ ಕೊರೋನಾ ಸೋಂಕಿತರು ಡಬಲ್!

ಬೆಂಗಳೂರಿನಲ್ಲಿ 3, ಬೆಂಗಳೂರು ಗ್ರಾಮಾಂತರದಲ್ಲಿ 1, ಮಂಡ್ಯದಲ್ಲಿ 3,  ಕಲಬುರಗಿಯಲ್ಲಿ 2, ಬಾಗಲಕೋಟೆಯಲ್ಲಿ 2 ಹಾಗೂ ಗದಗನಲ್ಲಿ 1 ಹೊಸ ಪ್ರಕರಣ ಮಂಗಳವಾರ ಪತ್ತೆಯಾಗಿವೆ.

ಇನ್ನು ಇಂದು ಪತ್ತೆಯಾದ ಪ್ರಕರಣಗಳ ಪೈಕಿಯಲ್ಲಿ 7 ಪ್ರಕರಣಗಳು ತಬ್ಲೀಘಿಗೆ ಸಂಬಂಧಿಸಿದವುಗಳಾಗಿವೆ.  ದೆಹಲಿಯ ನಿಜಾಮುದ್ದೀನ್ ನಲ್ಲಿ ಮಾರ್ಚ್ 13ರಿಂದ 18ರವರೆಗೂ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಮೂವರು ಹಾಗೂ ಬಾಗಲಕೋಟೆಯ ಮುಧೋಳ್ ನ ವ್ಯಕ್ತಿಯೊಬ್ಬರಲ್ಲಿ ಕೊರೋ ನಾವೈರಸ್ ಸೋಂಕು ದೃಢಪಟ್ಟಿದೆ.

'ದೆಹಲಿಗೆ ಹೋಗಿ ಬಂದವರಿಂದಲೇ ಕೊರೋನಾ ವೈರಸ್‌ ಹೆಚ್ಚಳ'

ಮತ್ತೊಂದೆಡೆ  ಮಂಡ್ಯದಲ್ಲಿ ತಬ್ಲೀಘಿ ಜೊತೆಗೆ ಸಂಪರ್ಕದಲ್ಲಿದ್ದ ಮೂವರಲ್ಲಿಯೂ ಸೋಂಕು ಪತ್ತೆಯಾಗಿದೆ. 

* 164ನೇ ಸೋಂಕಿತ ಬಾಗಲಕೋಟೆಯ ಮುಧೋಳ ತಾಲೂಕಿನ 33 ವರ್ಷದ ಯುವಕನಾಗಿದ್ದು, ಈತ ದೆಹಲಿಯಲ್ಲಿ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಪಾಲ್ಗೊಂಡಿದ್ದ. ಈತನನ್ನು ಬಾಗಲಕೋಟೆ ಆಸ್ಪತ್ರೆಯಲ್ಲಿ ಐಸೋಲೇಷನ್‌ನಲ್ಲಿ ಇಡಲಾಗಿದೆ.

* 165ನೇ ಸೋಂಕಿತ ಬಾಗಲಕೋಟೆಯವನಾಗಿದ್ದು, ಸೋಂಕಿತ 125ನೇ ನೆರೆಹೊರೆಯವನಾಗಿದ್ದಾನೆ. ಈತನನ್ನು ಅದೇ ಆಸ್ಪತ್ರೆಗೆ ದಾಖಲಿಸಲಾಗಿದೆ.

* 166ನೇ ಸೋಂಕಿತ ಗದಗದ 80 ವರ್ಷ ಪ್ರಾಯದ ವೃದ್ಧೆಯಾಗಿದ್ದು, ಯಾವುದೇ ಟ್ರವೆಲ್ ಹಿಸ್ಟರಿ ಇಲ್ಲ ಕಂಡುಬಂದಿಲ್ಲ. ಆದರೂ ಸೋಂಕು ತಗುಲಿರುವುದು ಆರೋಗ್ಯ ಇಲಾಖೆಗೆ ಅಚ್ಚರಿ ಮೂಡಿಸಿದೆ.

ತಬ್ಲೀಘಿಗಳ ಪತ್ತೆಗೆ ಕೇಂದ್ರದ ಹೊಸ ಅಸ್ತ್ರ!

* 167, 168 ಮತ್ತು169ನೇ ಸೋಂಕಿತರು ಬೆಂಗಳೂರಿನ ನಿವಾಸಿಯಾಗಿದ್ದು, ದೆಹಲಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಾಗಿದ್ದಾರೆ. 

* 170ನೇ ಸೋಂಕಿತ 68 ವರ್ಷ ಪ್ರಾಯದ ಬೆಂಗಳೂರು ನಿವಾಸಿಯಾಗಿದ್ದು, ಅವರು ದುಬೈಯಿಂದ ಹಿಂದಿರುಗಿದ ಟ್ರವೆಲ್ ಹಿಸ್ಟರಿ ಇದೆ.

* 171, 172, 173 ನೇ ಸೋಂಕಿತರು ಮಂಡ್ಯದ ಕ್ರಮವಾಗಿ 32 ಮತ್ತು 36, 65 ವರ್ಷಗಳ ಪುರುಷ ವ್ಯಕ್ತಿಗಳಾಗಿದ್ದು, ಇವರು ರೋಗಿ 134, 135, 136, 137, 138ನೇ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದರು. ಅವರನ್ನು ಕೂಡ ಮಂಡ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ.

* 174ನೇ ಸೋಂಕಿತೆ ಕಲಬುರಗಿಯ 28 ವರ್ಷ ಪ್ರಾಯದ ಮಹಿಳೆಯಾಗಿದ್ದು, 124ನೇ ರೋಗಿಯ ಸೊಸೆ. ಇವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

* 175ನೇ ಕೇಸ್ ಕಲಬುರಗಿಯ 57 ವರ್ಷ ಪ್ರಾಯದ ಪುರುಷ ವ್ಯಕ್ತಿಯಾಗಿದ್ದು, ಇವರು ಕೂಡ ಉಸಿರಾಟದ ಸಮಸ್ಯೆ ಹೊಂದಿದವರಾಗಿದ್ದಾರೆ. ಇವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಿದೆ.

Follow Us:
Download App:
  • android
  • ios