Asianet Suvarna News Asianet Suvarna News

ಸಾಕು ಪ್ರಾಣಿಗಳಿಂದ ಕೊರೋನಾ ಹರಡಲ್ಲ, ಬೀದಿಗೆ ಬಿಡಬೇಡಿ ಎಂದರೂ ಜನ ಕೇಳುತ್ತಿಲ್ಲ!

ಕೊರೋನಾ ವೈರಸ್ ಕುರಿತು ಒಂದಷ್ಟ ಜನರಿಗೆ ನಿರ್ಲಕ್ಷ್ಯ. ಮತ್ತಷ್ಟು ಜನರಿಗೆ ಅತೀಯಾದ ಭಯ, ಇನ್ನೂ ಕೆಲವರಿಗೆ ಅರ್ಥವೇ ಆಗಿಲ್ಲ. ಸರಿಯಾಗಿ ಅರ್ಥಮಾಡಿಕೊಳ್ಳದೇ ಸುಖಾಸುಖಮ್ಮನೆ ಭಯಪಡುವ ಮಂದಿ ಇದೀಗ ತಮ್ಮ ಮನೆಯಲ್ಲಿನ ಸಾಕು ಪ್ರಾಣಿಗಳಿಂದ ಕೊರೋನಾ ಹರಡುತ್ತದೆ ಎಂದು ಮೂಕ ಪ್ರಾಣಿಗಳನ್ನು ಬೀದಿಗ ತಂದು ಬಿಡುತ್ತಿದ್ದಾರೆ. ಅದೆಷ್ಟೇ ಮನವಿ ಮಾಡಿದರೂ ಜನರಿಗೆ ಅರ್ಥವೇ ಆಗುತ್ತಿಲ್ಲ. 

Bjp leader animal activist Maneka gandhi Request people for don't leave your pet on road side due to coronavirus
Author
Bengaluru, First Published Mar 23, 2020, 7:38 PM IST

ನವದೆಹಲಿ(ಮಾ.23): ಸಾಕು ಪ್ರಾಣಿಗಳಿಂದ ಕೊರೋನಾ ವೈರಸ್ ಹರಡುವುದಿಲ್ಲ. ಹೀಗೆ ಹರಡಿದ ಊದಾಹರಣೆಗಳೂ ಇಲ್ಲ. ಆದರೆ ಜನ ಮಾತ್ರ ಕೊರೋನಾ ವೈರಸ್ ಕುರಿತು ಸರಿಯಾಗಿ ಅರ್ಥಮಾಡಿಕೊಳ್ಳುವ ಹಾಗೂ ತೆಗೆದುಕೊಳ್ಳಬೇಕಾದ ಮುುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಿಲ್ಲ. ಸಾಕು ಪ್ರಾಣಿಗಳಿಂದ ಕೊರೋನಾ ಹರಡುತ್ತದೆ ಅನ್ನೋ ಭಯದಿಂದ ಮೂಕ ಪ್ರಾಣಿಗಳನ್ನು ಬೀದಿಗೆ ತಂದು ಬಿಡಲಾಗುತ್ತಿದೆ. ಮೂಕ ಪ್ರಾಣಿಗಳು ಆಹಾರ, ನೀರು ಇಲ್ಲದೆ ಅನಾಥವಾಗಿ ತಿರುಗಾಡುತ್ತಿರುವ ದೃಶ್ಯಗಳು ಮನಕಲುಕುವಂತಿದೆ.

ಇದನ್ನೂ ಓದಿ: ಕೋಣ ಬಲಿಗೆ ಅಧಿಕಾರಿಗಳ ತಡೆ: ಭಕ್ತರ ಹಟ, ದೇಗುಲಕ್ಕೆ ಬೀಗ

ಈಗಾಗಲೆ ಪೆಟಾ ಸಾಕು ಪ್ರಾಣಿಗಳನ್ನು ಬೀದಿಗೆ ಬಿಡಬೇಡಿ ಎಂದು ಮನವಿ ಮಾಡಿದರೂ ಜನರು ಕೇಳುತ್ತಿಲ್ಲ. ರಾತ್ರಿವೇಳೆ, ಮುಂಜಾನೆ ಸಮಯದಲ್ಲಿ ಜನರು ತಮ್ಮ ತಮ್ಮ ಸಾಕು ಪ್ರಾಣಿಗಳನ್ನು ದೂರ ಪ್ರದೇಶದಲ್ಲಿ, ಬೀದಿ ಬದಿಯಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಜನರು ಮಾಡುತ್ತಿರುವ ಅತೀ ದೊಡ್ಡ ತಪ್ಪು ಇದು. ಈ ಕುರಿತು ಪ್ರಾಣಿ ದಯಾ ಸಂಘಟನೆಯಲ್ಲಿ ಸಕ್ರಿಯವಾಗಿರುವ, ಬಿಜೆಪಿ ನಾಯಕಿ ಮೇನಾಕ ಗಾಂಧಿ ಸಂಸತ್ತಿನಲ್ಲಿ ಎಲ್ಲರ ಗಮನಸೆಳೆದಿದ್ದಾರೆ.

ಪ್ರಾಣಿಗಳಿಂದ ಕೊರೋನಾ ವೈರಸ್ ಹರಡುವುದಿಲ್ಲ. ಹೀಗಾಗಿ ಮನೆಯಲ್ಲಿನ ಸಾಕು ಪ್ರಾಣಿಗಳನ್ನು ಬೀದಿಗೆ ಬಿಡಬೇಡಿ ಎಂದು ಮನವಿ ಮಾಡಿದ್ದಾರೆ. ಕೊರೋನಾ ವೈರಸ್ ಕುರಿತು ಜನರು ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳನ್ನು ಪಾಲಿಸಿ. ಇದರ ಬದಲು ಸಾಕು ಪ್ರಾಣಿಗಳಿಂದ ಮನುಷ್ಯರಿಗೆ ಯಾವುದೇ ಸಮಸ್ಯೆ ಇಲ್ಲ. ಪ್ರಬುದ್ಧ ನಾಗರೀಕರಂತೆ ವರ್ತಿಸಿ ಎಂದು ಮೇನಕಾ ಗಾಂಧಿ ಮನವಿ ಮಾಡಿದ್ದಾರೆ. 

Follow Us:
Download App:
  • android
  • ios