19 ವರ್ಷದ ಭಾರತದ ಯುವ ಚೆಸ್ ಚಾಂಪಿಯನ್ ಡಿ.ಗುಕೇಶ್, ನಾರ್ವೆ ಚೆಸ್ ಟೂರ್ನಿಯಲ್ಲಿ ವಿಶ್ವ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಮೊದಲ ಕ್ಲಾಸಿಕಲ್ ಗೆಲುವು ದಾಖಲಿಸಿದ್ದಾರೆ. ಈ ಸೋಲಿನಿಂದ ಕಾರ್ಲ್ಸನ್ ಬೋರ್ಡ್ಗೆ ಪಂಚ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು ಟ್ರೋಲ್ಗೆ ಒಳಗಾಗಿದ್ದಾರೆ.
12ನೇ ಆವೃತ್ತಿ ಪ್ರೊ ಕಬಡ್ಡಿಲಿ ಆಟಗಾರರ ಹರಾಜು ಪೂರ್ಣಗೊಂಡಿದ್ದು, 200ಕ್ಕೂ ಹೆಚ್ಚು ಆಟಗಾರರು ವಿವಿಧ ತಂಡಗಳಿಗೆ ಸೇರ್ಪಡೆಯಾಗಿದ್ದಾರೆ. 10 ಆಟಗಾರರು 1 ಕೋಟಿಗೂ ಹೆಚ್ಚು ಮೊತ್ತ ಪಡೆದಿದ್ದು, ಒಟ್ಟು 537.90 ಕೋಟಿ ವ್ಯಯವಾಗಿದೆ. ಬೆಂಗಳೂರು ಬುಲ್ಸ್ ತಂಡದಲ್ಲಿ ಈ ಬಾರಿ 3 ಕನ್ನಡಿಗರು ಸ್ಥಾನ ಪಡೆದಿದ್ದಾರೆ.
ಮೊಹಮ್ಮದ್ ಸಲಾಹ್ 29 ಗೋಲುಗಳೊಂದಿಗೆ 2024-25 ಪ್ರೀಮಿಯರ್ ಲೀಗ್ ಗೋಲ್ಡನ್ ಬೂಟ್ ಗೆದ್ದರು. ಲಿವರ್ಪೂಲ್ ಸ್ಟಾರ್ ಹಿಂದಿರುವ ಟಾಪ್ 5 ಸ್ಕೋರರ್ಗಳನ್ನು ನೋಡೋಣ.
ಅಪ್ರಾಪ್ತ ಕುಸ್ತಿಪಟು ನೀಡಿದ್ದ ದೂರಿನನ್ವಯ ದಾಖಲಾಗಿದ್ದ ಪೋಕ್ಸೋ ಕೇಸಲ್ಲಿ ಬ್ರಿಜ್ ಭೂಷಣ್ ದೋಷ ಮುಕ್ತರಾಗಿದ್ದಾರೆ. ದೆಹಲಿ ಪೊಲೀಸರು ಸಲ್ಲಿಸಿದ್ದ ಬಿ ರಿಪೋಟ್ ಅನ್ನು ಪಟಿಯಾಲ ಹೈಕೋರ್ಟ್ ಅಂಗೀಕರಿಸಿದೆ.
ಮೈಸೂರು ಮೂಲದ 17 ವರ್ಷದ ಡಿಯೊನ್ ಗೌಡ, ಫಾರ್ಮುಲಾ ರೀಜಿಯನಲ್ ಯುರೋಪಿಯನ್ ಚಾಂಪಿಯನ್ಶಿಪ್ (FRECA) ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ಗುರಿ ಫಾರ್ಮುಲಾ 1 ತಲುಪುವುದು ಮಾತ್ರವಲ್ಲ, ಮುಂದಿನ ತಲೆಮಾರಿಗೆ ದಾರಿ ತೋರಿಸುವುದೂ ಆಗಿದೆ.
ಫಾರ್ಮುಲಾ 2 ಚಾಂಪಿಯನ್ಶಿಪ್ನ ಮೊನಾಕೊ ಸ್ಪ್ರಿಂಟ್ ರೇಸ್ನಲ್ಲಿ ಭಾರತದ ಕುಶ್ ಮೈನಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಮೊನಾಕೊದಲ್ಲಿ F2 ರೇಸ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.