Asianet Suvarna News Asianet Suvarna News

ಬಳ್ಳಾರಿಯಿಂದ ಬೆಂಗಳೂರಿನ ತನಕ; ರವಿ ಬೆಳಗೆರೆ ಜೀವನ ಚರಿತ್ರೆ

ಒಂದು ಸಿನಿಮಾವನ್ನೇ ಮಾಡುವಂತಿದೆ ರವಿ ಬೆಳಗೆರೆ ಜೀವನ ಕಥೆ.1958 ರಲ್ಲಿ ಬಳ್ಳಾರಿಯಲ್ಲಿ ಜನನ. ಇತಿಹಾಸ ಉಪನ್ಯಾಸಕನಾಗಿ ವೃತ್ತಿ ಜೀವನ ಆರಂಭ. ಬಳ್ಳಾರಿ, ಹಾಸನ, ಹುಬ್ಬಳ್ಳಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 
 

ಬೆಂಗಳೂರು (ನ. 13): ಖ್ಯಾತ ಲೇಖಕ, ಬರಹಗಾರ ರವಿ ಬೆಳಗೆರೆ ಇನ್ನು ನೆನಪು ಮಾತ್ರ. ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಒಂದು ಸಿನಿಮಾವನ್ನೇ ಮಾಡುವಂತಿದೆ ಅವರ ಜೀವನ ಕಥೆ. 1958 ರಲ್ಲಿ ಬಳ್ಳಾರಿಯಲ್ಲಿ ಜನನ. ಇತಿಹಾಸ ಉಪನ್ಯಾಸಕನಾಗಿ ವೃತ್ತಿ ಜೀವನ ಆರಂಭ. ಬಳ್ಳಾರಿ, ಹಾಸನ, ಹುಬ್ಬಳ್ಳಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 

ಬಳ್ಳಾರಿಯಿಂದ ಬೆಂಗಳೂರಿಗೆ ಬರುತ್ತಾರೆ. ಇಲ್ಲಿ ಬೇರೆ ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಾರೆ. ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ.  ಆ ನಂತರ ತಮ್ಮದೇ ಆದ 'ಹಾಯ್ ಬೆಂಗಳೂರು' ಕಟ್ಟುತ್ತಾರೆ. ಕನಸಿನ ಕೂಸು 'ಪ್ರಾರ್ಥನಾ' ಶಾಲೆಯನ್ನು ಶುರು ಮಾಡುತ್ತಾರೆ. ರವಿ ಬೆಳಗೆರೆ ಅವರ ಜೊತೆಗಿನ ಒಡನಾಟವನ್ನು ಅವರ ಆಪ್ತ ಸ್ನೇಹಿತರೊಬ್ಬರು ಮಾತನಾಡಿದ್ದಾರೆ. 

Video Top Stories