Asianet Suvarna News Asianet Suvarna News

Omicron Variant: ಸೋಂಕು ಪತ್ತೆಯಾದವರಲ್ಲಿ ರೋಗಲಕ್ಷಣಗಳಿಲ್ಲ, ತೀವ್ರತೆ ಕಡಿಮೆ ಇದೆ: ಸುಧಾಕರ್

ಒಮಿಕ್ರೋನ್ ವೈರಸ್ (Omicron Variant)  ಬಗ್ಗೆ ಆತಂಕ ಹೆಚ್ಚುತ್ತಿರುವ ನಡುವೆ, ಭಾನುವಾರ ಒಂದೇ ದಿನ ಭಾರತದಲ್ಲಿ 17 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಸೋಂಕಿತ ವೈದ್ಯರೊಬ್ಬರ ಸಂಪರ್ಕದಲ್ಲಿದ್ದ ಐವರ ಜಿನೋಮಿಕ್ ಸೀಕ್ವೆನ್ಸಿಂಗ್ ವರದಿ ಇಂದು ಬರಲಿದೆ. 
 

ಬೆಂಗಳೂರು (ಡಿ. 06): ಒಮಿಕ್ರೋನ್ ವೈರಸ್ (Omicron Variant)  ಬಗ್ಗೆ ಆತಂಕ ಹೆಚ್ಚುತ್ತಿರುವ ನಡುವೆ, ಭಾನುವಾರ ಒಂದೇ ದಿನ ಭಾರತದಲ್ಲಿ 17 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಸೋಂಕಿತ ವೈದ್ಯರೊಬ್ಬರ ಸಂಪರ್ಕದಲ್ಲಿದ್ದ ಐವರ ಜಿನೋಮಿಕ್ ಸೀಕ್ವೆನ್ಸಿಂಗ್ ವರದಿ ಇಂದು ಬರಲಿದೆ. 

Omicron Threat: ಶಾಲೆ ಬಂದ್ ಮಾಡುವ ಪರಿಸ್ಥಿತಿ ಬಂದ್ರೆ ಸರ್ಕಾರ ಸಿದ್ಧ, ಆತಂಕ ಬೇಡ: ಬಿ ಸಿ ನಾಗೇಶ್

'ಸೋಂಕಿತ ವೈದ್ಯರ ಸಂಪರ್ಕದಲ್ಲಿದ್ದ ಐವರಲ್ಲಿ ಯಾವುದೇ ಲಕ್ಷಣಗಳಿಲ್ಲ. ತೀವ್ರತೆ, ಸಮಸ್ಯೆ ಕಂಡು ಬಂದಿಲ್ಲ. ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸಮಾಧಾನಕರ ವಿಚಾರ. ಅವರು 2 ಡೋಸ್ ತೆಗೆದುಕೊಂಡಿದ್ದಾರೆ. 2 ಡೋಸ್ ತೆಗೆದುಕೊಂಡವರಿಗೆ ತೀವ್ರತೆ ಕಡಿಮೆ ಇರುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಎಲ್ಲರೂ 2 ಡೋಸ್ ಹಾಕಿಸಿಕೊಳ್ಳಿ' ಎಂದು ಡಾ. ಸುಧಾಕರ್ ಹೇಳಿದ್ದಾರೆ. 
 

Video Top Stories