ಇಂದು ಕರ್ನಾಟಕ ಬಂದ್; ರಾಜಧಾನಿಯಲ್ಲಿ ಹೀಗಿದೆ ಬಂದ್ ಎಫೆಕ್ಟ್!

ಮರಾಠ ಸಮುದಾಯ ನಿಗಮ ಸ್ಥಾಪನೆ ವಿರುದ್ಧ ವಿವಿಧ ಕನ್ನಡ ಪರ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ರೈತ ಸಂಘ ಹಾಗೂ ಅನೇಕ ವ್ಯಾಪಾರಿ ಸಂಘಟನೆಗಳು ಬಂದ್‌ಗೆ ನೈತಿಕ ಬೆಂಬಲ ಮಾತ್ರ ವ್ಯಕ್ತಪಡಿಸಿ ಎಂದಿನಂತೆ ಅಂಗಡಿ ಮುಂಗಟ್ಟು ತೆರೆಯುವುದಾಗಿ ಹೇಳಿಕೊಂಡಿವೆ. 

First Published Dec 5, 2020, 9:36 AM IST | Last Updated Dec 5, 2020, 9:58 AM IST

ಬೆಂಗಳೂರು (ಡಿ. 05): ಮರಾಠ ಸಮುದಾಯ ನಿಗಮ ಸ್ಥಾಪನೆ ವಿರುದ್ಧ ವಿವಿಧ ಕನ್ನಡ ಪರ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ರೈತ ಸಂಘ ಹಾಗೂ ಅನೇಕ ವ್ಯಾಪಾರಿ ಸಂಘಟನೆಗಳು ಬಂದ್‌ಗೆ ನೈತಿಕ ಬೆಂಬಲ ಮಾತ್ರ ವ್ಯಕ್ತಪಡಿಸಿ ಎಂದಿನಂತೆ ಅಂಗಡಿ ಮುಂಗಟ್ಟು ತೆರೆಯುವುದಾಗಿ ಹೇಳಿಕೊಂಡಿವೆ. 

ಡಿ. 05 ಕ್ಕೆ ಕರ್ನಾಟಕ ಬಂದ್ , ಡಿ. 08 ಕ್ಕೆ ಭಾರತ ಬಂದ್, ಕೊರೊನಾ ನಡುವೆ ಸಂಕಷ್ಟ!

ಎಂದಿನಂತೆ ಬಿಎಂಟಿಸಿ, ಕೆಎಸ್ಆರ್‌ಟಿಸಿ ರಸ್ತೆಗಿಳಿದಿವೆ. ಓಲಾ, ಊಬರ್, ಟ್ಯಾಕ್ಸಿ ರಸ್ತೆಗಿಳಿಯುವುದಿಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಬಿಗಿ ಬಂದೊಬಸ್ತ್ ಒದಗಿಸಲಾಗಿದೆ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ರೆ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.