ರೈತ ಸಂಘಟನೆಗಳ ನಿರ್ಧಾರಕ್ಕೆ ನಾವು ಬದ್ಧ; ಕರ್ನಾಟಕ ಬಂದ್‌ಗೆ ಕರವೇ ಸಾಥ್
ಸೆ. 25 ರಂದು ಅಂದರೆ ಶುಕ್ರವಾರ ನಡೆಸಬೇಕೆಂದಿರುವ ಕರ್ನಾಟಕ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. 32 ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡುವ ಸಾಧ್ಯತೆ ಇದೆ. ನಾರಾಯಣಗೌಡ ಬಣದ ಕರವೇ ಕೂಡಾ ಬೆಂಬಲ ನೀಡಲು ಮುಂದಾಗಿದೆ. ಓಲಾ- ಉಬರ್, ಆಟೋ, ಟ್ಯಾಕ್ಸಿ ಸಂಘಟನೆಗಳು ಬೆಂಬಲ ನೀಡುವ ಸಾಧ್ಯತೆ ಇದೆ.
ಬೆಂಗಳೂರು (ಸೆ. 22): ಸೆ. 25 ರಂದು ಅಂದರೆ ಶುಕ್ರವಾರ ನಡೆಸಬೇಕೆಂದಿರುವ ಕರ್ನಾಟಕ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. 32 ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡುವ ಸಾಧ್ಯತೆ ಇದೆ. ನಾರಾಯಣಗೌಡ ಬಣದ ಕರವೇ ಕೂಡಾ ಬೆಂಬಲ ನೀಡಲು ಮುಂದಾಗಿದೆ. ಓಲಾ- ಉಬರ್, ಆಟೋ, ಟ್ಯಾಕ್ಸಿ ಸಂಘಟನೆಗಳು ಬೆಂಬಲ ನೀಡುವ ಸಾಧ್ಯತೆ ಇದೆ.
ಸೆ. 25 ಕ್ಕೆ ಕರ್ನಾಟಕ ಬಂದ್? ಹೊರ ಹೋಗುವ ಮುನ್ನ ಇರಲಿ ಎಚ್ಚರ..ಎಚ್ಚರ!
ಕೋಡಿಹಳ್ಳಿ ಚಂದ್ರಶೇಖರ್ ಜೊತೆ ಮಾತುಕತೆ ನಡೆಸಿದ್ದೇನೆ. ರೈತ ಸಂಘಟನೆಗಳ ತೀರ್ಮಾನಕ್ಕೆ ಕರವೇ ಬದ್ಧವಾಗಿರುತ್ತದೆ. ನಾವು ಎಂದಿಗೂ ರೈತರ ಪರ ನಿಲ್ಲುತ್ತೇವೆ. ಬಂದ್ ಆಗುಹೋಗುಗಳ ಬಗ್ಗೆಯೂ ಇನ್ನೊಮ್ಮೆ ವಿಚಾರ ಮಾಡಲು ಕೋಡಿಹಳ್ಳಿ ಚಂದ್ರಶೇಖರ್‌ಗೆ ಹೇಳಿದ್ದೇನೆ. ಅವರು ಏನೇ ನಿರ್ಧಾರ ತೆಗೆದುಕೊಂಡರೂ ಕರವೇ ಅವರ ಜೊತೆ ನಿಲ್ಲುತ್ತದೆ' ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.