Asianet Suvarna News Asianet Suvarna News

Flag Row: ಕಾಂಗ್ರೆಸ್ ನಡೆ ರಾಜಭವನದೆಡೆ, ಈಶ್ವರಪ್ಪ ಮೇಲೆ ಕ್ರಮಕ್ಕೆ ರಾಜ್ಯಪಾಲರಿಗೆ ಮನವಿ

ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ವಿಚಾರ ಇಂದು ಸದನದಲ್ಲಿ ಪ್ರತಿಧ್ವನಿಸಲಿದೆ. ಬಿಜೆಪಿ- ಕಾಂಗ್ರೆಸ್ ನಾಯಕರ ನಡುವೆ ಚಕಮಕಿ ನಡೆಯಲಿದೆ. ಈಶ್ವರಪ್ಪ ಕಲಾಪಕ್ಕೆ ಬಂದ್ರೆ ವಿಧಾನಸಭೆಯಲ್ಲಿ ಗದ್ದಲವಾಗುವ ಎಲ್ಲಾ ಸಾಧ್ಯತೆಗಳಿವೆ. 
 

First Published Feb 22, 2022, 1:24 PM IST | Last Updated Feb 22, 2022, 1:24 PM IST

ಬೆಂಗಳೂರು (ಫೆ. 22): ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ವಿಚಾರ ಇಂದು ಸದನದಲ್ಲಿ ಪ್ರತಿಧ್ವನಿಸಲಿದೆ. ಬಿಜೆಪಿ- ಕಾಂಗ್ರೆಸ್ ನಾಯಕರ ನಡುವೆ ಚಕಮಕಿ ನಡೆಯಲಿದೆ. ಈಶ್ವರಪ್ಪ ಕಲಾಪಕ್ಕೆ ಬಂದ್ರೆ ವಿಧಾನಸಭೆಯಲ್ಲಿ ಗದ್ದಲವಾಗುವ ಎಲ್ಲಾ ಸಾಧ್ಯತೆಗಳಿವೆ. 

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಶಾಸಕರ ನಿಯೋಗವು ವಿಧಾನಸೌಧದಿಂದ ರಾಜಭವನದವರೆಗೆ ಪಾದಯಾತ್ರೆ ಮೂಲಕ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.ತನ್ಮೂಲಕ ರಾಷ್ಟ್ರಧ್ವಜಕ್ಕೆ ಅವ ಮಾನ ಮಾಡಿರುವ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಮನವಿ ಮಾಡಲು ನಿರ್ಧರಿಸಿದೆ.