ಕರ್ನಾಟಕ ಬಂದ್ ಇರುತ್ತಾ? ಇರಲ್ವಾ? ಸಿಎಂ ನಿಲುವಿನ ಮೇಲೆ ನಾಳೆ ಅಂತಿಮ ನಿರ್ಧಾರ
ಸೆ. 25 ಕ್ಕೆ ಅಂದರೆ ಶುಕ್ರವಾರ ನಡೆಸಬೇಕೆಂದಿರುವ ಕರ್ನಾಟಕ ಬಂದನ್ನು ರೈತ ಸಂಘಟನೆಗಳು ವಾಪಸ್ ಪಡೆದಿವೆ. 25 ಕ್ಕೆ ಕರ್ನಾಟಕ ಬಂದ್ ನಡೆಸಬೇಕು, ಬೇಡ ಎನ್ನುವುದರ ಬಗ್ಗೆ ಸ್ವಲ್ಪ ಗೊಂದಲ ಉಂಟಾಗಿ ಕೊನೆಗೆ 28 ಕ್ಕೆ ನಡೆಸಲು ಮುಂದಾಗಿವೆ.
ಬೆಂಗಳೂರು (ಸೆ. 23): ಸೆ. 25 ಕ್ಕೆ ಅಂದರೆ ಶುಕ್ರವಾರ ನಡೆಸಬೇಕೆಂದಿರುವ ಕರ್ನಾಟಕ ಬಂದನ್ನು ರೈತ ಸಂಘಟನೆಗಳು ವಾಪಸ್ ಪಡೆದಿವೆ. 25 ಕ್ಕೆ ಕರ್ನಾಟಕ ಬಂದ್ ನಡೆಸಬೇಕು, ಬೇಡ ಎನ್ನುವುದರ ಬಗ್ಗೆ ಸ್ವಲ್ಪ ಗೊಂದಲ ಉಂಟಾಗಿ ಕೊನೆಗೆ 28 ಕ್ಕೆ ನಡೆಸಲು ಮುಂದಾಗಿವೆ.
ರಾಜ್ಯ ರೈತ ಸೇನೆ ಸಂಘಟನೆ, ಹಸಿರು ಸೇನೆ ಸೇರಿದಂತೆ 9 ರೈತ ಸಂಘಟನೆಗಳು ಸೋಮವಾರ ಅಂದರೆ ಸೆ. 28 ಕ್ಕೆ ಬಂದ್ ನಡೆಸಲು ಮುಂದಾಗಿವೆ. 25 ಕ್ಕೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ಪ್ರತಿಭಟನೆ ನಡೆಸಲಾಗುತ್ತದೆ. 28 ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ಸುಗ್ರೀವಾಜ್ಞೆ ಹಿಂಪಡೆಯಿರಿ, ಇಲ್ಲ ಉಗ್ರ ಹೋರಾಟ ಎದುರಿಸಿ: ಸರ್ಕಾರಕ್ಕೆ ರೈತರ ವಾರ್ನಿಂಗ್
'ಈ ಬಗ್ಗೆ ನಾವು ಸಿಎಂ ಯಡಿಯೂರಪ್ಪ ಅವರ ಬಳಿ ಮಾತುಕತೆ ನಡೆಸುತ್ತೇವೆ. ಒಂದು ವೇಳೆ ಸಿಎಂ ಸುಗ್ರೀವಾಜ್ಞೆಯನ್ನು ಹಿಂಪಡೆದರೆ ಬಂದ್ ಪ್ರಶ್ನೆಯೇ ಇರುವುದಿಲ್ಲ. ಇದರ ಬಗ್ಗೆ ನಾವು ನಾಳೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತೇವೆ. ನಾಳೆ ಸ್ಪಷ್ಟ ಚಿತ್ರಣ ಸಿಗಲಿದೆ' ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.