Asianet Suvarna News Asianet Suvarna News

KPCC: 300 ಕಾಂಗ್ರೆಸ್‌ ಪದಾಧಿಕಾರಿಗಳ ಪಟ್ಟಿ ಜತೆ ದೆಹಲಿಗೆ ಹಾರಿದ ಡಿಕೆಶಿ

ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಂಗ್ರೆಸ್‌ ಪದಾಧಿಕಾರಗಳ ನೇಮಕಕ್ಕೆ ಕಡೆಗೂ ಕಾಲ ಕೂಡಿ ಬಂದಿದೆ. ಕೆಪಿಸಿಸಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಸುಮಾರು 300 ಹೆಸರುಗಳ ಪರಿಷ್ಕೃತ ಪಟ್ಟಿಯೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ದೆಹಲಿಗೆ ತೆರಳಿದ್ದಾರೆ. 
 

First Published Mar 13, 2022, 11:27 AM IST | Last Updated Mar 13, 2022, 11:27 AM IST

ಬೆಂಗಳೂರು (ಮಾ. 13): ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಂಗ್ರೆಸ್‌ ಪದಾಧಿಕಾರಗಳ ನೇಮಕಕ್ಕೆ ಕಡೆಗೂ ಕಾಲ ಕೂಡಿ ಬಂದಿದೆ. ಕೆಪಿಸಿಸಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಸುಮಾರು 300 ಹೆಸರುಗಳ ಪರಿಷ್ಕೃತ ಪಟ್ಟಿಯೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ದೆಹಲಿಗೆ ತೆರಳಿದ್ದಾರೆ. 

5 State Election Defeat: ಇಂದು CWC ಸಭೆ, ಸೋಲಿನ ಕುರಿತು ತೀವ್ರ ಚರ್ಚೆ

ಪದಾಧಿಕಾರಿಗಳ ಪಟ್ಟಿ ಮಾತ್ರವಲ್ಲದೆ, ಸುಮಾರು 20 ಜಿಲ್ಲಾ ಘಟಕಗಳ ಅಧ್ಯಕ್ಷರ ಬದಲಾವಣೆ ಮತ್ತು ಮಹಿಳಾ ಕಾಂಗ್ರೆಸ್‌, ಹಿಂದುಳಿದವರ ಘಟಕ, ಪರಿಶಿಷ್ಟಜಾತಿ- ಪಂಗಡ ಘಟಕ ಸೇರಿದಂತೆ ಹಲವು ಮುಂಚೂಣಿ ಘಟಕಗಳ ಅಧ್ಯಕ್ಷರ ಬದಲಾವಣೆಯ ಪ್ರಸ್ತಾವನೆ ಸಹಿತ ಅಧ್ಯಕ್ಷರು ದೆಹಲಿಗೆ ತೆರಳಿದ್ದು, ಇಂದು ಮತ್ತು ನಾಳೆ ಈ ಪಟ್ಟಿಗಳ ಕುರಿತು ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರೊಂದಿಗೆ ಚರ್ಚಿಸಿ ಪಟ್ಟಿಅಂತಿಮಗೊಳಿಸಲಿದ್ದಾರೆ. ಮೂಲಗಳ ಪ್ರಕಾರ ಮುಂದಿನ ವಾರದೊಳಗೆ ಪದಾಧಿಕಾರಗಳ ನೇಮಕ ಆದೇಶ ಹೊರ ಬೀಳುವ ಸಾಧ್ಯತೆಯಿದೆ.