Asianet Suvarna News Asianet Suvarna News

Supports to Farmers: ಕಾರಿಕಾ ಕಂಪನಿಯ 6 ರೆಡಿಮಿಕ್ಸ್ ಮಸಾಲಾ ಪದಾರ್ಥ ರಿಲೀಸ್

  ಕಾರಿಕ ರಿಟೈಲ್‌ ಪ್ರೈ.ಲಿ.ಕಂಪನಿಯ ಹೊಸ ಬಗೆಯ ಆರು ರೆಡಿ ಮಿಕ್ಸ್‌ ಮಸಾಲಾ ಪದಾರ್ಥಗಳನ್ನು ಕುಡಚಿ ಶಾಸಕ ಪಿ.ರಾಜೀವ್‌ ಬಿಡುಗಡೆಗೊಳಿಸಿದರು.

 ಬೆಂಗಳೂರು (ನ. 26):  ಕಾರಿಕ  (Carica) ರಿಟೈಲ್‌ ಪ್ರೈ.ಲಿ.ಕಂಪನಿಯ ಹೊಸ ಬಗೆಯ ಆರು ರೆಡಿ ಮಿಕ್ಸ್‌ ಮಸಾಲಾ ಪದಾರ್ಥಗಳನ್ನು ಕುಡಚಿ ಶಾಸಕ ಪಿ.ರಾಜೀವ್‌ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ನೂತನ ಉತ್ಪನ್ನಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮನುಷ್ಯ ವೃತ್ತಿ ಬದುಕಿನಲ್ಲಿ ಕಂಫರ್ಟ್‌ ಜೋನ್‌ನಿಂದ ಹೊರಬರಬೇಕು. ಹೊಸ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಬೇಕು. ದೊಡ್ಡ ಮಟ್ಟದಲ್ಲಿ ಕಂಪನಿ ಬೆಳೆದು ಮಾರುಕಟ್ಟೆಕ್ಷೇತ್ರದಲ್ಲಿ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಲಿ. ಬಿಡುಗಡೆಯಾದ ಉತ್ಪನ್ನಗಳು ಹೆಚ್ಚೆಚ್ಚು ಮಾರಾಟವಾಗುವ ಮೂಲಕ ರೈತರಿಗೂ ಅಧಿಕ ಲಾಭ ತಂದುಕೊಡಲಿ ಎಂದು ಶಾಸಕರು ಆಶಿಸಿದರು.

ಕಂಪನಿ ವ್ಯವಸ್ಥಾಪಕ ನಿರ್ದೇಶಕ ಡಾ. ವಿಷ್ಣುವರ್ಧನ ದೇವಲ ನಾಯ್ಕ್ ಮಾತನಾಡಿ, ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸಿ ಪದಾರ್ಥ ಸಿದ್ದಪಡಿಸುತ್ತೇನೆ. ಇದರಿಂದ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ಕೈಗೆಟುಕುವ ಮತ್ತು ಗುಣಮಟ್ಟದ ಪದಾರ್ಥ ಸಿಗುತ್ತದೆ. ಹೆಚ್ಚುವರಿ ಅಗತ್ಯ ಕೃಷಿ ಉತ್ಪನ್ನ ಖರೀದಿಸುವುದರಿಂದ ರೈತರಿಗೂ ಲಾಭವಾಗುತ್ತದೆ ಎಂದು ತಿಳಿಸಿದರು.

 

Video Top Stories