Asianet Suvarna News Asianet Suvarna News

ಮೇಡ್ ಇನ್ ಬೆಂಗಳೂರು ತಂಡದ ವಿಭಿನ್ನ ಪ್ರಯತ್ನ; 'ಬನ್ನಿರಿ ಬೆಂಗಳೂರಿಗೆ..' ಸಾಂಗ್ ವೈರಲ್

ಮೇಡ್ ಇನ್ ಬೆಂಗಳೂರು, ಸದ್ಯ ಬನ್ನಿರಿ ಬೆಂಗಳೂರಿಗೆ ಹಾಡಿನ ಮೂಲಕ ಸದ್ದು ಮಾಡ್ತಿರೋ ಸಿನಿಮಾ. ವಿಭಿನ್ನವಾದ ಪ್ರಯತ್ನ ಮಾಡಬೇಕು ಅನ್ನೋ ನಿಟ್ಟಿನಲ್ಲಿ ಈ ಹಾಡನ್ನ  ಸಿದ್ದಮಾಡಿದ್ದು ಈ ಹಾಡನ್ನು ಹನ್ನೊಂದು ಭಾಷೆಗಳನ್ನು ಬಳಸಿ ರಚಿಸಲಾಗಿದೆ.

First Published Aug 24, 2022, 4:52 PM IST | Last Updated Aug 24, 2022, 4:52 PM IST

ಮೇಡ್ ಇನ್ ಬೆಂಗಳೂರು, ಸದ್ಯ ಬನ್ನಿರಿ ಬೆಂಗಳೂರಿಗೆ ಹಾಡಿನ ಮೂಲಕ ಸದ್ದು ಮಾಡ್ತಿರೋ ಸಿನಿಮಾ. ವಿಭಿನ್ನವಾದ ಪ್ರಯತ್ನ ಮಾಡಬೇಕು ಅನ್ನೋ ನಿಟ್ಟಿನಲ್ಲಿ ಈ ಹಾಡನ್ನ  ಸಿದ್ದಮಾಡಿದ್ದು ಈ ಹಾಡನ್ನು ಹನ್ನೊಂದು  ಭಾಷೆಗಳನ್ನು ಬಳಸಿ ರಚಿಸಲಾಗಿದ್ದು.  ಜನಪ್ರಿಯ ಗಾಯಕರಾದ  ಶ್ರೀಹರ್ಷ ಎಂ.ಆರ್, ಕಂಬದ ರಂಗಯ್ಯ,  ರೋಹಿತ್ ಭಟ್, ಮದ್ವೇಶ್ ಭಾರದ್ವಾಜ್, ಮೇಘ ಕುಲಕರ್ಣಿ, ಪೂಜಾ ರಾವ್, ನಾರಾಯಣ ಶರ್ಮ, ಅದಮ್ಯ ರಮಾನಂದ್, ನಿಹಾಲ್ ವಿಜೇತ್, ಆದರ್ಶ ಶೆಣೈ, ಪ್ರವೀಣ್ ಶಣ್ಮುಗ, ಅಥರ್ವ ರಾವ್, ಅಪ್ಪಣ್ಣ, ಅಶ್ವಿನ್ ಪ್ರಭಾತ್, ರಾಕೇಶ್ ಪೂಜಾರಿ ಮುಂತಾದವರು ಈ ಹಾಡನ್ನು ಹಾಡಿದ್ದಾರೆ. ಹಾಡಿಗೆ ಅಶ್ವಿನ್ ಪಿ ಕುಮಾರ್ ಸಂಗೀತ ನೀಡಿದ್ದಾರೆ. ಮೇಡ್ ಇನ್ ಬೆಂಗಳೂರು ಸಿನಿಮಾ  ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ಚಿತ್ರವನ್ನ ಬಾಲಕೃಷ್ಣ ನಿರ್ಮಾಣ ಮಾಡಿದ್ದಾರೆ. ಪ್ರದೀಪ್ ಶಾಸ್ತ್ರಿ ನಿರ್ದೇಶನ ಸಿನಿಮಾಗಿದೆ. ಚಿತ್ರದ ಟೀಸರ್ ಬಿಡುಗಡೆ ಆಗಿದ್ದು ಸಿನಿಮಾದಲ್ಲಿ ಅನಂತನಾಗ್, ಸಾಯಿಕುಮಾರ್, ಪ್ರಕಾಶ್ ಬೆಳವಾಡಿ ಮುಂತಾದ ಕಲಾವಿದರು ಆಕ್ಟ್ ಮಾಡಿದ್ದಾರೆ.

Video Top Stories