Asianet Suvarna News Asianet Suvarna News

'ವಾಜಪೇಯಿ ಹೆವಿ ಡ್ರಂಕರ್... ಮಿಸಸ್ ಕೌಲ್ ಅವರ ಮನೆಯಲ್ಲೇ ಇರ್ತಿದ್ರು'

* ಸಿಟಿ ರವಿ ಹೇಳಿಕೆ ನಂತರ  ಕಾಂಗ್ರೆಸ್ ವರ್ಸಸ್ ಬಿಜೆಪಿ
* ವಾಜಪೇಯಿಗೆ ಪ್ರತಿದಿನ ಎರಡು ಪೆಗ್ ಬೇಕಾಗಿತ್ತು ಎಂದ ಖರ್ಗೆ
* ನಾವು ಮಾತನಾಡಿದ ಮಾತ್ರಕ್ಕೆ ಅವರ ಘನತೆ ಕಡಿಮೆ ಆಗಲ್ಲ
* ಬಿಜೆಪಿಯವರ ಸಿಡಿ ಪ್ರಕರಣದಿಂದಲೇ ಮರ್ಯಾದೆ ಹೋಗಿದೆ

ಕಲಬುರಗಿ(  ಆ. 14) ಸಿಟಿ ರವಿ  ವಿರುದ್ಧ ಕಲಬುರಗಿಯಲ್ಲಿ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ವಾಜಪೇಯಿ ಅವರಿಗೆ ಪ್ರತಿ ದಿನ ಎರಡು ಪೆಗ್ ಬೇಕಾಗಿತ್ತು.. ವಾಜಪೇಯಿ ಹೆವಿ ಡ್ರಂಕರ್ ಆಗಿದ್ದರು.. ಎಲ್ಲ ಬಾರ್ ಗೆ ವಾಜಪೇಯಿ ಹೆಸರು ಇಡುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.

'ಸಿಟಿ ರವಿ ಬಾಯಿ, ಬಾತ್ ರೂಂ ಚಪ್ಪಲಿ'

ನಾನು ಮಾತನಾಡಿದ ಮಾತ್ರಕ್ಕೆ ವಾಜಪೇಯಿ ಘನತೆ ಕಡಿಮೆ ಆಗುವುದಿಲ್ಲ. ಸಿಟಿ ರವಿ ಹೇಳಿಕೆಯಿಂದ ನೆಹರು ಘನತೆ ಕಡಿಮೆ ಆಗುವುದಿಲ್ಲ. ಬಿಜೆಪಿಯವರ ಸಿಟಿ ಪ್ರಕರಣದಿಂದ ರಾಜ್ಯದ ಮರ್ಯಾದೆ ಬೀದಿಗೆ ಬಂದಿದೆ ಎಂದು ಖರ್ಗೆ ಆರೋಪಿಸಿದ್ದಾರೆ .

 

Video Top Stories