Asianet Suvarna News Asianet Suvarna News

ಮಾಜಿ ಸಚಿವ ಈಶ್ವರಪ್ಪ ಬಾದಾಮಿ ಪ್ರವಾಸ: ಪುತ್ರನ ಭವಿಷ್ಯಕ್ಕಾಗಿ ಟೂರ್?

Aug 1, 2021, 11:20 AM IST

ಬೆಂಗಳೂರು(ಜು./01): ಮಾಜಿ ಸಚಿವ ಈಶ್ವರಪ್ಪ ಕುಟುಂಬ ಸದಸ್ಯರೊಂದಿಗೆ ಬಾದಾಮಿಗೆ ಭೇಟಿ ಕೊಟ್ಟಿದ್ದಾರೆ. ಬನಶಂಕರಿ ಪೂಜೆಡ ನೆಪದಲ್ಲಿ ಈಶ್ವರಪ್ಪ ಕುಟುಂಬ ಈ ಪ್ರವಾಸ ಕೈಗೊಂಡಿದೆ.

ಇನ್ನು ಈ ಪ್ರವಾಸದ ಬಗ್ಗೆ ಭಾರೀ ಕುತೂಹಲ ಮೂಡಿದ್ದು, ಕೇವಲ ಪೂಜೆಗಷ್ಟೇ ಈ ಪ್ರವಾಸ ಕೈಗೊಂಡಿಲ್ಲ, ದೂರದೃಷ್ಟಿ ಯೋಜನೆ ಹಾಕಿ ಇದನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಹೌದು ಈಶ್ವರಪ್ಪ ತಮ್ಮ ಪುತ್ರ ಕಾಂತೇಶ್ ರಾಜಕೀಯ ಭವಿಷ್ಯಕ್ಕಾಗಿ ಇದನ್ನು ಮಾಡುತ್ತಿದ್ದಾರೆನ್ನಲಾಗಿದೆ.