Asianet Suvarna News Asianet Suvarna News

ಗೆದ್ದವರೆಲ್ಲಾ ಮಂತ್ರಿಗಳಲ್ಲ; ಹೈಕಮಾಂಡ್ ಸಂಪುಟ ರಚನೆ ಆಟ ಬಲ್ಲವರಿಲ್ಲ!

ಬೆಂಗಳೂರು (ಜ. 13): ಬಿಎಸ್‌ವೈ ಸರ್ಕಾರದಲ್ಲಿ ಸಂಪುಟ ರಚನೆ ಕಸರತ್ತು ಶುರುವಾಗಿದೆ. ಆದರೆ ಇದು ಸುಲಭವಲ್ಲ. ಬಿಜೆಪಿ ಪಕ್ಷದೊಳಗೆ ಮಂತ್ರಿಗಿರಿಗಾಗಿ ಪೈಪೋಟಿ ಶುರುವಾಗಿದೆ. ಗೆದ್ದ ಅನರ್ಹರಿಗೆ ಖಾತೆ ಕೊಡುತ್ತೇವೆ ಎಂದು ಸಿಎಂ ಈ ಹಿಂದೆ ಹೇಳಿದ್ದು ಬಿಸಿತುಪ್ಪವಾಗಿದೆ.  ಉಪ ಚುನಾವಣೆಯಲ್ಲಿ ಗೆದ್ದ ಅನರ್ಹರಿಗೆಲ್ಲಾ ಒಂದೊಂದು ಖಾತೆ ಕೊಡಲು ಕಷ್ಟಸಾಧ್ಯ. ಈಗ ಇರೋದ್ರಲ್ಲೇ ಖಾತೆ ಹಂಚಿಕೆ ಮಾಡೋದು ಮುಂದಿರೋ ರಿಯಲ್ ಚಾಲೆಂಜ್. ಏನಿದು ಇನ್‌ಸೈಡ್‌ ಡಿಟೇಲ್ ಸ್ಟೋರಿ? ಕಮಲ ಪಾಳಯದಲ್ಲಿ ಏನೆಲ್ಲಾ ನಡೆಯುತ್ತಿದೆ? ನೋಡಿ ಸುವರ್ಣ ಸ್ಪೆಷಲ್! 

ಬೆಂಗಳೂರು (ಜ. 13): ಬಿಎಸ್‌ವೈ ಸರ್ಕಾರದಲ್ಲಿ ಸಂಪುಟ ರಚನೆ ಕಸರತ್ತು ಶುರುವಾಗಿದೆ. ಆದರೆ ಇದು ಸುಲಭವಲ್ಲ. ಬಿಜೆಪಿ ಪಕ್ಷದೊಳಗೆ ಮಂತ್ರಿಗಿರಿಗಾಗಿ ಪೈಪೋಟಿ ಶುರುವಾಗಿದೆ. ಗೆದ್ದ ಅನರ್ಹರಿಗೆ ಖಾತೆ ಕೊಡುತ್ತೇವೆ ಎಂದು ಸಿಎಂ ಈ ಹಿಂದೆ ಹೇಳಿದ್ದು ಬಿಸಿತುಪ್ಪವಾಗಿದೆ.  ಉಪ ಚುನಾವಣೆಯಲ್ಲಿ ಗೆದ್ದ ಅನರ್ಹರಿಗೆಲ್ಲಾ ಒಂದೊಂದು ಖಾತೆ ಕೊಡಲು ಕಷ್ಟಸಾಧ್ಯ. ಈಗ ಇರೋದ್ರಲ್ಲೇ ಖಾತೆ ಹಂಚಿಕೆ ಮಾಡೋದು ಮುಂದಿರೋ ರಿಯಲ್ ಚಾಲೆಂಜ್.

5 ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟು ಎಚ್ಚರಿಕೆ ಸಂದೇಶ ರವಾನೆ

ಆದರೆ  ಇನ್ನೊಂದೆಡೆ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದಕ್ಕೆ ಅರ್ಹ ಶಾಸಕರು ಮುನಿಸಿಕೊಂಡಿದ್ದಾರೆ. ಬಿಎಸ್‌ವೈ ತಮ್ಮನ್ನು ಕೈ ಬಿಟ್ಟರಾ ಎಂಬ ಆತಂಕದಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಅರ್ಹ ಶಾಸಕರು ಎರಡೆರಡು ಗೌಪ್ಯಸಭೆ ನಡೆಸಿದ್ದಾರೆ. ಬಿಜೆಪಿ ಹೈಕಮಾಂಡ್ ಹಾಗೂ ಸಿಎಂ ಯಡಿಯೂರಪ್ಪನವರಿಗೆ ಅರ್ಹ ಶಾಸಕರೆಲ್ಲರೂ ಸಂಪುಟ ವಿಸ್ತರಣೆಗೆ ಗಡುವು ಕೊಟ್ಟಿದ್ದಾರೆ ಎನ್ನಲಾಗಿದೆ. ಏನಿದು ಇನ್‌ಸೈಡ್‌ ಡಿಟೇಲ್ ಸ್ಟೋರಿ? ಕಮಲ ಪಾಳಯದಲ್ಲಿ ಏನೆಲ್ಲಾ ನಡೆಯುತ್ತಿದೆ? ನೋಡಿ ಸುವರ್ಣ ಸ್ಪೆಷಲ್! 

Video Top Stories