'ಜಮೀರ್ ಸಾಹೇಬ್ರೇ, ಅಲ್ಪಸಂಖ್ಯಾತ ಅನ್ನೋದು ರಕ್ಷಣೆಗೆ ಟ್ಯಾಗ್, ಐಡಿಯಲ್ಲ'
ಶ್ರೀಲಂಕಾದ ಕ್ಯಾಸಿನೋಗೂ, ಜಮೀರ್ ಅಹ್ಮದ್ ಖಾನ್‌ಗೂ ಸಂಬಂಧವಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ಜಮೀರ್ ವಿರುದ್ಧ ರಾಜಕೀಯ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.
ಬೆಂಗಳೂರು (ಸೆ. 13): ಶ್ರೀಲಂಕಾದ ಕ್ಯಾಸಿನೋಗೂ, ಜಮೀರ್ ಅಹ್ಮದ್ ಖಾನ್‌ಗೂ ಸಂಬಂಧವಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ಜಮೀರ್ ವಿರುದ್ಧ ರಾಜಕೀಯ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.
'ಅಲ್ಪಸಂಖ್ಯಾತ ಅನ್ನೋದು ರಕ್ಷಣೆಗೆ ಟ್ಯಾಗ್, ಐಡಿಯಲ್ಲ. ಡ್ರಗ್ ಎಷ್ಟೇ ಪ್ರಭಾವಿಗಳಿದ್ದರೂ ಬಿಡಲ್ಲ. ಸಿದ್ದರಾಮಯ್ಯನವರೂ ಇದಕ್ಕೆ ಕೈಜೋಡಿಸಲಿ' ಎಂದು ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.
ಜಾಮೀನು ಡೌಟು, ರಾಗಿಣಿಗೆ ಪರಪ್ಪನ ಅಗ್ರಹಾರ ಫಿಕ್ಸ್?
ತಮ್ಮ ವಿರುದ್ಧ ಆರೋಪ ಬರುತ್ತಿದ್ದಂತೆ ಜಮೀರ್ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇದು ಸಿದ್ದರಾಮಯ್ಯ ಜಮೀರ್ ಪರ ನಿಂತಿದ್ದಾರೆ ಎಂಬ ಭಾವನೆ ಹುಟ್ಟು ಹಾಕಿದೆ