ಸಚಿವ ಸಂಪುಟ ವಿಸ್ತರಣೆ ಸದ್ಯದಲ್ಲೇ? ಸಿಎಂ ಕೊಟ್ಟ ಸ್ಪಷ್ಟನೆ ಇದು!

ಸಂಪುಟ ವಿಸ್ತರಣೆ ಗೊಂದಲಕ್ಕೆ ಸಿಎಂ ಪೂರ್ಣವಿರಾಮ ಇಟ್ಟಿದ್ದಾರೆ. ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ. ಮತ್ತೆ ದೆಹಲಿ ಪ್ರವಾಸ ಮಾಡಲಿದ್ದೇನೆ. ದೆಹಲಿಯಿಂದ ಬಂದ ಬಳಿಕ ವಿಸ್ತರಣೆ ನಡೆಯಲಿದೆ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. 

First Published Sep 28, 2020, 6:18 PM IST | Last Updated Sep 28, 2020, 6:18 PM IST

ಬೆಂಗಳೂರು (ಸೆ. 28): ಸಂಪುಟ ವಿಸ್ತರಣೆ ಗೊಂದಲಕ್ಕೆ ಸಿಎಂ ಪೂರ್ಣವಿರಾಮ ಇಟ್ಟಿದ್ದಾರೆ. ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ. ಮತ್ತೆ ದೆಹಲಿ ಪ್ರವಾಸ ಮಾಡಲಿದ್ದೇನೆ. ದೆಹಲಿಯಿಂದ ಬಂದ ಬಳಿಕ ವಿಸ್ತರಣೆ ನಡೆಯಲಿದೆ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. 

ಸಿಎಂ ಬಿಎಸ್‌ವೈ ಮತ್ತೆ ದೆಹಲಿಗೆ: ಸಂಪುಟ ವಿಸ್ತರಣೆಯೋ? ಪುನಾರಚನೆಯೋ?

ಅಧಿವೇಶನದ ಒಳಗೆ ಸಂಪುಟ ವಿಸ್ತರಣೆ/ಪುನಾರಚನೆ ಮಾಡುವ ಇಂಗಿತವನ್ನು ಬಿಎಸ್‌ವೈ ವ್ಯಕ್ತಪಡಿಸಿದ್ದರು. ಆದರೆ ಹೈಕಮಾಂಡ್‌ ಅದಕ್ಕೆ ಸೂಚನೆ ಕೊಟ್ಟಿರಲಿಲ್ಲ. ಇಲ್ಲಿಯವರೆಗೆ ಹೈ ಕಮಾಂಡ್‌ನಿಂದ ಯಾವುದೇ ಸೂಚನೆ ಬಂದಿಲ್ಲದಿರುವುದರಿಂದ ಇನ್ನು ಮೂರು ದಿನಗಳಲ್ಲಿ ಸಿಎಂ ದೆಹಲಿಗೆ ತೆರಳಲಿದ್ಧಾರೆ. ಹೈಕಮಾಂಡ್ ಜೊತೆ ಚರ್ಚೆ ನಡೆಸಿ ಬಳಿಕ ಸಂಪುಟ ವಿಸ್ತರಣೆಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.