IPL 2020: ದುಬೈನಲ್ಲಿ ಮಸ್ತ್‌ ಮಜಾ ಮಾಡ್ತಿದೆ RCB

ದುಬೈನಲ್ಲಿ ಸದ್ಯ ಎಲ್ಲಾ ಆಟಗಾರರು ಬಯೋ ಬಬಲ್‌ಗೆ ಒಳಗಾಗಿದ್ದು, ಈ ಝೋನ್‌ನೊಳಗೆ ಉಳಿದುಕೊಂಡು ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಾಗಿದೆ. ದುಬೈಗೆ ಬಂದಿಳಿದ್ದರೂ ಆಟಗಾರರು ಶಾಪಿಂಗ್ ಮಾಡೋಕೆ ಹೊರಗಡೆ ಹೋಗುವಂತಿಲ್ಲ.

First Published Sep 17, 2020, 3:43 PM IST | Last Updated Sep 17, 2020, 3:43 PM IST

ದುಬೈ(ಸೆ.17): ಕೊರೋನಾ ಭೀತಿಯ ನಡುವೆಯೇ 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಬಿಸಿಸಿಐ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಿದೆ.

ದುಬೈನಲ್ಲಿ ಸದ್ಯ ಎಲ್ಲಾ ಆಟಗಾರರು ಬಯೋ ಬಬಲ್‌ಗೆ ಒಳಗಾಗಿದ್ದು, ಈ ಝೋನ್‌ನೊಳಗೆ ಉಳಿದುಕೊಂಡು ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಾಗಿದೆ. ದುಬೈಗೆ ಬಂದಿಳಿದ್ದರೂ ಆಟಗಾರರು ಶಾಪಿಂಗ್ ಮಾಡೋಕೆ ಹೊರಗಡೆ ಹೋಗುವಂತಿಲ್ಲ.

ಐಪಿಎಲ್‌ ಕಣದಲ್ಲಿ ‘ಧಾರವಾಡದ ಹುಡುಗ’: ಅಪ್ಪಟ ಉತ್ತರ ಕರ್ನಾಟಕದ ಪ್ರತಿಭೆ

ಹೀಗಾಗಿ ಬಿಡುವಿನ ಸಮಯವನ್ನು ಎಂಜಾಯ್‌ ಮಾಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಾಸ್ಟರ್ ಪ್ಲಾನ್ ರೂಪಿಸಿದೆ. ಆರ್‌ಸಿಬಿ ಆಟಗಾರರ ರಿಲ್ಯಾಕ್ಸೇಷನ್‌ಗಾಗಿ ಬೆಂಗಳೂರು ಫ್ರಾಂಚೈಸಿ ಮಾಸ್ಟರ್ ಪ್ಲಾನ್ ರೂಪಿಸಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.