Asianet Suvarna News Asianet Suvarna News

IPL 2020: ಸುರೇಶ್ ರೈನಾ ಅನುಪಸ್ಥಿತಿ ಸಿಎಸ್‌ಕೆಯನ್ನು ಕಾಡಲಿದೆಯೇ..?

ಸುರೇಶ್ ರೈನಾ ತಂಡದಿಂದ ಹೊರಗುಳಿದ್ದು ತಂಡಕ್ಕೆ ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ. ತಂಡದಲ್ಲಿ ಯುವ ಆಟಗಾರರ ಅನುಪಸ್ಥಿತಿ ಕೂಡಾ ಎದ್ದು ಕಾಣುತ್ತಿದೆ. ಇದೆಲ್ಲದರ ಜತೆಗೆ ದೀಪಕ್ ಚಹಾರ್ ಹಾಗೂ ಶಾರ್ದೂರ್ ಠಾಕೂರ್ ಹೊರತುಪಡಿಸಿದರೆ ಅಂತಹ ಹೇಳಿಕೊಳ್ಳುವಂತಹ ವೇಗಿಗಳು ತಂಡದಲ್ಲಿಲ್ಲ.

ಬೆಂಗಳೂರು: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕನ್ಸಿಟೆಂಟ್ ಪ್ರದರ್ಶನ ತೋರಿದ ತಂಡವೆಂದರೆ ಅದು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್ ತಂಡ. ತಾನಾಡಿದ ಎಲ್ಲಾ ಆವೃತ್ತಿಗಳಲ್ಲೂ ಪ್ಲೇ ಆಫ್ ಹಂತ ಪ್ರವೇಶಿಸಿದ ಏಕೈಕ ತಂಡ ಸಿಎಸ್‌ಕೆ. ಬರೋಬ್ಬರಿ ಒಂದು ವರ್ಷಗಳ ಬಳಿಕ ಧೋನಿ ಮತ್ತೊಮ್ಮೆ ಮೈದಾನಕ್ಕಿಳಿಯಲಿದ್ದು, ಯಾವ ರೀತಿಯ ಪ್ರದರ್ಶನ ತೋರುತ್ತಾರೆ ಎನ್ನುವ ಕುತೂಹಲ ಜೋರಾಗಿದೆ.

ಸುರೇಶ್ ರೈನಾ ತಂಡದಿಂದ ಹೊರಗುಳಿದ್ದು ತಂಡಕ್ಕೆ ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ. ತಂಡದಲ್ಲಿ ಯುವ ಆಟಗಾರರ ಅನುಪಸ್ಥಿತಿ ಕೂಡಾ ಎದ್ದು ಕಾಣುತ್ತಿದೆ. ಇದೆಲ್ಲದರ ಜತೆಗೆ ದೀಪಕ್ ಚಹಾರ್ ಹಾಗೂ ಶಾರ್ದೂರ್ ಠಾಕೂರ್ ಹೊರತುಪಡಿಸಿದರೆ ಅಂತಹ ಹೇಳಿಕೊಳ್ಳುವಂತಹ ವೇಗಿಗಳು ತಂಡದಲ್ಲಿಲ್ಲ.

IPL 2020 ಉದ್ಘಾಟನಾ ಪಂದ್ಯಕ್ಕೆ ಹೀಗಿದೆ ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ

ಈ ಬಾರಿಯ ಐಪಿಎಲ್ ಟೂರ್ನಿಗೆ ಎಂ ಎಸ್ ಧೋನಿ ನೇತೃತ್ವದ ದಿ ಬೆಸ್ಟ್ ಪ್ಲೇಯಿಂಗ್ ಇಲೆವನ್ ಹೇಗಿರಬಹುದು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.
 
Video Top Stories