ಶಾಲೆ ಪುನಾರಂಭ ಚಿಂತನೆ; ಶಿಕ್ಷಣ ತಜ್ಞರು, ಶಾಸಕರು, ಸಂಸದರ ಅಭಿಪ್ರಾಯಕ್ಕೆ ಆಹ್ವಾನ
ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಹೆಚ್ಚುತ್ತಿದ್ದರೂ ಶಾಲೆಗಳನ್ನು ಪುನರ್ ಆರಂಭಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಕೊರೊನಾ ಭೀತಿಯಿಂದ ಸರ್ಕಾರ ವಿಧಾನ ಮಮಡಲ ಹಾಗೂ ಸಂಸತ್ ಕಲಾಪವನ್ನು ಸರ್ಕಾರ ಮೊಟಕುಗೊಳಿಸಿತ್ತು. ಸರ್ಕಾರ ಹಾಗೂ ಶಾಸಕರ ಮೇಲಿರುವ ಕಾಳಜಿ ಮಕ್ಕಳ ಮೇಲಿಲ್ಲದಾಯ್ತೆ? ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಸೆ. 29): ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಹೆಚ್ಚುತ್ತಿದ್ದರೂ ಶಾಲೆಗಳನ್ನು ಪುನರ್ ಆರಂಭಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಕೊರೊನಾ ಭೀತಿಯಿಂದ ಸರ್ಕಾರ ವಿಧಾನ ಮಮಡಲ ಹಾಗೂ ಸಂಸತ್ ಕಲಾಪವನ್ನು ಸರ್ಕಾರ ಮೊಟಕುಗೊಳಿಸಿತ್ತು. ಸರ್ಕಾರ ಹಾಗೂ ಶಾಸಕರ ಮೇಲಿರುವ ಕಾಳಜಿ ಮಕ್ಕಳ ಮೇಲಿಲ್ಲದಾಯ್ತೆ? ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯ. ಹೇಗೆ ಮಕ್ಕಳನ್ನು ಕಳುಹಿಸುವುದು ಎಂಬ ಆತಂಕದಲ್ಲಿದ್ದಾರೆ ಪೋಷಕರು.
ಶಾಸಕ, ಸಂಸದರಿಗಿರುವ ಕೊರೊನಾ ರಿಸ್ಕ್ ಮಕ್ಕಳಿಗಿಲ್ಲವೇ?
ಈ ಬಗ್ಗೆ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದು, ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯಕ್ಕೆ ಶಾಲೆ-ಕಾಲೇಜುಗಳನ್ನು ಪ್ರಾರಂಭ ಮಾಡುವ ಯೋಚನೆಯು ಸರ್ಕಾರದ ಮುಂದೆ ಇಲ್ಲ. ಈ ಕುರಿತು ಶಾಸಕರ ಮತ್ತು ಸಂಸದರ ಹಾಗೂ ಇತರೆ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಹ್ವಾನಿಸುತ್ತಿದ್ದೇನೆ. ಇದರ ಜೊತೆಗೆ ಶಿಕ್ಷಕ ಸಂಘಟನೆಗಳೊಂದಿಗೆ ಹಾಗೂ ಶಿಕ್ಷಣ ತಜ್ಞರೊಂದಿಗೆ ಸಂವಾದ ನಡೆಸುತ್ತಿದ್ದೇನೆ ಎಂದಿದ್ದಾರೆ.