ಕಣ್ಮುಂದೆಯೇ ಕಾರ್‌ನಲ್ಲಿದ್ದ 4.5 ಲಕ್ಷ ರೂ ಎಗರಿಸಿ ಎಸ್ಕೇಪ್, ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಬ್ಯಾಂಕ್‌ಗೆ ಮನೆ ಸಾಲದ ಇಎಂಐ ಕಟ್ಟಲು ಲಕ್ಷ್ಮೀಶ್ ಎನ್ನುವವರು ಬರುತ್ತಾರೆ, ಪಾನ್ ಕಾರ್ಡ್ ಕೇಳಿದ್ದಕ್ಕೆ ಬ್ಯಾಂಕ್‌ನಿಂದ ವಾಪಸ್ ಮನೆಗೆ ಹೋಗುತ್ತಾರೆ. 2 ಬೈಕ್‌ನಲ್ಲಿ ಅಪರಿಚಿತರು ಅವರನ್ನು ಫಾಲೋ ಮಾಡ್ತಾರೆ.
ಬೆಂಗಳೂರು (ಜು. 23): ಬ್ಯಾಂಕ್‌ಗೆ ಮನೆ ಸಾಲದ ಇಎಂಐ ಕಟ್ಟಲು ಲಕ್ಷ್ಮೀಶ್ ಎನ್ನುವವರು ಬರುತ್ತಾರೆ, ಪಾನ್ ಕಾರ್ಡ್ ಕೇಳಿದ್ದಕ್ಕೆ ಬ್ಯಾಂಕ್‌ನಿಂದ ವಾಪಸ್ ಮನೆಗೆ ಹೋಗುತ್ತಾರೆ. 2 ಬೈಕ್‌ನಲ್ಲಿ ಅಪರಿಚಿತರು ಅವರನ್ನು ಫಾಲೋ ಮಾಡ್ತಾರೆ. ಕಮಿಷನರ್ ಕಚೇರಿ ಬಳಿಯ ಮಾಪನ ಕೇಂದ್ರದ ಬಳಿ ಕಾರು ನಿಲ್ಲಿಸಿ ಸ್ನೇಹಿತರನ್ನು ಭೇಟಿ ಮಾಡಲು ಲಕ್ಷ್ಮೀಶ್ ಹೋಗುತ್ತಾರೆ. ಆಗ ಕಾರಿನ ಗ್ಲಾಸ್ ಒಡೆದು 4.5 ಲಕ್ಷ ರೂ ಎಗರಿಸುತ್ತಾರೆ. ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.