ಗೃಹ ಸಚಿವ ಆರಗ ಜ್ಞಾನೇಂದ್ರಗೆ ಕೊನೆಗೂ ಜ್ಞಾನೋದಯ: ಹೇಳಿಕೆ ವಾಪಸ್
* ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ
* ಸಂಸ್ರಸ್ತೆ ಯುವತಿ ಬಗ್ಗೆ ನೀಡಿದ್ದ ಹೇಳಿಕೆ ವಾಪಸ್ ಪಡೆದ ಗೃಹ ಸಚಿವ
* 7.30ಕ್ಕೆ ಆ ನಿರ್ಜನ ಪ್ರದೇಶಕ್ಕೆ ಹೋಗಬಾರದಿತ್ತು ಎಂದಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ
ಬೆಂಗಳೂರು, (ಆ.26): ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಯುವತಿಯ ಬಗ್ಗೆ ವಿವದಾತ್ಮಕ ಹೇಳಿಕೆ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಕೊನೆಗೂ ಜ್ಞಾನೋದಯವಾಗಿದೆ.
ಹೌದು...7.30ಕ್ಕೆ ಆ ನಿರ್ಜನ ಪ್ರದೇಶಕ್ಕೆ ಆಕೆ ಹೋಗಬಾರದಿತ್ತು ಎಂದು ಹೇಳಿಕೆ ನೀಡಿದ್ದರು. ಇದೀಗ ಆ ಹೇಳಿಕೆಯನ್ನು ವಾಪಸ್ ಪಡೆದಿರುವುದಾಗಿ ಹೇಳಿದ್ದಾರೆ.
ರೇಪ್ ಸಂತ್ರಸ್ತೆ ಅಷ್ಟೊತ್ತಿಗೆ ಆ ನಿರ್ಜನ ಪ್ರದೇಶಕ್ಕೆ ಹೋಗ್ಬಾರದಿತ್ತು: ಗೃಹ ಸಚಿವ ವಿವಾದಾತ್ಮಕ ಹೇಳಿಕೆ
ಪರಪ್ಪನ ಅಗ್ರಹಾರ ಭೇಟಿಯ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯುವತಿಯ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿ, ನನಗೂ ಆ ಹೇಳಿಕೆ ನೀಡಿದ ಬಳಿಕ ತುಂಬಾ ನೋವಾಗಿದೆ, ಬೊಮ್ಮಾಯಿಯಯವರ ಸರ್ಕಾರ ಎಲ್ಲ ಹೆಣ್ಣು ಮಕ್ಕಳ ಪ್ರಾಣ ಮಾನ ಕಾಪಾಡುವ ಬದ್ಧತೆ ಹೊಂದಿದೆ, ಎಂದು ಹೇಳಿ ಹೇಳಿಕೆ ವಾಪಸ್ಸು ಪಡೆದಿರುವುದಾಗಿ ತಿಳಿಸಿದರು.
ಮೈಸೂರಿನಲ್ಲಿ ನಡೆದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ.. ಅತ್ಯಾಚಾರಕ್ಕೆ ಒಳಗಾಗಿರುವ ಯುವತಿ ಅಲ್ಲಿಗೆ ಹೋಗಬಾರದಿತ್ತು ಎಂದು ಹೇಳಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು ಅಲ್ಲದೇ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಒಬ್ಬ ರಾಜ್ಯದ ಗೃಹಮಂತ್ರಿಯಾಗಿ ಎಂತಹ ಹೇಳಿಕೆ ನೀಡಿದ್ದಾರೆಂದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದ ಎಚ್ಚೆತ್ತ ಆರಗ ಜ್ಞಾನೇಂದ್ರ ತಮ್ಮ ಹೇಳಿಕೆಯನ್ನು ವಾಪಸ್ ಪಡೆದುಕೊಂಡಿದ್ದಾರೆ.