11:43 PM (IST) Sep 11

Karnataka News Live:ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ.50 ಡಿಸ್ಕೌಂಟ್‌ಗೆ ನಾಳೆಯೇ ಲಾಸ್ಟ್ ಡೇಟ್!

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ.50ರ ರಿಯಾಯಿತಿ ಯೋಜನೆಗೆ ಭಾರಿ ಪ್ರತಿಕ್ರಿಯೆ. 21 ದಿನಗಳಲ್ಲಿ ₹80 ಕೋಟಿಗೂ ಅಧಿಕ ದಂಡ ಸಂಗ್ರಹ. 28.84 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥ. ರಿಯಾಯಿತಿ ನಾಳೆ (ಸೆ.12) ಕೊನೆಗೊಳ್ಳಲಿದೆ.

Read Full Story
10:56 PM (IST) Sep 11

Karnataka News Live:ಮದ್ದೂರು ಪ್ರಕರಣ, ತನಿಖೆ ಮುಗಿಯುವವರೆಗೂ ಪ್ರತಿಕ್ರಿಯೆ ನೀಡುವುದಿಲ್ಲ - ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯ ಮದ್ದೂರು ಗಣಪತಿ ಗಲಾಟೆ ಪ್ರಕರಣದಲ್ಲಿ ಸ್ವಲ್ಪ ಮಟ್ಟಿಗೆ ಕಾನೂನು ಸುವ್ಯವಸ್ಥೆಯಲ್ಲಿ ವೈಫಲ್ಯವಾಗಿರುವ ಅನುಮಾನವಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಗಿಯುವವರೆಗೂ ಏನೂ ಹೇಳುವುದಿಲ್ಲ ಎಂದು ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು.

Read Full Story
10:56 PM (IST) Sep 11

Karnataka News Live:ಉಡುಪಿ ರೈಲ್ವೆ ನಿಲ್ದಾಣ ಮರು ನಾಮಕರಣ, ಶೀಘ್ರದಲ್ಲೇ ಸಿಗಲಿದೆ ಶ್ರೀಕೃಷ್ಣನ ಹೆಸರು!

Udupi Railway Station to be Renamed After Sri Krishna ಉಡುಪಿಯ ಇಂದ್ರಾಳಿ ರೈಲು ನಿಲ್ದಾಣವು ಶೀಘ್ರದಲ್ಲೇ 'ಉಡುಪಿ ಶ್ರೀ ಕೃಷ್ಣ ರೈಲು ನಿಲ್ದಾಣ' ಎಂದು ಮರುನಾಮಕರಣಗೊಳ್ಳಬಹುದು. ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರು ಈ ಪ್ರಸ್ತಾವನೆಯನ್ನು ರೈಲ್ವೆ ಸಚಿವಾಲಯಕ್ಕೆ ಸಲ್ಲಿಸಿದ್ದಾರೆ.

Read Full Story
10:42 PM (IST) Sep 11

Karnataka News Live:ಕಾಂತಾರ ಚಾಪ್ಟರ್-1 - ಸಿನಿಮಾ ರಿಲೀಸ್‌ಗೂ ಮುನ್ನವೇ ಒಟಿಟಿ ಹಕ್ಕಿನಿಂದಲೇ ಬಂಡವಾಳ ವಾಪಸ್!

ಕಾಂತಾರ ಚಿತ್ರದ ಪ್ರಿಕ್ವೆಲ್ ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದ್ದು, ಟ್ರೇಲರ್ ಈ ತಿಂಗಳ 20 ರಂದು ಬಿಡುಗಡೆಯಾಗಲಿದೆ. ಅಮೆಜಾನ್ ಪ್ರೈಮ್ ವಿಡಿಯೋ ಚಿತ್ರದ ಒಟಿಟಿ ಹಕ್ಕುಗಳನ್ನು 125 ಕೋಟಿ ರೂ.ಗೆ ಖರೀದಿಸಿದೆ. ಈ ಮೂಲಕ ಚಿತ್ರಕ್ಕೆ ಹೂಡಿದ ಬಂಡವಾಳ ರಿಲೀಸ್‌ಗೂ ಮುನ್ನವೇ ವಾಪಸ್ ಬಂದಿದೆ ಎನ್ನಲಾಗುತ್ತಿದೆ.

Read Full Story
10:23 PM (IST) Sep 11

Karnataka News Live:ಬಸ್ಸಿನಲ್ಲಿ 12 ವರ್ಷದ ಹುಡುಗಿಯ ಮೊಬೈಲ್ ಕಿತ್ತುಕೊಂಡು ಕಿಸ್ ಕೇಳಿದ ಕಂಡಕ್ಟರ್ ಮೇಲೆ ಎಫ್‌ಐಆರ್!

ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ 12ರ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಂಡಕ್ಟರ್‌ನ ಮೇಲೆ ಪೋಕ್ಸೋ ಕೇಸ್ ದಾಖಲಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಬಾಲಕಿಯ ಕುಟುಂಬಸ್ಥರು ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Read Full Story
10:18 PM (IST) Sep 11

Karnataka News Live:ವೋಟಿಗೋಸ್ಕರ ಯಾರು ಕೂಡ ರಾಜಕಾರಣ ಮಾಡಲ್ಲ - ಶಾಸಕ ಬೇಳೂರು ಗೋಪಾಲಕೃಷ್ಣ

ಧರ್ಮಾಧಾರಿತ ಕಾರ್ಯಕ್ರಮಗಳಿಗೆ ಯಾರು ತೊಂದರೆ ಕೊಡಬಾರದು. ಮದ್ದೂರಿನಲ್ಲಿ ನಡೆದ ಘಟನೆಯಲ್ಲಿ ಯಾರೇ ತಪ್ಪು ಮಾಡಿದರೂ ಒದ್ದು ಒಳಗೆ ಹಾಕಬೇಕು ಕಠಿಣವಾದ ಶಿಕ್ಷೆ ಕೊಡಬೇಕು ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

Read Full Story
09:57 PM (IST) Sep 11

Karnataka News Live:ರಂಗಭೂಮಿ ಬಗ್ಗೆ ಮಕ್ಕಳು, ಯುವಕರಲ್ಲಿ ಆಸಕ್ತಿ ಮೂಡಿಸಿ - ಹಿರಿಯ ನಟಿ ಗಿರಿಜಾ ಲೋಕೇಶ್

ಪ್ರಸ್ತುತದ ರಂಗಭೂಮಿ ಬಗ್ಗೆ ಮಕ್ಕಳು, ಯುವಕರಿಗೆ ಶಾಲಾ- ಕಾಲೇಜಿನಲ್ಲಿ ಅಭ್ಯಾಸ ಮಾಡಿಸುವ ಮೂಲಕ ಅವರಲ್ಲಿ ಆಸಕ್ತಿ ಮೂಡಿಸಬೇಕಿದೆ ಎಂದು ಹಿರಿಯ ನಟಿ ಗಿರಿಜಾ ಲೋಕೇಶ್ ಹೇಳಿದರು.

Read Full Story
09:51 PM (IST) Sep 11

Karnataka News Live:ಕಳ್ಳರಿಂದ 2 ಕೆ.ಜಿ ಬಂಗಾರ ಜಪ್ತಿ ಮಾಡಿ, 250 ಗ್ರಾಂ ಲೆಕ್ಕ ತೋರಿಸಿದ ಪೊಲೀಸಪ್ಪನ ವಿರುದ್ಧ ಐಜಿಪಿಗೆ ದೂರು!

ಸೂರ್ಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಸಂಜೀವ್ ಕುಮಾರ್ ಮಹಾಜನ್ ಮತ್ತು ಅವರ ತಂಡ ಕಳ್ಳತನ ಪ್ರಕರಣದಲ್ಲಿ ವಶಪಡಿಸಿಕೊಂಡ 2 ಕೆಜಿ ಚಿನ್ನದಲ್ಲಿ 250 ಗ್ರಾಂ ಮಾತ್ರ ದಾಖಲಿಸಿ ಉಳಿದದ್ದನ್ನು ಹಂಚಿಕೊಂಡ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ಮಾಡುವುದಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿಗೆ ವಹಿಸಲಾಗಿದೆ.

Read Full Story
09:35 PM (IST) Sep 11

Karnataka News Live:ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರವೋ ಅಥವಾ ತಾಲಿಬಾನ್ ಸರ್ಕಾರವೋ - ಪ್ರಮೋದ್ ಮುತಾಲಿಕ್ ವಾಗ್ದಾಳಿ

ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರವೋ ಅಥವಾ ತಾಲಿಬಾನ್ ಸರ್ಕಾರವೋ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಎಂದು ಶ್ರೀ ರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.

Read Full Story
08:59 PM (IST) Sep 11

Karnataka News Live:ಮದ್ದೂರು ಕಲ್ಲು ತೂರಾಟ - ಮುಸ್ಲಿಂ ಓಲೈಕೆಗಾಗಿ ಕಾಂಗ್ರೆಸ್‌ನಿಂದ ಕುಮ್ಮಕ್ಕು - ವಿಜಯೇಂದ್ರ ಟೀಕೆ

ಬಿಜೆಪಿಯವರು ಕೋಮು ಸೌಹಾರ್ದತೆ ಕದಡುತ್ತಿದ್ದಾರೆಂದು ಕಾಂಗ್ರೆಸ್ಸಿಗರು ಆರೋಪಿಸುತ್ತಾರೆ. ಮಸೀದಿಯಲ್ಲಿ ಕಲ್ಲು ಇಟ್ಟುಕೊಂಡಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಅದನ್ನು ಬಿಟ್ಟು ಇವತ್ತು ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ವಿಜಯೇಂದ್ರ ಕಿಡಿಕಾರಿದರು.

Read Full Story
08:43 PM (IST) Sep 11

Karnataka News Live:ದಿವ್ಯಾಳ 7 ತಿಂಗಳಿಗೊಂದು ಲವ್; ಹೊಸ ಪ್ರೇಮಿಯ ಎದೆಗೆ ಚಾಕು ಇರಿದ ಮಾಜಿ ಲವ್ವರ್!

ಬೆಂಗಳೂರಿನಲ್ಲಿ ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾಗುವ ವಿಚಾರದಲ್ಲಿ ಇಬ್ಬರು ಯುವಕರ ನಡುವೆ ಜಗಳ ನಡೆದು ಒಬ್ಬ ಯುವಕನ ಕೊಲೆಯಾಗಿದೆ. ಆರೋಪಿ ಮತ್ತು ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಜಯನಗರದಲ್ಲಿ ನಡೆದಿದ್ದು, ಚಾಕುವಿನಿಂದ ಇರಿದು ಯುವಕನನ್ನು ಹತ್ಯೆ ಮಾಡಲಾಗಿದೆ.

Read Full Story
08:43 PM (IST) Sep 11

Karnataka News Live:ಕೆಎಲ್‌ಇ ಸೊಸೈಟಿ ವಿದ್ಯಾವರ್ಧಕ ಸಂಘದಲ್ಲಿ ಓದಿದ್ದ ವ್ಯಕ್ತಿ ಈಗ ಪಾಟ್ನಾ ಹೈಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿ!

ಕರ್ನಾಟಕ ಮೂಲದ ನ್ಯಾಯಮೂರ್ತಿ ಪವನಕುಮಾರ್ ಭೀಮಪ್ಪ ಬಜಂತ್ರಿ ಅವರನ್ನು ಪಾಟ್ನಾ ಹೈಕೋರ್ಟ್‌ನ ಖಾಯಂ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ಹಂಗಾಮಿ ಸಿಜೆ ಆಗಿ ನೇಮಕಗೊಂಡ ಎರಡು ವಾರಗಳ ನಂತರ ಈಗ ಖಾಯಂ ಆಗಿ ನೇಮಕಗೊಂಡಿದ್ದಾರೆ. 

Read Full Story
08:33 PM (IST) Sep 11

Karnataka News Live:ಬೆಳೆ ನಷ್ಟ ಸಮೀಕ್ಷೆ ಮಾಡಿ ಮಧ್ಯಂತರ ಪರಿಹಾರ ನೀಡಿ - ಸಂಸದ ಬೊಮ್ಮಾಯಿ ಆಗ್ರಹ

ರಾಜ್ಯ ಸರ್ಕಾರ ಗ್ರಾಪಂ ಮಟ್ಟದಲ್ಲಿ ಸಮೀಕ್ಷೆ ಮಾಡಿ, ಮಧ್ಯಂತರ ಪರಿಹಾರ ಕೊಡಬೇಕು. ಕೇಂದ್ರಕ್ಕೆ ಬೆಳೆ ನಷ್ಟದ ವರದಿ ಕಳುಹಿಸಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

Read Full Story
08:15 PM (IST) Sep 11

Karnataka News Live:ಕಂಟೋನ್ಮೆಂಟ್ ರೈಲ್ವೆ ಕಾಲೋನಿ ಜೀವವೈವಿಧ್ಯ ಪಾರಂಪರಿಕ ತಾಣ - ಸಚಿವ ಈಶ್ವರ್‌ ಖಂಡ್ರೆ ಘೋಷಣೆ

ಗುತ್ತಿಗೆ ಪಡೆದ ಸಂಸ್ಥೆ ಇಲ್ಲಿರುವ 368 ಮರಗಳನ್ನು ಕಡಿಯಲು ಅನುಮತಿ ಕೋರಿತ್ತು. ಮರಗಳ ಹನನಕ್ಕೆ ಸ್ಥಳೀಯರು ಸೇರಿದಂತೆ ಪರಿಸರ ಪ್ರೇಮಿಗಳು, ವೃಕ್ಷ ಪ್ರೇಮಿಗಳು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂದು ಸಚಿವರು ಹೇಳಿದರು.

Read Full Story
08:13 PM (IST) Sep 11

Karnataka News Live:ಕರ್ನಾಟಕ ರತ್ನ, ಬದುಕಿರುವಾಗಲೇ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವಂತಾಗಲಿ!

Karnataka ratna award posthumous ಕರ್ನಾಟಕ ರತ್ನ ಪ್ರಶಸ್ತಿಯನ್ನು ಈ ವರ್ಷ ವಿಷ್ಣುವರ್ಧನ್ ಮತ್ತು ಬಿ.ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ನೀಡಲಾಗಿದೆ. ಬದುಕಿರುವಾಗಲೇ ಸಾಧಕರನ್ನು ಗುರುತಿಸಿ ಗೌರವಿಸುವ ಅಗತ್ಯವಿದೆ ಎಂದು ಲೇಖನ ಒತ್ತಿ ಹೇಳುತ್ತದೆ. 

Read Full Story
07:37 PM (IST) Sep 11

Karnataka News Live:Kodagu - ಫಸಲಿದ್ದ ಏಲಕ್ಕಿ, ಕಾಫಿ ಬೆಳೆ ಕತ್ತರಿಸಿ ಅರಣ್ಯಾಧಿಕಾರಿಗಳ ದರ್ಪ - ರೈತರು ಕಣ್ಣೀರು

ಆ ವೃದ್ಧನ ಕುಟುಂಬ ಏಲಕ್ಕಿ ತೋಟವನ್ನೇ ನಂಬಿ ಬದುಕು ದೂಡುತ್ತಿತ್ತು. ಆದರೆ ಇದು ಅರಣ್ಯ ಭೂಮಿ ಎಂದು ವಾದಿಸಿದ ಅರಣ್ಯ ಇಲಾಖೆ ಫಸಲಿದ್ದ ಏಲಕ್ಕಿ ಬೆಳೆಯನ್ನು ಕತ್ತರಿಸಿ ತುಂಡು ತುಂಡು ಮಾಡಿದೆ.

Read Full Story
07:04 PM (IST) Sep 11

Karnataka News Live:ಜಪಾನಿ ಭೂತದ ಅವತಾರದಲ್ಲಿ ರಮೇಶ್ ಅರವಿಂದ್ - ಸಖತ್ ಸದ್ದು ಮಾಡ್ತಿದೆ 'ದೈಜಿ' ಟೀಸರ್

ನಾನು ಬಾಲಚಂದರ್ ಅವರಂತಹ ಹೆಸರಾಂತ ನಿರ್ದೇಶಕರ ಜೊತೆಗೆ ಹತ್ತು ಸಿನಿಮಾ ಮಾಡಿದ್ದೇನೆ. ಮುಂದೆ ವತ್ಸ ಅವರ ಜೊತೆಗೂ ಇದೇ ರೀತಿ ಮಾಡುತ್ತೇನೆ. ಇನ್ನೂ, ನಿರ್ಮಾಪಕ ರವಿ ಕಶ್ಯಪ್ ಅವರ ಸಿನಿಮಾ ಪ್ರೀತಿ ಬಗ್ಗೆ ಎಷ್ಟು ಹೇಳಿದರು ಕಡಿಮೆ.

Read Full Story
06:37 PM (IST) Sep 11

Karnataka News Live:ದೇವರ ತೆಂಗಿನಕಾಯಿಗಾಗಿ ತಮ್ಮನ‌ ಹೆಂಡತಿಯನ್ನೇ ಬರ್ಬರವಾಗಿ ಕೊ*ಲೆ ಮಾಡಿದ ಅಣ್ಣ!

ದೇವರ ತೆಂಗಿನಕಾಯಿಗಾಗಿ ತಮ್ಮನ‌ ಹೆಂಡತಿಯನ್ನು ಅಣ್ಣನೇ ಬರ್ಬರವಾಗಿ ಕೊ*ಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ರಾಮನಗರದ ಆಮಶೇತ-ಕೊಲೇಮಾಳ ಗ್ರಾಮದಲ್ಲಿ ನಡೆದಿದೆ. ಭಾಗ್ಯಶ್ರೀ‌ ಸೋನು ವರಕ (35) ಹತ್ಯೆ*ಯಾದ ಮಹಿಳೆ.

Read Full Story
06:21 PM (IST) Sep 11

Karnataka News Live:ಸಿದ್ದರಾಮಯ್ಯ ಮನೆ ಪಕ್ಕದಲ್ಲೇ ಇರುವ ಖಾಸಗಿ ಶಾಲೆಯಿಂದ ಕನ್ನಡ ವಿರೋಧಿ ನಡೆ, ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ ದಂಡ?

fining students for Speaking in kannada ಬೆಂಗಳೂರಿನ ಸಿಂಧಿ ಪ್ರೌಢಶಾಲೆಯಲ್ಲಿ ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರವು ತನಿಖೆಗೆ ಆದೇಶಿಸಿದೆ.

Read Full Story
06:08 PM (IST) Sep 11

Karnataka News Live:ವಿಷ್ಣುವರ್ಧನ್, ಸರೋಜಾದೇವಿಗೆ ಕರ್ನಾಟಕ ರತ್ನ ಪ್ರಶಸ್ತಿ; ಕುವೆಂಪುಗೆ ಭಾರತರತ್ನ ಶಿಫಾರಸು

ಕರ್ನಾಟಕ ಸರ್ಕಾರವು ನಟ ಡಾ.ವಿಷ್ಣುವರ್ಧನ್ ಮತ್ತು ನಟಿ ಬಿ. ಸರೋಜಾದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಿದೆ. ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು. ಆರೋಗ್ಯ ಮತ್ತು ವಸತಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

Read Full Story