ಈ ವಿಚಾರವಾಗಿ ಗಲಾಟೆಗಳಾಗುತ್ತಿವೆಯಲ್ಲ ಎಂದು ಕೇಳಿದಾಗ, ಕಾನೂನಿದೆ, ಕಾನೂನು ಚೌಕಟ್ಟಿನಲ್ಲಿ ನಾವು ಮುಂದುವರಿಯುತ್ತೇವೆ. ನಾನು ರೈತರಿಗೆ ದೊಡ್ಡ ಆಫರ್ ಕೊಟ್ಟಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
- Home
- News
- State
- Karnataka News Live: ಭೂಸ್ವಾಧೀನಕ್ಕಾಗಿ ಬಿಜೆಪಿ ಸರ್ಕಾರಕ್ಕೆ ಸಹಕಾರ ಕೊಟ್ಟವರು ಈಗ ಪ್ರಶ್ನೆ ಮಾಡುತ್ತಿರುವುದೇಕೆ - ಡಿಕೆಶಿ
Karnataka News Live: ಭೂಸ್ವಾಧೀನಕ್ಕಾಗಿ ಬಿಜೆಪಿ ಸರ್ಕಾರಕ್ಕೆ ಸಹಕಾರ ಕೊಟ್ಟವರು ಈಗ ಪ್ರಶ್ನೆ ಮಾಡುತ್ತಿರುವುದೇಕೆ - ಡಿಕೆಶಿ

ಬಾಗಲಕೋಟೆ: ನಗರದ ವಿದ್ಯಾಗಿರಿಯ ಖಾಸಗಿ ಪಿಜಿಯಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.ತಾಲೂಕಿನ ಸುನಗ ತಾಂಡಾದ ನಿವಾಸಿಯಾದ ಸೀಮಾ ರಾಠೋಡ (17) ಬಾಗಲಕೋಟೆಯ ವಾಗ್ದೇವಿ ವಿಜ್ಞಾನ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ಓದುತ್ತಿದ್ದಳು. ವಿದ್ಯಾರ್ಥಿನಿ ನೇಣು ಹಾಕಿಕೊಂಡ ದೃಶ್ಯ ಕಂಡು ಪಿಜಿಯಿಂದ ಹೊರಗೋಡಿ ಬಂದ ವಿದ್ಯಾರ್ಥಿನಿಯರು ಮಾಹಿತಿ ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಶವಾಗಾರದ ಮುಂದೆ ಸೀಮಾ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು. ಪಿಜಿ ಸಿಬ್ಬಂದಿ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬೀಳಗಿ ತಾಲೂಕಿನ ಸುನಗ ತಾಂಡಾದ ನಿವಾಸಿ ಸೀಮಾ ಆಗಿದ್ದು, ಸಾವಿನಲ್ಲಿ ಸಂಶಯವಿದೆ. ಸೂಕ್ತ ತನಿಖೆ ಆಗಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ, ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Karnataka News Live 27 September 2025ಭೂಸ್ವಾಧೀನಕ್ಕಾಗಿ ಬಿಜೆಪಿ ಸರ್ಕಾರಕ್ಕೆ ಸಹಕಾರ ಕೊಟ್ಟವರು ಈಗ ಪ್ರಶ್ನೆ ಮಾಡುತ್ತಿರುವುದೇಕೆ - ಡಿಕೆಶಿ
Karnataka News Live 27 September 2025ಕರೂರು ಕಾಲ್ತುಳಿತ.. ನಟ ವಿಜಯ್ ಬಂಧನ ಸಾಧ್ಯತೆ? ಸರಣಿ ಸಾವುಗಳಿಂದ ಟಿವಿಕೆಗೆ ಭಾರೀ ಸಂಕಷ್ಟ
ನಟ ವಿಜಯ್ ಅವರ ಕರೂರು ಜಿಲ್ಲೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಉಂಟಾದ ಕಾಲ್ತುಳಿತದಲ್ಲಿ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕಾರ್ಯಕ್ರಮದ ವ್ಯವಸ್ಥೆಯಲ್ಲಾದ ಅಚಾತುರ್ಯದಿಂದಾಗಿ ಟಿವಿಕೆ ಅಧ್ಯಕ್ಷ ವಿಜಯ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
Karnataka News Live 27 September 2025ವಿದೇಶಿ ವಸ್ತುಗಳ ಖರೀದಿ-ಮಾರಾಟ ತ್ಯಜಿಸಿ - ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ
ನಮ್ಮ ಪಕ್ಷದ ಸಿದ್ಧಾಂತದಂತೆ ವ್ಯವಸ್ಥೆ ನಿಂತ ನೀರಾಗಲು ಬಯಸುವುದಿಲ್ಲ. ಸ್ವದೇಶಿ ಚಿಂತನೆಯಲ್ಲಿ ವಿದೇಶಿ ವಸ್ತುಗಳ ಮಾರಾಟ ಮತ್ತು ಖರೀದಿ ಎರಡನ್ನೂ ನಾವು ಬಿಡಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
Karnataka News Live 27 September 2025ಇಡೀ ವಿಶ್ವಕ್ಕೆ ಸಂವಿಧಾನ ಕೊಟ್ಟ ಬಸವಣ್ಣ - ನಟ ಮುಖ್ಯಮಂತ್ರಿ ಚಂದ್ರು ಹೇಳಿದ್ದೇನು?
ಅಂಬೇಡ್ಕರ್ ಸಂವಿಧಾನ ನೀಡಿದರೆ ಜಗಜ್ಯೋತಿ ಬಸವಣ್ಣ ಇಡೀ ವಿಶ್ವಕ್ಕೆ ಏಳು ವಾಕ್ಯಗಳಲ್ಲಿ ಸಂವಿಧಾನವನ್ನು ಕೊಟ್ಟಿದ್ದಾರೆ ಎಂದು ಕನ್ನಡ ಚಲನಚಿತ್ರದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.
Karnataka News Live 27 September 2025ಕಾಂತಾರ ಚಾಪ್ಟರ್ 1 ಚಿತ್ರಕ್ಕಾಗಿ ನಾನ್‌ವೆಜ್ ಬಿಟ್ಟು ವ್ರತ ಮಾಡಿ ನಟಿಸಿದ್ದು ಯಾಕೆ? ರಿಷಬ್ ಶೆಟ್ಟಿ ಬಿಚ್ಚಿಟ್ಟ ಸತ್ಯವೇನು?
ಕಾಂತಾರ ಚಾಪ್ಟರ್ 1 ಸಿನಿಮಾ ಅಕ್ಟೋಬರ್ 2 ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ. ಈ ಚಿತ್ರಕ್ಕಾಗಿ ವ್ರತ ಮಾಡಿ ನಟಿಸಿದ್ದರ ಬಗ್ಗೆ ನಟ ಮತ್ತು ಚಲನಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿದ್ದಾರೆ.
Karnataka News Live 27 September 2025KSRTC ಬಸ್ಸಿನ ಆಯುಧ ಪೂಜೆಗೆ ₹150 ಕೊಟ್ಟ ಸಾರಿಗೆ ನಿಗಮ - ಶಕ್ತಿ ಯೋಜನೆ ಲಾಭ ನಮಗಿಲ್ಲವೆಂದ ಸಿಬ್ಬಂದಿ!
'ಶಕ್ತಿ' ಯೋಜನೆಯಿಂದ ಸಾರಿಗೆ ನಿಗಮಗಳಿಗೆ ಆದಾಯ ಹೆಚ್ಚಾಗಿದ್ದರೂ, ದಸರಾ ಆಯುಧ ಪೂಜೆಗಾಗಿ ಪ್ರತಿ ಬಸ್‌ಗೆ ಕೇವಲ ₹150 ನೀಡಿರುವುದು ಸಿಬ್ಬಂದಿಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ದುಬಾರಿ ಕಾಲದಲ್ಲಿ ಇಷ್ಟು ಕಡಿಮೆ ಹಣದಲ್ಲಿ ಪೂಜೆ ಅಸಾಧ್ಯವೆಂದಿರುವ ನೌಕರರು ಹೇಳಿದದಾರೆ.
Karnataka News Live 27 September 2025ಮಲೆ ಮಹದೇಶ್ವರ ವನ್ಯಧಾಮಕ್ಕೆ ಹುಲಿ ಸಂರಕ್ಷಿತ ಪ್ರದೇಶ ಘೋಷಣೆ - ಕೇಂದ್ರ ಸಮಿತಿ ಶಿಫಾರಸು
ಬಂಡೀಪುರ, ಬಿ.ಆರ್,ಟಿ. ಹಾಗು ಕಾವೇರಿ ವನ್ಯಧಾಮದಿಂದ ವಲಸೆ ಬರುವ ವನ್ಯಜೀವಿಗಳು ಮಲೆ ಮಹದೇಶ್ವರ ವನ್ಯಧಾಮದಲ್ಲಿ ಬೀಡು ಬಿಡುತ್ತಿವೆ. ಹೀಗಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.
Karnataka News Live 27 September 2025ಅಶ್ಲೀಲ ವಿಡಿಯೋದ 'ಭಂಗಿ'ಗೆ ಆಸೆಪಟ್ಟು, ಹೆಂಡತಿಯಿಂದಲೇ ಒನಕೆ ಪೆಟ್ಟು ತಿಂದು ಜೀವಬಿಟ್ಟ ಗಂಡ!
ಕೊಪ್ಪಳದ ಮುನಿರಾಬಾದ್‌ನಲ್ಲಿ, ನಿರಂತರ ಲೈಂಗಿಕ ಕಿರುಕುಳ ಮತ್ತು ಹಣಕಾಸಿನ ಪೀಡನೆಯಿಂದ ಬೇಸತ್ತ ಪತ್ನಿಯೊಬ್ಬಳು ತನ್ನ ಪತಿಯನ್ನು ಒನಕೆಯಿಂದ ಹೊಡೆದು ಕೊಲೆ ಮಾಡಿದ್ದಾಳೆ. ಕೆಪಿಸಿಎಲ್ ಉದ್ಯೋಗಿಯಾಗಿದ್ದ ಪತಿ, ಅಶ್ಲೀಲ ವಿಡಿಯೋ ಭಂಗಿ ಅನುಕರಿಸುವಂತೆ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ.
Karnataka News Live 27 September 2025ಅಡ್ವಾನ್ಸ್ ಟಿಕೆಟ್ ಬುಕಿಂಗ್‌ನಲ್ಲಿ ಕಾಂತಾರ 1 ದಾಖಲೆ, ರಿಲೀಸ್‌ಗೂ ಮೊದಲೇ ರಿಷಬ್‌ಗೆ ಭರ್ಜರಿ ಯಶ್ಸಸ್ಸು
ಅಡ್ವಾನ್ಸ್ ಟಿಕೆಟ್ ಬುಕಿಂಗ್‌ನಲ್ಲಿ ಕಾಂತಾರ 1 ದಾಖಲೆ, ರಿಲೀಸ್‌ಗೂ ಮೊದಲೇ ರಿಷಬ್ ಶೆಟ್ಟಿಗೆ ಭರ್ಜರಿ ಯಶಸ್ಸು ಕಂಡಿದ್ದಾರೆ. ಅಕ್ಟೋಬರ್ 2ರಂದ ಸಿನಿಮಾ ಬಿಡುಗಡೆಯಾಗಲಿದೆ. ಆದರೆ ರಿಲೀಸ್‌ಗೂ ಮೊದಲೇ ಕಾಂತಾರ 1 ಸಿನಿಮಾ ಹಲವು ದಾಖಲೆ ಬರೆದಿದೆ.
Karnataka News Live 27 September 2025ದುಬೈನಲ್ಲಿ HDFC ಬ್ಯಾಂಕ್‌ಗೆ ನಿರ್ಬಂಧ - ಭಾರತೀಯರ ಹಣಕ್ಕೆ ಯುಎಇ ಶಾಕ್!
ದುಬೈನ ಹಣಕಾಸು ನಿಯಂತ್ರಕ ಸಂಸ್ಥೆ (DFSA), ಎಚ್‌ಡಿಎಫ್‌ಸಿ ಬ್ಯಾಂಕ್‌ನ ಡಿಐಎಫ್‌ಸಿ ಶಾಖೆಯ ಮೇಲೆ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳದಂತೆ ನಿರ್ಬಂಧ ವಿಧಿಸಿದೆ. ನಿಯಮ ಉಲ್ಲಂಘನೆ ಮತ್ತು ಹಳೆಯ ಕ್ರೆಡಿಟ್ ಸ್ಯೂಸ್ ಬಾಂಡ್ ಪ್ರಕರಣ ಇದಕ್ಕೆ ಕಾರಣವಾಗಿದೆ.
Karnataka News Live 27 September 2025ನರ್ಸಿಂಗ್ ವಿದ್ಯಾರ್ಥಿನಿ ಅಪಹರಿಸಿ ಇಬ್ಬರಿಂದ ಅತ್ಯಾ*ಚಾರ; ವಿಡಿಯೋ ಮಾಡಿ ನಿರಂತರ ಬೆದರಿಕೆ!
ಹಾವೇರಿ ಜಿಲ್ಲೆಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯನ್ನು ಅಪಹರಿಸಿ, ಅತ್ಯಾ*ಚಾರವೆಸಗಿ, ಆ ಕೃತ್ಯದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಲಾಗಿದೆ.
Karnataka News Live 27 September 2025ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ ಕಟ್ಟುನಿಟ್ಟು - ಸಚಿವ ಕೆ.ಎಚ್.ಮುನಿಯಪ್ಪ ಸೂಚನೆ
ಅನರ್ಹ ಬಿಪಿಎಲ್ ಕಾರ್ಡುಗಳನ್ನು ಕಟ್ಟುನಿಟ್ಟಾಗಿ ಪತ್ತೆ ಮಾಡಬೇಕು ಮತ್ತು ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಪಡಿತರದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವ ಕೆ.ಎಚ್.ಮುನಿಯಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Karnataka News Live 27 September 2025Bigg Bossನಲ್ಲಿ ಎಮೋಷನಲಿ ಬೆತ್ತಲಾಗೋದು ಇಷ್ಟವಿಲ್ಲ, ಸ್ಟಾರ್ಸ್ಗೆ ದೂರದಿಂದ್ಲೇ ನಮಸ್ಕಾರ ಎಂದ Vijay Suriya
ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳ ಪಟ್ಟಿಯಲ್ಲಿ ನಟ ವಿಜಯ್ ಸೂರ್ಯ ಅವರ ಹೆಸರು ಬಲವಾಗಿ ಕೇಳಿಬಂದಿತ್ತು. ಆದರೆ, ಭಾವನಾತ್ಮಕವಾಗಿ ಬೆತ್ತಲಾಗಲು ಇಷ್ಟವಿಲ್ಲದಿರುವುದು ಮತ್ತು ಸುದೀಪ್ ಅವರ ಮೇಲಿನ ಗೌರವವೂ ತಮ್ಮ ನಿರ್ಧಾರಕ್ಕೆ ಕಾರಣ ಎಂದು ವಿಜಯ್ ಸೂರ್ಯ ವಿವರಿಸಿದ್ದಾರೆ.
Karnataka News Live 27 September 2025ಗೀತಾ ಶಿವರಾಜ್‌ಕುಮಾರ್ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಣೆ; ದೊಡ್ಮನೆ ಸೊಸೆ ಮಾತು ಇಲ್ಲಿದೆ!
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರಿ ಹಾಗೂ ಡಾ.ರಾಜ್ ಕುಮಾರ್ ಅವರ ಸೊಸೆ ಗೀತಾ ಶಿವರಾಜ್‌ಕುಮಾರ್ ಅವರು ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ.
Karnataka News Live 27 September 2025ಬೆಂಗಳೂರು ರಸ್ತೆಗಳಲ್ಲಿ ಸಿಎಂ ರೌಂಡ್, 30 ದಿನಗಳಲ್ಲಿ ಗುಂಡಿ ಮುಚ್ಚದಿದ್ರೆ ಅಧಿಕಾರಿಗಳ ಅಮಾನತು, ಖಡಕ್ ಸೂಚನೆ
Karnataka News Live 27 September 2025ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕೈಕೊಟ್ಟ ವ್ಯಾಟ್ಸಾಪ್ ಟಿಕೆಟ್, ಕೌಂಟರ್‌ನಲ್ಲಿ ಪರದಾಟ
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕೈಕೊಟ್ಟ ವ್ಯಾಟ್ಸಾಪ್ ಟಿಕೆಟ್, ಕೌಂಟರ್‌ನಲ್ಲಿ ಪರದಾಟ ಪರಿಸ್ಥಿತಿ ಎದುರಾಗಿದೆ. ವ್ಯಾಟ್ಸಾಪ್ ಮೂಲಕ ಪ್ರಯಾಣಿಕರು ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತಿಲ್ಲ. ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಕೌಂಟರ್‌ನಲ್ಲಿ ಭಾರಿ ಕ್ಯೂ ಎದುರಾಗಿದೆ.
Karnataka News Live 27 September 2025ಕಾಂತರಾಜು ವರದಿಯನ್ನ ಯಾವ ತಿಪ್ಪೆಗೆ ಎಸೆದಿದ್ದೀರಾ? ರಾಜ್ಯ ಸರ್ಕಾರದ ವಿರುದ್ಧ ಸೋಮಣ್ಣ ವಾಗ್ದಾಳಿ
ಈ ಸರ್ಕಾರಕ್ಕೆ ತಲೆ ಇಲ್ಲ, ಬುಡ ಇಲ್ಲ, ಮಿದುಳು ಸಹಾ ಇಲ್ಲ. ಇದೊಂದು ನಿಷ್ಕ್ರಿಯ ಸರ್ಕಾರ ಎಂದು ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಸಮೀಕ್ಷೆ ವಿಚಾರವಾಗಿ ಕೇಂದ್ರ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದರು.
Karnataka News Live 27 September 2025ಓಲಾ ಸ್ಕೂಟರ್ ರಿಪೇರಿಗೆ ಕೊಟ್ಟು 1,114 ದಿನವಾಯ್ತು, ಇನ್ನೂ ರಿಪೇರಿಯಾಗಿಲ್ಲ; ಗ್ರಾಹಕನ ಆಕ್ರೋಶದ ವಿಡಿಯೋ ವೈರಲ್!
ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗೆ 1,114 ದಿನಗಳಿಂದ ಸೇವೆ ಸಿಗದ ಗ್ರಾಹಕರೊಬ್ಬರ ಆಕ್ರೋಶವು ಕಂಪನಿ ಕಳಪೆ ಸೇವೆಯನ್ನು ಬಯಲುಮಾಡಿದೆ. ರಾಷ್ಟ್ರವ್ಯಾಪಿ ಇದೇ ರೀತಿಯ ದೂರುಗಳು, ಶೋರೂಂಗಳಿಗೆ ಬೆಂಕಿ ಹಚ್ಚಿದ ಘಟನೆಗಳು ಮತ್ತು ಸರ್ಕಾರದ ತನಿಖೆಯ ಆದೇಶವು ಓಲಾ ಎದುರಿಸುತ್ತಿರುವ ಗಂಭೀರ ಬಿಕ್ಕಟ್ಟನ್ನು ಸೂಚಿಸುತ್ತದೆ.
Karnataka News Live 27 September 2025Bigg Boss ಸುಂದರ ಮನೆಗೆ ತಗಲೋ ಖರ್ಚೆಷ್ಟು? ದೊಡ್ಮನೆ ರೆಡಿ ಮಾಡಿದ್ದು ಹೇಗೆ? ಕಣ್ಮನ ತಣಿಸೋ ವಿಡಿಯೋ ಇಲ್ಲಿದೆ
ಬಿಗ್ಬಾಸ್ ಕನ್ನಡ ಸೀಸನ್ 12 ಶೀಘ್ರದಲ್ಲೇ ಆರಂಭವಾಗಲಿದ್ದು, ಈ ಬಾರಿಯ ಮನೆಯನ್ನು ನವರಾತ್ರಿ ವಿಶೇಷವಾಗಿ ಮೈಸೂರು ಅರಮನೆಯ ಥೀಮ್‌ನಲ್ಲಿ ನಿರ್ಮಿಸಲಾಗಿದೆ. ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಈ ಮನೆಯ ನಿರ್ಮಾಣ ಹೇಗೆ ಸಾಗಿದೆ ನೋಡಿ…
Karnataka News Live 27 September 2025ಐತಿಹಾಸಿಕ ಪಾತ್ರಕ್ಕೆ ಕಟ್ಟುನಿಟ್ಟಿನ ವರ್ಕೌಟ್ - 500 ವರ್ಷಗಳ ಹಿಂದಿನ ವೀರನಾಗಿ ಮಿಂಚಲು ಸಜ್ಜಾದ ಶ್ರೀಮುರಳಿ!
500 ವರ್ಷಗಳ ಹಿಂದಿನ ಐತಿಹಾಸಿಕ ಸಿನಿಮಾವೊಂದರ ಸಿದ್ಧತೆಯಲ್ಲಿದ್ದೇನೆ. ಪಾತ್ರ ಬಹಳ ಪ್ರಾಜೆಕ್ಟ್ ಎಕ್ಸೈಟಿಂಗ್ ಆಗಿದೆ. ಕತೆ ಸೊಗಸಾಗಿದೆ. ಒಂದು ನಂಬಿಕೆ ಮೇಲೆ ಮುಂದಡಿ ಇಡುತ್ತಿದ್ದೇನೆ ಎಂದಿದ್ದಾರೆ ಶ್ರೀ ಮುರಳಿ.