Bigg Boss Kannada 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಎಂದು ಬಂದಾಗ ಮನರಂಜನೆಯನ್ನು ನೀಡುತ್ತ, ಸ್ಪರ್ಧಿಗಳ ಕಾಲೆಳೆಯುತ್ತ, ತಪ್ಪಿದ್ದಲ್ಲಿ ತಪ್ಪು ಎಂದು ಹೇಳುತ್ತ ಗಿಲ್ಲಿ ನಟ ಅವರು ಅನೇಕರ ಫೇವರಿಟ್ ಆಗಿದ್ದಾರೆ. ಇವರ ಶಿಕ್ಷಣ, ಗಿಲ್ಲಿ ಎಂದು ಹೆಸರು ಬಂದಿದ್ದು ಮುಂತಾದ ವಿಚಾರಗಳಿವು.
- Home
- News
- State
- Karnataka News Live: ಬಿಗ್ ಬಾಸ್‌ಗೂ ಮುನ್ನ ಎಲ್ರಿಗೂ ನಲ್ಲಿಮೂಳೆ ತಿನಿಸಿದ್ದ ನಟರಾಜ್, 'ಗಿಲ್ಲಿ ನಟ' ಆಗಿದ್ದೇಗೆ? ಅನೇಕರಿಗೆ ಗೊತ್ತಿಲ್ಲದ ಕಥೆ
Karnataka News Live: ಬಿಗ್ ಬಾಸ್‌ಗೂ ಮುನ್ನ ಎಲ್ರಿಗೂ ನಲ್ಲಿಮೂಳೆ ತಿನಿಸಿದ್ದ ನಟರಾಜ್, 'ಗಿಲ್ಲಿ ನಟ' ಆಗಿದ್ದೇಗೆ? ಅನೇಕರಿಗೆ ಗೊತ್ತಿಲ್ಲದ ಕಥೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ಅವರ ಸ್ಥಾನ ತುಂಬುವ ಶಕ್ತಿ ಸಚಿವ ಸತೀಶ್ ಜಾರಕಿಹೊಳಿ ಅವರಿಗಿದೆ ಎಂದು ಸಿಎಂ ಪುತ್ರರೂ ಆಗಿರುವ ಎಂಎಲ್ಸಿ ಡಾ। ಯತೀಂದ್ರ ಹೇಳಿಕೆ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಕಾಂಗ್ರೆಸ್ನಲ್ಲಿ ಪರ- ವಿರೋಧ ಹೇಳಿಕೆಗಳು ಮುಂದುವರಿದಿವೆ. ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಹೇಳಿಕೆ ಬಗ್ಗೆ ಯತೀಂದ್ರ ಬಳಿಯೇ ನೀನು ಏನಂಥ ಹೇಳಿದ್ದೀಯಾ ಎಂದು ಕೇಳಿದ್ದೇನೆ. ನಾನು ಸೈದ್ಧಾಂತಿಕವಾಗಿ ಮಾತ್ರ ಮಾತನಾಡಿದ್ದೇನೆ. ಇಂತಹವರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿಲ್ಲ ಎಂದಿದ್ದಾರೆ ಎಂದು ಹೇಳಿದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಯಕತ್ವ ವಿಚಾರವಾಗಿ ನೀಡಲಾಗುತ್ತಿರುವ ಹೇಳಿಕೆ ಕುರಿತು ಯಾರ ಬಳಿ (ಹೈಕಮಾಂಡ್) ಮಾತನಾಡಬೇಕೋ ಅವರ ಬಳಿಯೇ ಮಾತನಾಡುತ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ಯತೀಂದ್ರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವುದಂತು ನಿಜ.
Karnataka News Liveಬಿಗ್ ಬಾಸ್‌ಗೂ ಮುನ್ನ ಎಲ್ರಿಗೂ ನಲ್ಲಿಮೂಳೆ ತಿನಿಸಿದ್ದ ನಟರಾಜ್, 'ಗಿಲ್ಲಿ ನಟ' ಆಗಿದ್ದೇಗೆ? ಅನೇಕರಿಗೆ ಗೊತ್ತಿಲ್ಲದ ಕಥೆ
Karnataka News Liveಬೆಂಗಳೂರು - ನಿಲ್ಲಿಸಿದ್ದ ಆಟೋದಲ್ಲಿ ಮಹಿಳೆ ಹೆಣ ಪತ್ತೆ, ನಾಲ್ಕು ಮಕ್ಕಳ ತಾಯಿಯನ್ನು ಕೊಂದ ಪ್ರಿಯಕರ!
ಬೆಂಗಳೂರಿನ ತಿಲಕ್‌ನಗರದಲ್ಲಿ ನಿಂತಿದ್ದ ಆಟೋ ರಿಕ್ಷಾದೊಳಗೆ ನಾಲ್ಕು ಮಕ್ಕಳ ತಾಯಿ ಸಲ್ಮಾ ಎಂಬುವವರ ಶವ ಪತ್ತೆಯಾಗಿದೆ. ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಆಕೆಯ ಪ್ರಿಯಕರ ಸುಬ್ರಮಣಿ ಕೊಲೆ ಮಾಡಿ ಶವವನ್ನು ಆಟೋದಲ್ಲಿಟ್ಟು ಪರಾರಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
Karnataka News LiveKarna Serial - ತೇಜಸ್ ಮರಳಿ ಬಂದ್ರೂ ಕರ್ಣ-ನಿಧಿಗೆ ನೆಮ್ಮದಿಯಿಲ್ಲ; ತಿರುಗಿಬೀಳ್ತಾಳಾ ನಿತ್ಯಾ?
Karna Serial Episode: ಪ್ರತಿ ಬಾರಿಯೂ ಕರ್ಣ ಏನೇ ಸಹಾಯ ಮಾಡಿದರೂ ಕೂಡ, ಯಾರೋ ಮಾಡಿದ ತಪ್ಪನ್ನು ಕರ್ಣನೇ ಮಾಡಿದ್ದಾನೆ ಎಂದುಕೊಂಡು ನಿತ್ಯಾ ಬೈಯ್ಯುತ್ತಿದ್ದಳು. ಮದುವೆಯಾಗುವ ಹುಡುಗ ತೇಜಸ್ ಮದುವೆ ಮನೆಯಿಂದ ಕಾಣೆಯಾದ, ಅಜ್ಜಿ ಪ್ರಾಣ ಕಳೆದುಕೊಳ್ಳುತ್ತಿದ್ದಳು. ಇದಕ್ಕೆಲ್ಲ ಕರ್ಣ ಮದ್ದು ಕೊಟ್ಟಿದ್ದಾನೆ.
Karnataka News Liveಸಿಎಂ ಬದಲಾವಣೆ ವಿಚಾರ ಹರಿಬಿಟ್ಟಿರೋದು ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳೊಕೆ - ಪಿ ರಾಜೀವ್ ಆಕ್ರೋಶ
ಸಿಎಂ ಬದಲಾವಣೆ ಚರ್ಚೆಯು ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕುವ ತಂತ್ರ ಎಂದು ಬಿಜೆಪಿ ನಾಯಕ ಪಿ. ರಾಜೀವ್ ಆರೋಪಿಸಿದ್ದಾರೆ. ರೈತರ ಆತ್ಮಹತ್ಯೆ, ನೆರೆ ಪರಿಹಾರ ನೀಡದಿರುವುದು. ಹೆಚ್ಚುತ್ತಿರುವ ಅಪರಾಧ ಸಮಸ್ಯೆ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಈ ನಾಟಕವಾಡುತ್ತಿದೆ ಎಂದು ಟೀಕಿಸಿದ್ದಾರೆ.
Karnataka News LiveKarna Serial - ಕರ್ಣನ ಮುಂದಿದೆ 'ಪಂಚ' ಸವಾಲುಗಳ ಚಕ್ರವ್ಯೂಹ - ಬಯಲಾಗುವುದೇ 'ಮೂರು' ಸತ್ಯ?
Karnataka News LiveBigg Boss - ಗಿಲ್ಲಿಗೆ ಅಶ್ವಿನಿ ಗೌಡ ಓಪನ್ ಚಾಲೆಂಜ್! ಉಲ್ಟಾ ಚಾಲೆಂಜ್ ಹಾಕಿದ ನೆಟ್ಟಿಗರು - ಗೆಲ್ಲೋರು ಯಾರು?
Karnataka News Liveಸ್ನೇಹಿತೆಯ ಎಂಗೇಜ್‌ಮೆಂಟ್‌ಗೆ ಬಂದು ಹೋಮ್ ಸ್ಟೇಯಲ್ಲೇ ಹೆಣವಾದ ಯುವತಿ!
Bengaluru Youth Dies Mysteriously in Chikkamagaluru Homestay Before Friend Engagement ಗೆಳತಿಯ ನಿಶ್ಚಿತಾರ್ಥಕ್ಕೆಂದು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಂದಿದ್ದ 27 ವರ್ಷದ ಯುವತಿ, ಮೂಡಿಗೆರೆ ತಾಲೂಕಿನ ಹೋಮ್‌ಸ್ಟೇ ಬಾತ್‌ರೂಮ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.
Karnataka News Liveವಿದೇಶಿ ಬ್ಯಾಂಕ್ ಉದ್ಯೋಗಿಯನ್ನು ಬಲಿ ಪಡೆದ ಬೆಂಗಳೂರು ರಸ್ತೆ ಗುಂಡಿ - ಅಣ್ಣನ ಕಣ್ಣೆದುರೇ ನರಳಿ ಪ್ರಾಣಬಿಟ್ಟ ತಂಗಿ!
ಬೆಂಗಳೂರಿನ ಮಾದನಾಯಕನಹಳ್ಳಿ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋದ ಟ್ರಕ್ ಡಿಕ್ಕಿ ಹೊಡೆದು ಬ್ಯಾಂಕ್ ಉದ್ಯೋಗಿ ಪ್ರಿಯಾಂಕಾ ಕುಮಾರಿ ಪೂನಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಣ್ಣನೊಂದಿಗೆ ಮೆಟ್ರೋ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
Karnataka News Liveಪರಪ್ಪನ ಅಗ್ರಹಾರ ಸಿಬ್ಬಂದಿಯಿಂದಲೇ ಅಕ್ರಮ ಸ್ಮಾರ್ಟ್‌ಫೋನ್, ಈಯರ್‌ಫೋನ್ ಜೈಲೊಳಗೆ ಸಾಗಾಟ, ಓರ್ವ ಬಂಧನ!
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ, ಜೈಲಿನೊಳಗೆ ಸ್ಮಾರ್ಟ್‌ಫೋನ್ ಮತ್ತು ಇಯರ್‌ಫೋನ್‌ಗಳನ್ನು ಕೊಂಡೊಯ್ಯಲು ಯತ್ನಿಸಿದ ಸಿಬ್ಬಂದಿ ಅಮರ್ ಪ್ರಾಂಜೆಯನ್ನು ಬಂಧಿಸಲಾಗಿದೆ. ಈ ಘಟನೆಯು ಜೈಲಿನ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Karnataka News LiveBigg Boss - ನಿಮ್ಗೂ ಸೆಡೆ ಅಂತ ಕರೀಲಾ? ಅವ್ರು ಹಾಗೆ ಅಂದಾಗ ನೀವ್ಯಾಕೆ ಸೈಲೆಂಟ್ ಇದ್ರಿ? ಸುದೀಪ್ ಖಡಕ್ ಕ್ಲಾಸ್
ಬಿಗ್ಬಾಸ್ 12ರಲ್ಲಿ ರಕ್ಷಿತಾ ಶೆಟ್ಟಿಗೆ 'ಸೆಡೆ' ಎಂದು ನಿಂದಿಸಿದ್ದ ಕಾಕ್ರೋಚ್ ಸುಧಿಗೆ ಹಾಗೂ ಸೈಲೆಂಟ್ ಇದ್ದ ಅಶ್ವಿನಿ ಗೌಡ ಅವರಿಗೆ ವಾರಾಂತ್ಯದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ತರಗತಿ ತೆಗೆದುಕೊಂಡಿದ್ದಾರೆ. ಮಾತಿನ ಭರದಲ್ಲಿ ತಪ್ಪಾಯಿತು ಎಂದು ಸುಧಿ ಕ್ಷಮೆ ಕೇಳಿದರೂ, ಸುದೀಪ್ ಹೇಳಿದ್ದೇನು?
Karnataka News Liveಹಲಾಲ್ ಪದಾರ್ಥಗಳ ನಿಷೇಧಕ್ಕೆ ಅಮಿತ್ ಶಾಗೆ ಪತ್ರ ಬರೆದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಲಾಲ್ ಪ್ರಮಾಣೀಕೃತ ಪದಾರ್ಥಗಳು ಮತ್ತು ಸಂಸ್ಥೆಗಳನ್ನು ನಿಷೇಧಿಸುವಂತೆ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಹಲಾಲ್‌ನಿಂದ ಬರುವ ಹಣವನ್ನು ಉಗ್ರ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ.
Karnataka News Liveಸ್ನೇಹಿತೆಯ ಖಾಸಗಿ ವಿಡಿಯೋ ಕದ್ದು 2 ಕೋಟಿಗೆ ಬ್ಲ್ಯಾಕ್ಮೇಲ್ - 'ಬ್ಯೂಟಿ ಕ್ವೀನ್' ಕನ್ನಡತಿಯ ಖತರ್ನಾಕ್ ಕೃತ್ಯ! FIR ದಾಖಲು
'ಮಿಸೆಸ್ ಇಂಡಿಯಾ ಬ್ಯೂಟಿಫುಲ್ ಸ್ಮೈಲ್' ವಿಜೇತೆ, ನಟಿ ಆಶಾ ಜೋಯಿಸ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. 61 ವರ್ಷದ ಮಹಿಳೆಯೊಬ್ಬರ ಖಾಸಗಿ ಡೇಟಾ ಕದ್ದು, 2 ಕೋಟಿ ರೂಪಾಯಿಗಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಾಗಿದೆ.
Karnataka News Liveಡಿಕೆಶಿ vs ಹೆಚ್‌ಡಿಕೆ ವಾಕ್ಸಮರ - ಪಬ್ಲಿಕ್ ಮುಂದೆ ಉತ್ತರ ಕೊಡು ನೀನು, ಬರೀ ಹಿಟ್ ಆ್ಯಂಡ್ ರನ್ ಮಾಡೋದಲ್ಲ ಎಂದ ಡಿಕೆಶಿ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಿಟ್ ಆ್ಯಂಡ್ ರನ್' ರಾಜಕೀಯಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಬಹಿರಂಗ ಚರ್ಚೆಗೆ ಸವಾಲು ಹಾಕಿದ್ದಾರೆ. ರಾಜಕೀಯ ದಲ್ಲಿ ಚರ್ಚೆವಾದ ವಿವಾದ ಇವೆಲ್ಲಾ ಇರಬೇಕು ಎಂದಿದ್ದಾರೆ.
Karnataka News Liveನೀವು ಇದನ್ನೇ ಕುಡಿದಿಲ್ಲ ಅಂದ್ರೆ, ಎಷ್ಟು ಡಯೆಟ್, ವರ್ಕೌಟ್ ಮಾಡಿದ್ರೂ ವೇಸ್ಟ್ ಕಣ್ರೀ..! Weight Loss Tips
Weight Loss Drink: ಕೆಲವರು ಡಯೆಟ್ ಮಾಡುತ್ತಾರೆ, ವರ್ಕೌಟ್ ಮಾಡುತ್ತಾರೆ, ಆದರೂ ಸಣ್ಣ ಆಗೋದಿಲ್ಲ ಎಂದು ಆರೋಪ ಮಾಡುತ್ತಾರೆ. ಇದಕ್ಕೆ ಕಾರಣ ಏನು ಎಂದು ಕೆಲವರಿಗೆ ಸಂದೇಹ ಇರಬಹುದು. 14kg ತೂಕ ಇಳಿಸಿಕೊಂಡ ವ್ಯಕ್ತಿಯೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ.
Karnataka News Liveಜಾಹ್ನವಿ ಆಡಿದ ಅದೊಂದು ಮಾತಿಗೆ ಕಿಚ್ಚ ಸುದೀಪ್ ಮುಂದೆ ತೊಡೆ ತಟ್ಟಿದ ರಿಷಾ; ರಣರಂಗವಾದ Bigg Boss ಮನೆ!
Bigg Boss Kannada Season 12: ಬಿಗ್ ಬಾಸ್ ಮನೆಯಲ್ಲಿ ಇಷ್ಟುದಿನ ವೀಕ್ ಡೇಸ್‌ನಲ್ಲಿ ಜಗಳ ಆಡುತ್ತಿದ್ದರು. ಈಗ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಮುಂದೆ ಕಿತ್ತಾಡಿದ್ದಾರೆ. ಜಾಹ್ನವಿ ಬಳಸಿದ ಅದೊಂದು ಪದಕ್ಕೆ ಇಷ್ಟೆಲ್ಲ ಜಗಳ ನಡೆದಿದೆ.
Karnataka News LiveDies Irae Movie - ಸೂಪರ್ ಹಿಟ್ 'ಹೃದಯಂ' ಬಳಿಕ ಹೊಸ ಸಿನಿಮಾದಲ್ಲಿ ಮೋಹನ್‌ಲಾಲ್ ಪುತ್ರ ಪ್ರಣವ್; ಎಂಥ ಲುಕ್!
ಹೃದಯಂ ಎಂಬ ಸಿನಿಮಾದಲ್ಲಿ ನಟಿಸಿ, ಭರ್ಜರಿ ಹಿಟ್ ಪಡೆದುಕೊಂಡಿದ್ದ ನಟ ಪ್ರಣವ್ ಮೋಹನ್‌ಲಾಲ್ ಈಗ ಇನ್ನೊಂದು ಸಿನಿಮಾದಲ್ಲಿ ನಟಿಸಿದ್ದಾರೆ. Dies Irae ಎಂ ಚಿತ್ರದಲ್ಲಿ ನಟಿಸಿದ್ದು ಟ್ರೇಲರ್ ರಿಲೀಸ್ ಆಗಿದೆ.
Karnataka News Liveಕಾವ್ಯಾ ಶೈವ ಸಿಕ್ಮೇಲೆ ಗಿಲ್ಲಿ ನಟ ಸಕತ್ ಸ್ಟೈಲಿಷ್! Bigg Boss ಜೋಡಿಯ ಫೋಟೋ ನೋಡಿ ಫ್ಯಾನ್ಸ್ ಫುಲ್ ಖುಷ್
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಬಾಂಧವ್ಯ ಗಮನ ಸೆಳೆಯುತ್ತಿದ್ದು, ಅಭಿಮಾನಿಗಳು ತಮ್ಮ ಕಲ್ಪನೆಯಲ್ಲಿ ಇವರಿಬ್ಬರ ಸ್ಟೈಲಿಶ್ ಎಐ ಫೋಟೋಗಳನ್ನು ರಚಿಸಿ ವೈರಲ್ ಮಾಡಿದ್ದಾರೆ. ಕಾವ್ಯಾ ಮಾತಿನಂತೆ ಗಿಲ್ಲಿ ತಮ್ಮ ಗಡ್ಡದ ಶೈಲಿಯನ್ನು ಬದಲಾಯಿಸಲು ಮುಂದಾಗಿರುವುದೂ ನಡೆದಿದೆ.
Karnataka News Liveಎರಡೂವರೆ ವರ್ಷಗಳ ಬಳಿಕ ಸಚಿವ ಸಂಪುಟ ಪುನರ್ ರಚನೆ ಖಚಿತ ಪಡಿಸಿದ ಸಚಿವ ಕೃಷ್ಣ ಬೈರೇಗೌಡ!
ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯದಲ್ಲಿ ಸಚಿವ ಸಂಪುಟ ಪುನರ್‌ರಚನೆ ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ನಾಯಕತ್ವ ಬದಲಾವಣೆಯ ನಿರ್ಧಾರ ಹೈಕಮಾಂಡ್‌ಗೆ ಸೇರಿದ್ದು, ಎರಡಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಹೈಕಮಾಂಡ್ ಸೂಚಿಸಿದರೆ ಸಚಿವ ಸ್ಥಾನ ತ್ಯಜಿಸಲು ಸಿದ್ಧ ಎಂದಿದ್ದಾರೆ.
Karnataka News Liveಟಿಸಿಎಸ್ ಉದ್ಯೋಗದ ಕರಾಳ ಸತ್ಯ - 13 ವರ್ಷದ ಸುದೀರ್ಘ ಸೇವೆ ಕೇವಲ 30 ನಿಮಿಷದಲ್ಲಿ ಅಂತ್ಯ!
13 ವರ್ಷಗಳ ಕಾಲ ಟಿಸಿಎಸ್‌ನಲ್ಲಿ ಸೇವೆ ಸಲ್ಲಿಸಿದ್ದ ಟೆಕ್ಕಿಯೊಬ್ಬರನ್ನು ಕೇವಲ 30 ನಿಮಿಷಗಳಲ್ಲಿ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ ಎಂದು ಐಟಿ ಉದ್ಯೋಗಿಗಳ ವೇದಿಕೆ (FITE) ಆರೋಪಿಸಿದೆ.
Karnataka News Liveಬೇರೆ ಖರ್ಚು ಮಾಡಿಲ್ಲ, ಮನೆಯಲ್ಲಿದ್ದುದನ್ನೇ ತಿಂದು 14kg ಸಣ್ಣಗಾದ ಕನ್ನಡಿಗ! Weight Loss Tips ಕೊಟ್ರು
Weight Loss Food: ಮನೆಯಲ್ಲಿದ್ದ ಆಹಾರ ತಿಂದು, ಡಯೆಟ್ ಮಾಡಿ, ವಾಕಿಂಗ್ ಮಾಡಿ ಸಣ್ಣಗಾಗಿದ್ದು ಹೇಗೆ ಎಂದು ಶ್ರೀಶೈಲ ಮುಗದಂ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ, ಹಾಗಾದರೆ ಏನದು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.