10:53 PM (IST) Aug 14

Karnataka News Live 14th August: ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಶರಣಬಸವಪ್ಪ ಅಪ್ಪನವರು ಲಿಂಗೈಕ್ಯ

ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಡಾ. ಶರಣಬಸವಪ್ಪ ಅಪ್ಪನವರು ಲಿಂಗೈಕ್ಯರಾಗಿದ್ದಾರೆ. ಚಿಕಿತ್ಸೆ ಮುಂದುವರೆದಿದ್ದರೂ, ಇಂದು ಸಂಜೆ ಮಹಾಮನೆಯಲ್ಲಿ ಕೊನೆಯುಸಿರೆಳೆದರು. ಕಲ್ಯಾಣ ಕರ್ನಾಟಕದ ಶಿಕ್ಷಣ ಕ್ರಾಂತಿಯ ಹರಿಕಾರರಾಗಿದ್ದರು.
Read Full Story
10:01 PM (IST) Aug 14

Karnataka News Live 14th August: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ರಾಜ್ಯದಲ್ಲಿ 1 ವಾರ ಮಳೆ - ಹವಾಮಾನ ಇಲಾಖೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನೂ ಒಂದು ವಾರ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Read Full Story
09:54 PM (IST) Aug 14

Karnataka News Live 14th August: ಆಸ್ತಿ ನೋಂದಣಿ ದಾಖಲೆ ಡಿಜಿಟಲ್‌ ಮಾದರಿಯಲ್ಲಿ ಇರುವುದು ಕಡ್ಡಾಯ - ಸಚಿವ ಕೃಷ್ಣ ಬೈರೇಗೌಡ

ತಿದ್ದುಪಡಿ ವಿಧೇಯಕದ ಮೂಲಕ ಆಸ್ತಿ ನೋಂದಣಿ ಸರಳೀಕರಣ ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ತಾಂತ್ರಿಕತೆ ಬಳಸಿಕೊಂಡು ಅಧಿಕಾರಿಗಳ ಮಧ್ಯಪ್ರವೇಶವನ್ನು ಸಕ್ರಿಯವಾಗಿ ಕಡಿಮೆ ಮಾಡಲಾಗಿದೆ.

Read Full Story
09:28 PM (IST) Aug 14

Karnataka News Live 14th August: ಧರ್ಮಸ್ಥಳ ಕೇಸ್ ಅಪ್‌ಡೇಟ್ - ಮಹಿಳಾ ಆಯೋಗದಿಂದ ಪೊಲೀಸ್ ಇಲಾಖೆಗೆ ಪತ್ರ

ಧರ್ಮಸ್ಥಳದಲ್ಲಿ ನೂರಾರು ಶವಗಳ ಆರೋಪದ ತನಿಖೆಯಲ್ಲಿ ಯಾವುದೇ ಅಸ್ಥಿಪಂಜರಗಳು ಪತ್ತೆಯಾಗಿಲ್ಲ. ಮಹಿಳಾ ಆಯೋಗವು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದು ಕೆಲವೊಂದು ಮಾಹಿತಿಯನ್ನು ಕೇಳಿದೆ.

Read Full Story
09:10 PM (IST) Aug 14

Karnataka News Live 14th August: ಕೆರೆಯಲ್ಲಿ ಕ್ಯಾಟ್‌ಫಿಶ್‌ ಸಾಕಿದರೆ ಕೇಸು - ಸಚಿವ ಮಂಕಾಳ ವೈದ್ಯ

ನಿಷೇಧವಿದ್ದರೂ ಆಫ್ರಿಕನ್‌ ಕ್ಯಾಟ್‌ಫಿಶ್‌ ಸಾಕುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವ ಮಂಕಾಳ ಎಸ್‌.ವೈದ್ಯ ತಿಳಿಸಿದರು.

Read Full Story
08:10 PM (IST) Aug 14

Karnataka News Live 14th August: ದರ್ಶನ್, ಪವಿತ್ರಾ ಗೌಡ ಸೇರಿ ಐವರಿಗೆ ಮತ್ತೊಮ್ಮೆ ಪರಪ್ಪನ ಆಗ್ರಹಾರ ಜೈಲಿಗೆ ಶಿಫ್ಟ್

ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾಗೊಂಡ ನಂತರ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಐವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಐಷಾರಾಮಿ ಜೀವನದ ಫೋಟೋ ವೈರಲ್ ಆದ ಬಳಿಕ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್‌ರನ್ನು ಶಿಫ್ಟ್ ಮಾಡಲಾಗುತ್ತಿದೆ.

Read Full Story
08:04 PM (IST) Aug 14

Karnataka News Live 14th August: ಕೈಗಾರಿಕೆ ಸ್ಥಾಪಿಸಲು 2 ಎಕ್ರೆವರೆಗೆ ಬಳಸಲು ಭೂಪರಿವರ್ತನೆ ಅನಗತ್ಯ - ಸಚಿವ ಕೃಷ್ಣ ಬೈರೇಗೌಡ

ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಂಡಿಸಿದ ವಿಧೇಯಕದ ಮೇಲೆ ಸುದೀರ್ಘ ಚರ್ಚೆ ಹಾಗೂ ಸಲಹೆಗಳ ಬಳಿಕ ಮೂಲಕ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.

Read Full Story
07:53 PM (IST) Aug 14

Karnataka News Live 14th August: ರಸಗೊಬ್ಬರ ಸಮಸ್ಯೆಗೆ ಕೇಂದ್ರದ ಮಲತಾಯಿ ಧೋರಣೆ ಕಾರಣ - ಸಚಿವ ಚಲುವರಾಯಸ್ವಾಮಿ ಟೀಕೆ

ರಸಗೊಬ್ಬರ ಸಮಸ್ಯೆಗೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ.

Read Full Story
07:43 PM (IST) Aug 14

Karnataka News Live 14th August: ಆಶಾ ಕಾರ್ಯರ್ತೆಯರಿಗೆ ₹1500 ವೇತನ ಹೆಚ್ಚಳ - ಸಚಿವ ದಿನೇಶ್‌ ಗುಂಡೂರಾವ್‌

ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಮಾಸಿಕ 1500 ರು. ಗೌರವಧನ ಹೆಚ್ಚಿಸಲು ತೀರ್ಮಾನಿಸಿದ್ದೇವೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

Read Full Story
07:29 PM (IST) Aug 14

Karnataka News Live 14th August: ದಲಿತ ಅಸ್ತ್ರದಿಂದ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ - ಸಂಸದ ಡಾ.ಕೆ.ಸುಧಾಕರ್

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಜನರಿಗಾಗಿ ತಾವು ಮಾಡಿರುವ ಕೆಲಸಗಳು ಜನರಿಗೆ ತಿಳಿದಿದೆ. ಈ ಅಗ್ನಿಪರೀಕ್ಷೆಯಿಂದ ಶೀಘ್ರ ಹೊರಗೆ ಬರುತ್ತೇನೆ ಎಂದು ಸಂಸದ ಡಾ.ಕೆ.ಸುಧಾಕರ್‌ ಹೇಳಿದರು.

Read Full Story
06:49 PM (IST) Aug 14

Karnataka News Live 14th August: ದರ್ಶನ್ ಜಾಮೀನು ರದ್ದು ತೀರ್ಪು ಲ್ಯಾಂಡ್‌ಮಾರ್ಕ್ ಎಂದು ಘೋಷಿಸಿದ ಸುಪ್ರೀಂ, ಹೈಕೋರ್ಟ್‌ಗೆ ರವಾನೆಗೆ ಸೂಚನೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಆಘಾತ ನೀಡಿದೆ. ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿದೆ. ಜೈಲಿನಲ್ಲಿ ವಿಐಪಿ ಟ್ರೀಟ್‌ಮೆಂಟ್‌, ಸಾಕ್ಷ್ಯ ನಾಶದ ಪ್ರಯತ್ನ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಈ ತೀರ್ಪು ನೀಡಲಾಗಿದೆ.

Read Full Story
06:47 PM (IST) Aug 14

Karnataka News Live 14th August: ದರ್ಶನ್ ಬಂಧನದ ಬಳಿಕ ಡೆವಿಲ್ ಅಭಿಮಾನಿಗಳಿಗೆ ಮತ್ತೊಂದು ಬೇಸರದ ನ್ಯೂಸ್

ಈ ಸುದ್ದಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ದರ್ಶನ್ ಬಂಧನದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

Read Full Story
06:47 PM (IST) Aug 14

Karnataka News Live 14th August: ಜಯದೇವ ಹೃದಯ, ಕಿದ್ವಾಯಿ ಕ್ಯಾನ್ಸರ್ ಉಪಕೇಂದ್ರ ಸ್ಥಾಪನೆ ಪ್ರಸ್ತಾವನೆ ಇಲ್ಲ - ಶರಣ ಪ್ರಕಾಶ್ ಪಾಟೀಲ್

ಜಯದೇವ ಹೃದ್ರೋಗ ಸಂಸ್ಥೆ ಮತ್ತು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ಉಪ ಕೇಂದ್ರಗಳನ್ನು ಸ್ಥಾಪಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

Read Full Story
06:14 PM (IST) Aug 14

Karnataka News Live 14th August: ಆಗೋದೆಲ್ಲ ಆಗಲಿ ಹಾಯಾಗಿರು - ಬಂಧನಕ್ಕೂ ಮುನ್ನ ಡಿ-ಗ್ಯಾಂಗ್‌ನ ಆರೋಪಿಯ ಬಿಂದಾಸ್‌ ಸ್ಟೇಟಸ್

ಮಗ ಜೈಲುಪಾಲು ಆಗ್ತಿರೊ ವಿಷಯ ತಿಳಿದು ಹೆತ್ತಕರಳು ಕಣ್ಣೀರು ಹಾಕುತ್ತಿದ್ರೆ ಡಿ-ಗ್ಯಾಂಗ್ ಆರೋಪಿ ಅನುಕುಮಾರ್, ಆಗೋದೆಲ್ಲ ಆಗಲಿ ಹಾಯಾಗಿರು, ಏನೇ ಎದುರಾಗಲಿ ಖುಷಿಯಾಗಿರು' ಎಂಬ ಸ್ಟೇಟಸ್ ಹಾಕಿಕೊಂಡಿದ್ದಾನೆ.

Read Full Story
06:09 PM (IST) Aug 14

Karnataka News Live 14th August: ದೂರದರ್ಶನ ಕೇಂದ್ರ ಮುಚ್ಚದಂತೆ ಕೇಂದ್ರ ಸರ್ಕಾರಕ್ಕೆ ಪತ್ರ - ಸಿಎಂ ಸಿದ್ದರಾಮಯ್ಯ

ದೂರದರ್ಶನ ಕೇಂದ್ರದ ಅಭಿವೃದ್ಧಿ ಕೇಂದ್ರದ ಕೈಯಲ್ಲಿದೆ. ದೂರದರ್ಶನ ಕೇಂದ್ರ ಮುಚ್ಚುವ ಅಧಿಕೃತ ಮಾಹಿತಿ ಕೇಂದ್ರದಿಂದ ಲಭ್ಯವಾದಲ್ಲಿ ತಕ್ಷಣ ಪತ್ರ ಬರೆದು, ಇದು ಮುಚ್ಚದಂತೆ ಆಗ್ರಹಿಸಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.

Read Full Story
06:05 PM (IST) Aug 14

Karnataka News Live 14th August: ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿಗೆ ಸರ್ಕಾರ ಯಾವುದೇ ಕಾಲಮಿತಿ ನೀಡಿಲ್ಲ - ಗೃಹ ಸಚಿವರ ಸ್ಪಷ್ಟನೆ

ಧರ್ಮಸ್ಥಳದಲ್ಲಿ ನಡೆದ ಶವಗಳ ಹೂಳುವಿಕೆ ಪ್ರಕರಣದ ತನಿಖೆಗೆ ಸರ್ಕಾರ ಯಾವುದೇ ಕಾಲಮಿತಿ ಹಾಕಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ವರದಿ ಬಂದ ನಂತರ ಹೆಚ್ಚಿನ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ ಅವರು, ಎಸ್ಐಟಿಗೆ ಸಾಕ್ಷಿದಾರರ ಗಂಭೀರತೆ ಅರಿವಿದೆ ಎಂದರು. ಸತ್ಯ ಹೊರಬರಬೇಕೆಂದು ಹೇಳಿದರು

Read Full Story
05:44 PM (IST) Aug 14

Karnataka News Live 14th August: Darshan Arrest - ನಿಜವಾಗೇ ಹೋಯ್ತು ದರ್ಶನ್​ ಕುರಿತ ಕೋಡಿಶ್ರೀ ನುಡಿ - ನಟನ ಭವಿಷ್ಯವೇನು?

ನಟ ದರ್ಶನ್​, ಪವಿತ್ರಾ ಗೌಡ ಸೇರಿದಂತೆ ಇನ್ನು ಇತರರಿಗೆ ಸಿಕ್ಕ ಜಾಮೀನನ್ನು ಸುಪ್ರೀಂಕೋರ್ಟ್​ ರದ್ದುಗೊಳಿಸುತ್ತಲೇ ಎಲ್ಲರ ಅರೆಸ್ಟ್​ ಆಗಿದೆ. ಇದೇ ವೇಳೆ ಕೋಡಿಮಠದ ಶ್ರೀಗಳ ವಿಡಿಯೋ ವೈರಲ್​ ಆಗಿದೆ.

Read Full Story
05:38 PM (IST) Aug 14

Karnataka News Live 14th August: ದರ್ಶನ್ ಜಾಮೀನು ರದ್ದು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ, ಪೊಲೀಸರಿಗೆ ಸೂಚನೆ

ರೇಣುಕಾಸ್ವಾಮಿ ಹ*ತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತು ಡಿ ಗ್ಯಾಂಗ್ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕಾನೂನು ಪಾಲನೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
Read Full Story
05:05 PM (IST) Aug 14

Karnataka News Live 14th August: ಕರುನಾಡಿನ ಗೃಹಲಕ್ಷ್ಮೀಯರಿಗೆ ಗಣೇಶ ಹಬ್ಬಕ್ಕೆ ಸಿಹಿ ಸುದ್ದಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉಡುಪಿಯಲ್ಲಿ ತಿಳಿಸಿದ್ದಾರೆ. ಫಲಾನುಭವಿಗಳ ಖಾತೆಗೆ ಶೀಘ್ರದಲ್ಲೇ ಹಣ ಜಮೆಯಾಗಲಿದೆ. ಗಣೇಶ ಚತುರ್ಥಿ ಒಳಗೆ ಜುಲೈ ತಿಂಗಳ ಹಣ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ.
Read Full Story
04:58 PM (IST) Aug 14

Karnataka News Live 14th August: ಬೈಸಿಕಲ್‌ಗಳಿಂದ ಬಿಲಿಯನ್‌ಗಳ ತನಕ - ಭಾರತೀಯ ಬಾಹ್ಯಾಕಾಶ ಕ್ಷೇತ್ರ ಸಾಗಿಬಂದ ಹಾದಿ

ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಬೇರು 1962ರಲ್ಲಿ ಆರಂಭಗೊಂಡಿತು. ಆಗ ಭಾರತದ ಸರ್ವಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ವಿಕ್ರಮ್ ಸಾರಾಭಾಯಿ ಅವರ ನೇತೃತ್ವದಲ್ಲಿ ಇಂಡಿಯನ್ ನ್ಯಾಷನಲ್ ಕಮಿಟಿ ಫಾರ್ ಸ್ಪೇಸ್ ರಿಸರ್ಚ್ ಸ್ಥಾಪನೆಗೊಂಡಿತು.

Read Full Story