11:43 PM (IST) Jun 13

Karnataka News Live 13th June 2025Rainy Season Flower Care - ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಮಾತ್ರ ಹೂಬಿಡುವ ಈ 5 ಸಸ್ಯಗಳು ಬಗ್ಗೆ ತಿಳಿಯಿರಿ!

ಜೂನ್-ಜುಲೈನಲ್ಲಿ ಈ 5 ಹೂವಿನ ಸಸ್ಯಗಳನ್ನು ನೆಡಿ ಮತ್ತು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಿಮ್ಮ ತೋಟವು ವರ್ಣರಂಜಿತ ಹೂವುಗಳಿಂದ ಅರಳುವುದನ್ನು ನೋಡಿ. ಜಿನಿಯಾ, ಚೆಂಡು ಹೂವು, ಪೋರ್ಚುಲಕ, ಕ್ಯಾಲೆಡುಲ ಮತ್ತು ಬಾಲ್ಸಮ್‌ನಂತಹ ಸಸ್ಯಗಳು ಬೇಸಿಗೆಯಲ್ಲೂ ಸುಲಭವಾಗಿ ಬೆಳೆಯುತ್ತವೆ

Read Full Story
11:23 PM (IST) Jun 13

Karnataka News Live 13th June 2025ಕೊಡಗು ಕಾಫಿ ತೋಟದ ಲೈನ್ ಮನೆಗಳಲ್ಲಿ 470ಕ್ಕೂ ಹೆಚ್ಚು ಬಾಲ ಗರ್ಭಿಣಿಯರು ಪತ್ತೆ!

ಕೊಡಗು ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 470 ಕ್ಕೂ ಹೆಚ್ಚು ಬಾಲಕಿಯರು ಗರ್ಭಿಣಿಯರಾಗಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕಾಫಿ ತೋಟಗಳ ಲೈನ್ ಮನೆಗಳಲ್ಲಿ ವಾಸಿಸುವ ಕುಟುಂಬಗಳ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರಾಗಿದ್ದು, ವ್ಯವಸ್ಥೆಯ ದುರ್ಬಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Read Full Story
11:04 PM (IST) Jun 13

Karnataka News Live 13th June 2025ರೀಲ್ಸ್ ಶೋಕಿಗೆ ದಾನ ಮಾಡಿದ್ರೆ ಪುಣ್ಯ ಬರೊಲ್ಲ; ಚಾಣಕ್ಯ ನೀತಿಯಲ್ಲಿ ಉಲ್ಲೇಖ!

ದಾನ ಮಾಡೋದು ಪುಣ್ಯದ ಕೆಲಸ. ಆದರೆ ತಪ್ಪು ರೀತಿಯಲ್ಲಿ ಮಾಡಿದ ದಾನ ಆರ್ಥಿಕ ಸಮಸ್ಯೆ ತರುತ್ತೆ. ಪ್ರದರ್ಶನಕ್ಕಾಗಿ ರೀಲ್ಸ್ ಮಾಡಿ ದಾನ ಮಾಡಿದರೆ ಪುಣ್ಯ ಲಭಿಸುವುದಿಲ್ಲ, ಪಾಪ ಸುತ್ತಿಕೊಳ್ಳಲಿದೆ ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖ ಮಾಡಲಾಗಿದೆ.

Read Full Story
10:35 PM (IST) Jun 13

Karnataka News Live 13th June 2025ಗರ್ಭಿಣಿ ಹಸುವಿನ ಕೆಚ್ಚಲು ಕತ್ತರಿಸಿದ ದುಷ್ಕರ್ಮಿಗಳು; ಪಶು ಹಿಂಸೆ ವಿರುದ್ಧ ಆಕ್ರೋಶ

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಗರ್ಭಿಣಿ ಹಸುವಿನ ಕೆಚ್ಚಲು ಕೊಯ್ದಿರುವ ಘಟನೆ ನಡೆದಿದೆ. ದುಷ್ಕರ್ಮಿಗಳು ಹಸುವಿನ ಮೊಲೆಯ ತುದಿಯನ್ನು ಕತ್ತರಿಸಿದ್ದು, ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Read Full Story
10:05 PM (IST) Jun 13

Karnataka News Live 13th June 2025ದುರಂತದ ಬೆನ್ನಲ್ಲೇ ಏರ್ ಇಂಡಿಯಾದ ಎಲ್ಲಾ ಡ್ರೀಮ್‌ಲೈನರ್ ವಿಮಾನ ತಪಾಸಣೆಗೆ ಸರ್ಕಾರದ ಆದೇಶ

ಏರ್ ಇಂಡಿಯಾ ಪತನದ ನಂತರ, DGCA ಬೋಯಿಂಗ್ 787-8/9 ಡ್ರೀಮ್‌ಲೈನರ್ ವಿಮಾನಗಳಿಗೆ ವಿಶೇಷ ಸುರಕ್ಷತಾ ತಪಾಸಣೆಗೆ ಆದೇಶಿಸಿದೆ. ಜೂನ್ 15 ರಿಂದ ಪ್ರಾರಂಭವಾಗುವ ಈ ತಪಾಸಣೆಯಲ್ಲಿ ಎಂಜಿನ್, ಇಂಧನ ಮತ್ತು ಹೈಡ್ರಾಲಿಕ್ ವ್ಯವಸ್ಥೆಯ ಸಮಗ್ರ ಪರಿಶೀಲನೆ ನಡೆಯಲಿದೆ.

Read Full Story
09:52 PM (IST) Jun 13

Karnataka News Live 13th June 2025ಪಾರ್ಕ್​ಗೆ ಬರ್ತಿದ್ದ ಯುವಕ ಇಷ್ಟ ಆದನಂತ ಅವನಿಗೇ ಸಿಂದೂರ ಇಡೋದಾ ಇವ್ಳು? ವಿಡಿಯೋ ನೋಡಿ

ಕಾಲ ಬದಲಾಗೋಯ್ತು ಕಣ್ರೀ ಎನ್ನೋದು ಸುಳ್ಳಲ್ಲ ಎನ್ನುವುದನ್ನು ಸಾಬೀತು ಮಾಡಿದೆ ಈ ಘಟನೆ. ಪ್ರತಿದಿನ ಪಾರ್ಕ್​ಗೆ ಬರ್ತಿದ್ದ ಯುವಕನ ಮೇಲೆ ಕ್ರಷ್​ ಆದ ಅದೇ ಪಾರ್ಕ್​ನ ಲೇಡಿ ಗಾರ್ಡ್​ ಅವನಿಗೆ ಗೊತ್ತಿಲ್ಲದೇ ಸಿಂದೂರ ಇಟ್ಟು ಮದ್ವೆಯಾಯ್ತು ಅಂತಿದ್ದಾಳೆ. ವಿಡಿಯೋ ವೈರಲ್​ ಆಗಿದೆ.

Read Full Story
09:21 PM (IST) Jun 13

Karnataka News Live 13th June 2025ಸರ್ಕಾರಿ ನೌಕರರಿಗೆ ಪಿಂಚಣಿ ಯೋಜನೆ ಆಯ್ಕೆ ಮಾಡಲು 17 ದಿನಗಳು ಬಾಕಿ! ಇಲ್ಲದಿದ್ದರೆ ಏನಾಗುತ್ತೆ?

ಸರ್ಕಾರಿ ನೌಕರರು ನಿವೃತ್ತಿಗಾಗಿ NPS ಅಥವಾ UPS ಆಯ್ಕೆ ಮಾಡಲು ಜೂನ್ 30 ಕೊನೆಯ ದಿನಾಂಕ. ಸಮಯ ಮಿತಿಯೊಳಗೆ ಆಯ್ಕೆ ಮಾಡದಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ವರದಿ ಓದಿ.

Read Full Story
09:18 PM (IST) Jun 13

Karnataka News Live 13th June 2025ಭಾರತದಿಂದ ಪ್ರೇರಿತ, ಮರ್ಸಿಡಿಸ್ ಬೆಂಜ್ AMG G 63 ಕಾರು ಲಾಂಚ್, ಕೇವಲ 30 ಕಾರು ಮಾತ್ರ

ಕೇವಲ 30 ಕಾರು ಮಾತ್ರ ಲಭ್ಯ. ಕಾರು ಖರೀದಿಸುವ ಮಾಲೀಕನ ಹೆಸರು ಕಾರಿನ ಗ್ರ್ಯಾಬ್ ಹ್ಯಾಂಡಲ್‌ನಲ್ಲಿ ಇರಲಿದೆ. ಭಾರತೀಯರಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಿದ ಮರ್ಸಿಡಿಸ್ ಬೆಂಜ್ AMG G 63 ಬಿಡುಗಡೆಯಾಗಿದೆ.

Read Full Story
08:57 PM (IST) Jun 13

Karnataka News Live 13th June 2025ಕಾವ್ಯಾ ಮಾರನ್‌ ಜೊತೆ ಅನಿರುದ್ಧ್‌ ಲವ್‌? ಈ ಹಿಂದೆ ದೊಡ್ಡ ದೊಡ್ಡ ನಟಿಯರನ್ನು ಡೇಟ್‌ ಮಾಡಿದ್ದ ಸಂಗೀತ ನಿರ್ದೇಶಕ!

ಸಂಗೀತ ನಿರ್ದೇಶಕ ಅನಿರುದ್ ಆಗಾಗ ಪ್ರೇಮ ವಿವಾದಗಳಲ್ಲಿ ಸಿಕ್ಕಿಹಾಕಿಕೊಳ್ಳೋದು ಸಾಮಾನ್ಯ. ಈಗ ಕಾವ್ಯಾ ಮಾರನ್ ಜೊತೆಗಿನ ಪ್ರೇಮ ಸುದ್ದಿ ಬೆಂಕಿ ಹರಡಿದ ಹಾಗೆ ಹಬ್ಬುತ್ತಿದೆ.
Read Full Story
08:47 PM (IST) Jun 13

Karnataka News Live 13th June 2025ರಿವರ್ ರಾಫ್ಟಿಂಗ್ ವೇಳೆ ಉಕ್ಕಿ ಹರಿದ ನದಿಗೆ ಬಿದ್ದ ಪ್ರವಾಸಿಗ, ಗೈಡ್ ರಕ್ಷಣೆ ವಿಡಿಯೋ ವೈರಲ್!

ರಿವರ್ ರಾಫ್ಟಿಂಗ್ ಮಾಡುವಾಗ ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿಯನ್ನು ರಾಫ್ಟಿಂಗ್ ಗೈಡ್ ಮತ್ತು ತಂಡದವರು ಸಾಹಸದಿಂದ ರಕ್ಷಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗೈಡ್‌ನ ಧೈರ್ಯವನ್ನು ಎಲ್ಲರೂ ಶ್ಲಾಘಿಸಿದ್ದಾರೆ.

Read Full Story
08:31 PM (IST) Jun 13

Karnataka News Live 13th June 2025ಅಂಬಾನಿ, ಅದಾನಿ ಅಲ್ಲ, ಬೆಂಟ್ಲಿ ಕಾರು ಖರೀದಿಗೆ ತನ್ನ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಈ ಉದ್ಯಮಿ

ಅಂಬಾನಿ, ಅದಾನಿ ಬಳಿ ಹಲವು ಐಷಾರಾಮಿ ಕಾರುಗಳಿವೆ. ಆದರೆ ಈ ಉದ್ಯಮಿ ರೀತಿ ಯಾರೂ ಡೆಲಿವರಿ ಪಡೆದುಕೊಂಡಿಲ್ಲ. ಕಾರಣ ಈ ಉದ್ಯಮಿ ರೋಸ್ ಗೋಲ್ಡ್ ಬಣ್ಣದ ಅತ್ಯಂತ ದುಬಾರಿ ಬೆಂಟ್ಲಿ ಬೆಂಟಿಯಾಗ್ ಕಾರು ಖರೀದಿಸಿದ್ದಾರೆ. ಆದರೆ ಕಾರು ಡೆಲಿವರಿ ಪಡೆಯಲು ತನ್ನ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದಾರೆ.

Read Full Story
08:12 PM (IST) Jun 13

Karnataka News Live 13th June 2025₹250 ಕೋಟಿ ಮೌಲ್ಯದ ಆಸ್ತಿಯನ್ನ ತನ್ನ 2 ವರ್ಷದ ಮಗಳಿಗೆ ಬಿಟ್ಟ ಈ ಸ್ಟಾರ್ ಹೀರೋ ಯಾರು?

ಮಕ್ಕಳು ದೊಡ್ಡವರಾದ ನಂತರ ಪೋಷಕರು ತಮ್ಮ ಆಸ್ತಿಯನ್ನು ಹಂಚಿಕೊಳ್ಳುವುದು ಸಾಮಾನ್ಯ, ಆದರೆ ಇಲ್ಲಿ ಒಬ್ಬ ಸ್ಟಾರ್ ಹೀರೋ ತನ್ನ ಒಬ್ಬಳೇ ಮಗಳಿಗೆ 2 ವರ್ಷ ತುಂಬುವ ಮೊದಲೇ 250 ಕೋಟಿ ಆಸ್ತಿಯನ್ನು ದಾನ ಮಾಡಿದ. ಹೀರೋ ಯಾರು? ಹೀಗೆ ಏಕೆ ನಿರ್ಧಾರ ಮಾಡಿದ? ತಿಳಿಯಿರಿ.

Read Full Story
07:54 PM (IST) Jun 13

Karnataka News Live 13th June 2025ಬೆಂಗಳೂರು ಅಬಕಾರಿ ಇಲಾಖೆಯಿಂದ ₹39 ಲಕ್ಷ ಮೌಲ್ಯದ ಫಾರಿನ್ ಬ್ರ್ಯಾಂಡ್ ಮದ್ಯ ನಾಶ

ಬೆಂಗಳೂರಿನಲ್ಲಿ ಅಬಕಾರಿ ಇಲಾಖೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ₹39 ಲಕ್ಷ ಮೌಲ್ಯದ ವಿದೇಶಿ ಮದ್ಯವನ್ನು ಜಪ್ತಿ ಮಾಡಿ ನಾಶಪಡಿಸಿದೆ. ಈ ಕಾರ್ಯಾಚರಣೆಯಲ್ಲಿ 516 ಲೀಟರ್ ಮದ್ಯ, ಖಾಲಿ ಬಾಟಲಿಗಳು ಮತ್ತು ಸಿಗರೇಟು ಬಾಕ್ಸ್‌ಗಳನ್ನು ನಾಶಪಡಿಸಲಾಗಿದೆ.

Read Full Story
07:53 PM (IST) Jun 13

Karnataka News Live 13th June 2025ನಿಮ್ಗೆ ಒಳ್ಳೇದಾಗ್ಬೇಕು ಅಂದ್ರೆ ಮನೆನಲ್ಲಿ ಕನ್ನಡಿನ ಈ ಜಾಗದಲ್ಲಿ ಇಡಿ... ಇದು ವಾಸ್ತು ಪ್ರಕಾರ ಟಿಪ್ಸ್!

ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಕನ್ನಡಿಗಳನ್ನು ಇಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ದಕ್ಷಿಣ ಮತ್ತು ಆಗ್ನೇಯ ದಿಕ್ಕಿನಲ್ಲಿ ಕನ್ನಡಿ ಇಡಬಾರದು.

Read Full Story
07:47 PM (IST) Jun 13

Karnataka News Live 13th June 2025ಮಾವಿನಲ್ಲಿ 4000 ವರ್ಷ ಇತಿಹಾಸವಿರುವ ಭಾರತ ಹಿಂದಿಕ್ಕಿದ ಮೆಕ್ಸಿಕೋಗೆ ಮುಕೇಶ್ ಅಂಬಾನಿ ಚಾಲೆಂಜ್

ಮಾವು ಕೃಷಿಯಲ್ಲಿ ಭಾರತಕ್ಕೆ 4,000 ವರ್ಷದ ಇತಿಹಾಸವಿದೆ. ಆದರೆ ನಿನ್ನೆ ಮೊನ್ನೆ ಬಂದಿರುವ ಮೆಕ್ಸಿಕೋ ದೇಶ ಮಾವು ರಫ್ತಿನಲ್ಲಿ ಭಾರತವನ್ನು ಹಿಂದಿಕ್ಕಿದೆ. ಇದೀಗ ಮೆಕ್ಸಿಕೋಗೆ ಮುಕೇಶ್ ಅಂಬಾನಿ ಸವಾಲು ಹಾಕಿದ್ದಾರೆ.

Read Full Story
07:38 PM (IST) Jun 13

Karnataka News Live 13th June 2025ಫ್ರೆಂಡ್ಸ್ ಆಫ್ ಬಂಡೀಪುರ ಹೆಸರಲ್ಲಿ NTCA ನಿಯಮ ಗಾಳಿಗೆ - ಕಳ್ಳಬೇಟೆ ಶಿಬಿರಕ್ಕೆ ಪ್ರವಾಸಿಗರನ್ನು ಕರೆತಂದ ಅರಣ್ಯ ಸಿಬ್ಬಂದಿಯ ಎಡವಟ್ಟು!

ಬಂಡೀಪುರದಲ್ಲಿ 'ಫ್ರೆಂಡ್ಸ್ ಆಫ್ ಬಂಡೀಪುರ' ಕಾರ್ಯಕ್ರಮದಡಿಯಲ್ಲಿ APC ಕ್ಯಾಂಪ್‌ಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮೂಲಕ NTCA ಕಾಯ್ದೆ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ. 

Read Full Story
07:07 PM (IST) Jun 13

Karnataka News Live 13th June 2025ಬೈಕ್ ಟ್ಯಾಕ್ಸಿಗಳಿಗೆ ಹೈಕೋರ್ಟ್ ಶಾಕ್ - ಓಲಾ, ಉಬರ್, ರಾಪಿಡೋ ಸೇವೆ ನಿಷೇಧ ಮುಂದುವರಿಕೆ!

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಮೇಲಿನ ನಿಷೇಧವನ್ನು ಹೈಕೋರ್ಟ್ ಮುಂದುವರೆಸಿದೆ. ಸರ್ಕಾರ ನಿಯಮಾವಳಿ ರೂಪಿಸದ ಕಾರಣ ಮಧ್ಯಂತರ ಅನುಮತಿಯನ್ನು ನಿರಾಕರಿಸಲಾಗಿದೆ. ಜೂನ್ 24 ರಂದು ಅಂತಿಮ ತೀರ್ಪು ನಿರೀಕ್ಷಿಸಲಾಗಿದೆ.
Read Full Story
06:57 PM (IST) Jun 13

Karnataka News Live 13th June 2025ಯಾರಿಗೆಲ್ಲಾ ಸಿಕ್ಕಿದೆ ಬಿಗ್ ಬಾಸ್ 19 ಆಫರ್? ಸ್ಪರ್ಧಿಗಳ ಸಂಪೂರ್ಣ ಲಿಸ್ಟ್

ಬಿಗ್ ಬಾಸ್ 19ನೇ ಆವೃತ್ತಿ ಆರಂಭಕ್ಕೆ ತಯಾರಿ ಆರಂಭಗೊಂಡಿದೆ. ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಈಗಾಗಲೇ ಹಲವು ಸೆಲೆಬ್ರೆಟಿಗಳಿಗೆ ಕರೆ ಮಾಡಲಾಗಿದೆ. ಯಾರಿಗೆಲ್ಲಾ ಬಿಗ್ ಬಾಸ್ ಆಫರ್ ನೀಡಲಾಗಿದೆ? 

Read Full Story
06:49 PM (IST) Jun 13

Karnataka News Live 13th June 2025ಯೋಗೀಶ್ ಗೌಡ ಕೊಲೆ ಕೇಸ್; ವಿನಯ್ ಕುಲಕರ್ಣಿ ಪರಪ್ಪನ ಅಗ್ರಹಾರ ಜೈಲಿಗೆ!

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕರೆತಂದಿದ್ದಾರೆ. ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಕುಲಕರ್ಣಿ ಶರಣಾಗಿದ್ದಾರೆ.
Read Full Story
06:32 PM (IST) Jun 13

Karnataka News Live 13th June 2025ವಿಶ್ವದ ಮತ್ತೊಬ್ಬ ಕ್ರಿಕೆಟ್ ದಿಗ್ಗಜನ ಮಗಳೊಂದಿಗೆ ಸಾರಾ ತೆಂಡೂಲ್ಕರ್ ಸ್ನೇಹ; ಇಲ್ಲಿವೆ ವೈರಲ್ ಫೋಟೋಸ್!

ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಮತ್ತು ಮ್ಯಾಥ್ಯೂ ಹೇಡನ್ ಪುತ್ರಿ ಗ್ರೇಸ್ ಹೇಡನ್ ಒಟ್ಟಿಗೆ ಟ್ರಿಪ್‌ನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ವಾರ್ನರ್ ಬ್ರದರ್ಸ್ ಮೂವಿ ವರ್ಲ್ಡ್‌ನಿಂದ ಕಿರ್ರಾ ಬೀಚ್‌ವರೆಗೆ ಅವರ ಸಂತೋಷದ ಕ್ಷಣಗಳನ್ನು ಸಾರಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Read Full Story