ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯಲಕ್ಷ್ಮಿ ಕಾಲೋನಿಯಲ್ಲಿ ರೌಡಿ ಪುನೀತ್ ಅಲಿಯಾಸ್ ನೇಪಾಳಿ ಪುನೀತ್‌ನ ಕೊಲೆ ಕೇಸ್‌ನಲ್ಲಿ ಆಘಾತಕಾರಿ ಬೆಳವಣಿಗೆ ನಡಿದಿದ್ದು, ಈ ಪ್ರಕರಣದಲ್ಲಿ ಕೊಲೆಗೆ ಯತ್ನಿಸಿದವನೇ ಕೊಲೆಗೀಡಾಗಿದ್ದಾನೆ.
- Home
- News
- State
- Karnataka News Live 12th June 2025: ಕೊಲೆ ಮಾಡಲು ಬಂದವನೇ, ಕೊಲೆಯಾಗಿ ಹೋದ! ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ EXCLUSIVE ದೃಶ್ಯ!
Karnataka News Live 12th June 2025: ಕೊಲೆ ಮಾಡಲು ಬಂದವನೇ, ಕೊಲೆಯಾಗಿ ಹೋದ! ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ EXCLUSIVE ದೃಶ್ಯ!

ಬಳ್ಳಾರಿ/ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಬುಧವಾರ ಕಾಂಗ್ರೆಸಿನ ಐವರು ಶಾಸಕರು ಹಾಗೂ ಬಳ್ಳಾರಿ ಸಂಸದ ಇ. ತುಕಾರಾಂ ಅವರ ನಿವಾಸಗಳ ಮೇಲೆ ದಾಳಿ ನಡೆಸಿ ಭಾರಿ ಶಾಕ್ ನೀಡಿದ್ದಾರೆ. ಬೆಂಗಳೂರಿನ 3, ಬಳ್ಳಾರಿ- ವಿಜಯನಗರ ಜಿಲ್ಲೆಯ 5 ಸೇರಿ ಒಟ್ಟು 8 ಕಡೆ ದಾಳಿ ನಡೆಸಲಾಗಿದೆ. ಬೆಳಗ್ಗೆ 6ಕ್ಕೆ ಆರಂಭವಾದ ದಾಳಿ ಹದಿನೈದೂವರೆ ತಾಸಿನ ಬಳಿಕ ರಾತ್ರಿ 9.30ಕ್ಕೆ ಮುಗಿದಿದೆ. ಮಾಜಿ ಸಚಿವ, ಶಾಸಕ ಬಿ.ನಾಗೇಂದ್ರ ಬೆಂಗಳೂರಿನ ಕೊಡಿಗೇ ಹಳ್ಳಿ ಸಮೀಪದ ರೈನ್ ಟ್ರಿ ಬುಲೇವಾರ್ಡ್ ಅಪಾರ್ಟ್ ಮೆಂಟ್, ಶಾಸಕರ ಭವನದ 4ನೇ ಮಹಡಿಯ ನಾಗೇಂದ್ರ ಅವರ ಕೊಠಡಿ ಸಂಖ್ಯೆ 360, ಬಳ್ಳಾರಿಯ ನೆಹರು ಕಾಲನಿಯಲ್ಲಿರುವ ನಗರ ಶಾಸಕ ನಾರಾ ಭರತ್ ರೆಡ್ಡಿ ನಿವಾಸ, ಕಂಪ್ಲಿಯ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಶಾಸಕ ಜೆ.ಎನ್. ಗಣೇಶ್ ಅವರ ನಿವಾಸ ಹಾಗೂ ಸಂಡೂರಿನ ಅಶೋಕ ಕಾಲನಿಯಲ್ಲಿರುವ ಬಳ್ಳಾರಿ ಸಂಸದ ಇ. ತುಕಾರಾಂ ಹಾಗೂ ಅವರ ಪತ್ನಿ ಸಂಡೂರು ಶಾಸಕಿ ಇ.ಅನ್ನಪೂರ್ಣ ಅವರ ನಿವಾಸ, ಸಂಸದರ ಬೆಂಗಳೂರಿನ ಜಯನಗರ ನಿವಾಸ, ವಿಜಯನಗರ ಜಿಲ್ಲೆ ಕೂಡ್ಲಿಗಿ ಶಾಸಕ ಡಾ.ಎನ್ .ಟಿ. ಶ್ರೀನಿವಾಸ್ ಅವರ ನರಸಿಂಹನಗಿರಿ ಗ್ರಾಮದ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಈ ಹಿಂದೆ ನಾಗೇಂದ್ರ ಮನೆಯ ಮೇಲೆ ದಾಳಿ ನಡೆಸಿದ್ದ ಇ.ಡಿ., ಅಲ್ಲಿ ದೊರೆತ ಕೆಲವು ದಾಖಲೆಗಳನ್ನು ಆಧರಿಸಿ ಈ ದಾಳಿ ನಡೆಸಿದೆ ಎನ್ನಲಾಗಿದೆ.
Karnataka News Live 12th June 2025ಕೊಲೆ ಮಾಡಲು ಬಂದವನೇ, ಕೊಲೆಯಾಗಿ ಹೋದ! ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ EXCLUSIVE ದೃಶ್ಯ!
Karnataka News Live 12th June 2025ವಾಹನ ನಂಬರ್‌ನಿಂದ ಅಂತಿಮ ಯಾತ್ರೆವರೆಗೆ ಮಾಜಿ ಸಿಎಂ ರೂಪಾನಿಯ ನಂಬರ್ 12 ನಿಗೂಢತೆ
ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಗೆ ನಂಬರ್ 12 ಮೇಲೆ ಎಲ್ಲಿಲ್ಲದ ಮೋಹ. ತಮ್ಮ ಎಲ್ಲಾ ವಾಹನಗಳ ನಂಬರ್ 12 ಇರಲೇ ಬೇಕು. ದುರಂತ ಅಂದರೆ ಇದೇ 12 ನಂಬರ್ ಯಾತ್ರೆ ತಮ್ಮ ಕೊನೆಯ ಯಾತ್ರೆಯಾಗಲಿದೆ ಅನ್ನೋ ಸುಳಿವು ಇರಲಿಲ್ಲ.
Karnataka News Live 12th June 2025Udupi Red alert - ಭಾರೀ ಮಳೆ, ಶಾಲೆಗಳಿಗೆ ನಾಳೆಯೂ ರಜೆ!
Karnataka News Live 12th June 2025ವಿಮಾನ ದುರಂತದಲ್ಲಿ ಆಪ್ತ ಸಂಬಂಧಿ ಪೈಲೆಟ್ ಕುಂದರ್‌ನ ಕಳೆದುಕೊಂಡ ಬಾಲಿವುಡ್ ನಟ
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಇಬ್ಬರು ಪೈಲೆಟ್, ಸಿಬ್ಬಂದಿಗಳು ಪ್ರಯಾಣಿಕರು ಸೇರಿದಂತೆ 241 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಕೋ ಪೈಲೆಟ್ ಕ್ಲೈವ್ ಕುಂದರ್ ಬಾಲಿವುಡ್ ನಟ ವಿಕ್ರಾಂತಿ ಮಾಸ್ಸೆ ಸಂಬಂಧಿ. ಘಟನೆ ನನೆದು ವಿಕ್ರಾಂತ ಮಾಸ್ಸೆ ಕಣ್ಣೀರಿಟ್ಟಿದ್ದಾರೆ.
Karnataka News Live 12th June 2025ಚನ್ನಪಟ್ಟಣದ ಕೆರೆ ಬಳಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಬ್ಯಾಗ್, ಐಡಿ ಕಾರ್ಡ್ ಪತ್ತೆ; ತೀವ್ರ ಹುಡುಕಾಟ!
Karnataka News Live 12th June 2025ವಿಮಾನ ದುರಂತ, ಮಡಿ ಪ್ರಯಾಣಿಕರಿಗೆ ತಲಾ ₹1 ಕೋಟಿ ಪರಿಹಾರ ಘೋಷಿಸಿದ ಟಾಟಾ ಗ್ರೂಪ್
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದ ಪ್ರಯಾಣಿಕರ ಕುಟುಂಬಕ್ಕೆ ಟಾಟಾ ಸಮೂಹ ತಲಾ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ. ಗಾಯಾಳು ಚಿಕಿತ್ಸಾ ವೆಚ್ಚ, ಹಾಸ್ಟೆಲ್ ಮರು ನಿರ್ಮಾಣ ಸೇರಿದಂತೆ ಪ್ರಮುಖ ಭರವಸೆ ನೀಡಿದೆ.
Karnataka News Live 12th June 2025ಕೊಡಗು ಜಿಲ್ಲೆಯಲ್ಲಿ ಪ್ರವಾಹ, ಭೂಕುಸಿತ ಎದುರಾದರೆ 12 ಸಾವಿರ ಜನರ ಸ್ಥಳಾಂತರ ಸಾಧ್ಯತೆ
Karnataka News Live 12th June 2025ಗುಡ್ ಬೈ ಟು ಇಂಡಿಯಾ, ವಿಮಾನ ದುರಂತದಲ್ಲಿ ಮಡಿದ ಬ್ರಿಟಿಷ್ ಪ್ರಯಾಣಿಕನ ಕೊನೆಯ ವಿಡಿಯೋ
ಅಹಮ್ಮದಾಬಾದ್ ಏರ್ ಇಂಡಿಯಾ ವಿಮಾನ ದುರಂತಕ್ಕೂ ಕೆಲವೇ ಕ್ಷಣಗಳ ಮುನ್ನ ಬ್ರಿಟಿಷ್ ಪ್ರಯಾಣಿಕ ತೆಗೆದ ಕೊನೆಯ ವಿಡಿಯೋ ಪತ್ತೆಯಾಗಿದೆ. ಗುಡ್ ಬೈ ಟು ಇಂಡಿಯಾ ಎಂದಿರುವ ಈ ವಿಡಿಯೋ ಹಲವರ ಕಣ್ಣಾಲಿ ತೇವಗೊಳಿಸಿದೆ.
Karnataka News Live 12th June 2025ವಿಮಾನ ದುರಂತದಲ್ಲಿ 242 ಪ್ರಯಾಣಿಕರ ಪೈಕಿ ಓರ್ವ ಜೀವಂತ, ಬದುಕುಳಿದಿದ್ದೇ ಪವಾಡ
ಅಹಮ್ಮದಾಬಾದ್ ಏರ್ ಇಂಡಿಯಾ ವಿಮಾನ ಪತದಲ್ಲಿ 242 ಪ್ರಯಾಣಿಕರ ಪೈಕಿ 241 ಮಂದಿ ನಿಧನರಾಗಿದ್ದಾರೆ. ಆದರೆ ಒರ್ವ ಪ್ರಯಾಣಿಕ ಪವಾಡ ಸದಶ್ಯವಾಗಿ ಪಾರಾಗಿದ್ದಾರೆ.
Karnataka News Live 12th June 2025ಏರ್ ಇಂಡಿಯಾ ವಿಮಾನ ದುರಂತ, ಇಲ್ಲಿವರೆಗೆ ನಡೆದ ಬೆಳವಣಿಗೆಗಳ ಸಂಕ್ಷಿಪ್ತ ವಿವರಣೆ
ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI171 ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿ, 241 ಮಂದಿ ಮೃತಪಟ್ಟಿದ್ದಾರೆ. ವಿಮಾನವು ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ಗೆ ಡಿಕ್ಕಿ ಹೊಡೆದಿದ್ದು, ಹಲವಾರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
Karnataka News Live 12th June 2025ವಿಮಾನ ದುರಂತದಲ್ಲಿ ಮಾಜಿ ಸಿಎಂ ವಿಜಯ್ ರೂಪಾನಿ ಸಾವು, ಕುಟುಂಬಸ್ಥರ ಆಕ್ರಂದನ
ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮೃತಪಟ್ಟಿರುವುದು ಖಚಿತವಾಗಿದೆ. ರೂಪಾನಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Karnataka News Live 12th June 2025ಬೇರೊಬ್ಬನಿಂದ ಗರ್ಭಿಣಿಯಾಗಿದ್ದೂ ಅಲ್ದೇ ಪತಿಗೇ ಧಮ್ಕಿ! ಪತ್ನಿಯ ಟಾರ್ಚರ್ ತಾಳದೇ ಯುವಕ ಆ*ತ್ಮಹತ್ಯೆ
ಮದುವೆಗೂ ಮುನ್ನ ಗರ್ಭಿಣಿಯಾಗಿರುವ ವಿಷಯ ಗಂಡನ ಮನೆಯವರಿಗೆ ತಿಳಿಯುತ್ತಲೇ ಮಹಿಳೆಯೇ ಟಾರ್ಚರ್ ಕೊಟ್ಟು ಪತಿಯ ಸಾವಿಗೆ ಕಾರಣಳಾಗಿದ್ದಾಳೆ! ಮಹಿಳಾ ಪರ ಕಾನೂನುಗಳ ದುರ್ಬಳಕೆಯ ಆರೋಪದ ಬೆನ್ನಲ್ಲೇ, ಈ ಘಟನೆ ನಡೆದಿದೆ...
Karnataka News Live 12th June 2025ಪ್ರೇಕ್ಷಕರ ಮುಂದೆ ಬರಲು ರೆಡಿಯಾದ ಪದ್ಮಗಂಧಿ; ಸುಚೇಂದ್ರ ಪ್ರಸಾದ್ ಸಿನಿಮಾಗೆ ಬಹುಪರಾಕ್ ಸಿಗುತ್ತಾ?
ಪದ್ಮಗಂಧಿಯ ಹಾಡುಗಳೆಲ್ಲವೂ ತಯಾರಾಗಿವೆ. ಅವುಗಳ ಒಂದಷ್ಟು ಝಲಕ್ಕುಗಳನ್ನು ಮಾಧ್ಯಮದವರ ಮುಂದೆ ಪ್ರದರ್ಶಿಸಲಾಗಿದೆ. ಈ ಮೂಲಕ ಪದ್ಮಗಂಧಿಯ ಹಾಡುಗಳ ಸಣ್ಣ ಪರಿಚಯವನ್ನು ಪ್ರೇಕ್ಷಕರತ್ತ ತಲುಪಿಸುವ ಪ್ರಯತ್ನವೂ ನಡೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪದ್ಮಗಂಧಿಯ ಹಾಡುಗಳು ಪ್ರೇಕ್ಷಕರ ಮುಂದೆ ಬರಲಿವೆ.
Karnataka News Live 12th June 2025ಏರ್ ಇಂಡಿಯಾ ವಿಮಾನ ದುರಂತ - ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಗೆ 26 ಸಾವಿರ ಕೋಟಿ ರೂಪಾಯಿ ಪರಿಹಾರದ ಭಾರ!
Karnataka News Live 12th June 2025ಗುಜರಾತ್ ವಿಮಾನ ದುರಂತ - ವಿಜಯ್ ರೂಪಾನಿ ಯಾರು? ಮಗಳ ಭೇಟಿಗೆ ಲಂಡನ್‌ಗೆ ತೆರಳುತ್ತಿದ್ದಾಗ ದುರಂತ
ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ದುರಂತವಾಗಿದೆ. ಅವರ ರಾಜಕೀಯ ಜೀವನ, ಸಾಧನೆಗಳು, ಮತ್ತು ವಿವಾದಗಳನ್ನು ಒಳಗೊಂಡ ಸಂಕ್ಷಿಪ್ತ ವಿವರಣೆ. ಬರ್ಮಾದಿಂದ ಗುಜರಾತ್‌ಗೆ ವಲಸೆ ಬಂದ ರೂಪಾನಿ, ವಿದ್ಯಾರ್ಥಿ ರಾಜಕಾರಣ ಪ್ರಯಾಣವನ್ನು ಈ ಲೇಖನ ಒಳಗೊಂಡಿದೆ.
Karnataka News Live 12th June 2025ವಿಮಾನ ಪತನಕ್ಕೆ ಕಾರಣ ಏನು? ಗೇರ್ ಮೇಲಕ್ಕೆತ್ತಿದ್ರೂ ಇಂಜಿನ್ ನಿಷ್ಕ್ರಿಯಗೊಂಡಿದ್ದು ಹೇಗೆ?
ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ರನ್‌ವೇ 23 ರಿಂದ ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಆದರೆ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಈ ದುರಂತಕ್ಕೆ ಕಾರಣವೇನು?
Karnataka News Live 12th June 2025ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಮಡಿದ ಪ್ರಯಾಣಿಕರಿಗೆ ಸಿಗೋ ಪರಿಪಾರ ಮೊತ್ತ ಎಷ್ಟು?
ಅಹಮ್ಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದವರ ಸಂಖ್ಯೆ ಸ್ಪಷ್ಟವಾಗಿಲ್ಲಿ. ಸದ್ಯ ಈ ಘಟನೆಯಲ್ಲಿ 133 ಮಂದಿ ಮೃತಪಟ್ಟಿದ್ದಾರೆ. ವಿಮಾನ ದುರಂತದಲ್ಲಿ ಮಡಿದರೆ ಪರಿಹಾರ ಮೊತ್ತ ಕೊಡುವ ಜವಾಬ್ದಾರಿ ಯಾರದ್ದು? ಮಡಿದ ಪ್ರಯಾಣಿಕರ ಕುಟುಂಬಕ್ಕೆ ಸಿಗುವ ಪರಿಹಾರ ಮೊತ್ತವೆಷ್ಟು?
Karnataka News Live 12th June 2025ಏರ್ ಇಂಡಿಯಾ ವಿಮಾನ ದುರಂತ - ವಿಮಾನದಲ್ಲಿದ್ದ ಎಲ್ಲಾ 242 ಪ್ರಯಾಣಿಕರು ಸಾವು
Karnataka News Live 12th June 2025ಎಲ್ಲೆಂದರಲ್ಲಿ ಕಸ ಎಸೆದು ಹೋಗೋರನ್ನು ಹಿಡಿದುಕೊಡಲು ವಾಟ್ಸಾಪ್ ನಂಬರ್ ಕೊಟ್ಟ ಬಿಬಿಎಂಪಿ!
Karnataka News Live 12th June 2025Air India Plane Crash - ದುರಂತದ ಬಗ್ಗೆ ಕಳೆದ ವಾರವೇ ಎಚ್ಚರಿಕೆ ಕೊಟ್ಟಿದ್ದ ಖ್ಯಾತ ಜ್ಯೋತಿಷಿ!
ಗುಜರಾತ್‌ನ ಅಹಮ್ಮದಾಬಾದ್ನಲ್ಲಿ ಸಂಭವಿಸಿರುವ ಭೀಕರ ವಿಮಾನ ಅಪಘಾತದಲ್ಲಿ 242 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಇದಕ್ಕೆ ಕಾರಣ ಇದುವರೆಗೆ ತಿಳಿದುಬಂದಿಲ್ಲ. ಆದರೆ ಇದರ ನಡುವೆಯೇ ಖ್ಯಾತ ಜ್ಯೋತಿಷಿ ಶರ್ಮಿಷ್ಠಾ ಅವರು ನೀಡಿದ್ದ ಎಚ್ಚರಿಕೆ ಬೆಳಕಿಗೆ ಬಂದಿದೆ.