Asianet Suvarna News Asianet Suvarna News

Necrophilia: ಶವಾಗಾರದಲ್ಲೂ ಮಹಿಳಾ ಶವದ ಮೇಲೆ ನಡೆಯೋತ್ತಾ ಸಂಭೋಗ?

ನೆಕ್ರೋಫೀಲಿಯಾ ಮತ್ತೆ ಸದ್ದು ಮಾಡುತ್ತಿದೆ. ಶವ ಸಂಭೋಗದ ಕುರಿತಾದ ಸುಪ್ರೀಂ ಕೋರ್ಟ್ ಸ್ಟೇಟ್‌ಮೆಂಟ್ ಇದೀಗ ಸುದ್ದಿಯಲ್ಲಿದೆ. ಅಷ್ಟಕ್ಕೂ ನೆಕ್ರೋಫೀಲಿಯಾ ಅಂದರೇನು? ಕೋರ್ಟ್‌ನ ಗಮನಸೆಳೆದ ಆ ಪ್ರಕರಣ ಯಾವುದು?

Supreme court Judgment against Necrophilia how it is against nature
Author
First Published Jun 5, 2023, 1:21 PM IST

ಇತ್ತೀಚೆಗೆ ಕರ್ನಾಟಕ ಉಚ್ಚ ನ್ಯಾಯಾಲಯ ಒಂದು ತೀರ್ಪು ನೀಡಿತ್ತು. ಅದರಲ್ಲಿ, ಮಹಿಳೆಯೊಬ್ಬಳ ಮೃತ ದೇಹವನ್ನು ಲೈಂಗಿಕವಾಗಿ ಬಳಸಿಕೊಂಡ ಅಪರಾಧದಿಂದ ಆರೋಪಿಯನ್ನು ಮುಕ್ತಗೊಳಿಸಿತ್ತು. ಈ ಕ್ರಿಯೆಯು (ಶವಸಂಭೋಗ- Necrophilia) ಭಾರತೀಯ ದಂಡ ಸಂಹಿತೆ ವ್ಯಾಖ್ಯಾನಿಸಿದಂತೆ ಅತ್ಯಾಚಾರ ಅಥವಾ ಅಸ್ವಾಭಾವಿಕ ಅಪರಾಧಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿತ್ತು.

ಪರಿಣಾಮವಾಗಿ, 21 ವರ್ಷದ ಮಹಿಳೆಯ ವಿರುದ್ಧ ಈ ಅಪರಾಧ ಎಸಗಿದ ಕಾಮುಕನನ್ನು ಆ ಆರೋಪಕ್ಕೆ ಸಂಬಂಧಿಸಿದಂತೆ ಖುಲಾಸೆಗೊಳಿಸಲಾಯಿತು. ಆದರೆ ಆ ಮಹಿಳೆಯನ್ನು ಕೊಲೆ ಮಾಡಿದವನೂ ಆತನೇ ಆಗಿದ್ದ. ಕೊಲೆ ಅಪರಾಧಕ್ಕೆ ಆತನಿಗೆ ಶಿಕ್ಷೆಯಾಗಿದೆ. ಮತ್ತು ಅದನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ಆದರೆ ಶವಸಂಭೋಗಕ್ಕೆ ಶಿಕ್ಷೆಯಾಗಿಲ್ಲ. ಇದೀಗ ಸುಪ್ರೀ ಕೋರ್ಟ್‌ ಹೇಳಿದ್ದೇನೆಂದರೆ- ಶವಸಂಭೋಗವೂ ಗಂಭೀರ ಸ್ವರೂಪದ ಅಪರಾಧ, ವಿಕೃತಿ. ಅದಕ್ಕೂ ಶಿಕ್ಷೆಯಾಗಬೇಕು.

ನೆಕ್ರೋಫಿಲಿಯಾ ಎಂದರೇನು?
ನೆಕ್ರೋಫಿಲಿಯಾ (Necrophilia) ಎಂಬುದು ಅಪರೂಪದ ವಿಕೃತಿ. ಮೃತ ದೇಹಗಳ ಕಡೆಗೆ ಇರುವ ಲೈಂಗಿಕ ಆಕರ್ಷಣೆಯಿದು. ಇದರಲ್ಲಿ ವ್ಯಕ್ತಿಗೆ ಶವಗಳೊಂದಿಗೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉತ್ಕಟವಾದ ವಾಂಛೆ ಮೂಡುತ್ತದೆ. ಅನೇಕ ರಾಷ್ಟ್ರಗಳಲ್ಲಿ ಇದನ್ನು ನಿಷೇಧಿತ, ನೈತಿಕವಾಗಿ ಖಂಡನೀಯ ಮತ್ತು ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ. 'ನೆಕ್ರೋಫಿಲಿಯಾ' ಎಂಬ ಪದದ ವ್ಯುತ್ಪತ್ತಿ ಹೀಗಿದೆ- 'ನೆಕ್ರೋ' ಗ್ರೀಕ್ ಪದ. 'ಸತ್ತ' ಅಥವಾ 'ಸಾವು' ಎಂಬ ಅರ್ಥ. ಫಿಲಿಯಾ ಎಂದರೆ ಪ್ರೀತಿ ಅಥವಾ ಆಕರ್ಷಣೆ. ನೆಕ್ರೋಫಿಲಿಯಾ ಅಂದರೆ ಶವದ ಕಡೆಗೆ ಪ್ರೀತಿ ಅಥವಾ ಆಕರ್ಷಣೆ. ಲೀಗಲ್ ಸರ್ವಿಸಸ್ ಇಂಡಿಯಾದ ವರದಿಯ ಪ್ರಕಾರ, ಮೃತರೊಂದಿಗಿನ ಆತ್ಮೀಯತೆ ಅಥವಾ ಲೈಂಗಿಕ ಕ್ರಿಯೆಗಳಲ್ಲಿ ನೆಕ್ರೋಫಿಲಿಯಾಕ್ ತೊಡಗುತ್ತಾನೆ. ಆತ ತನ್ನ ಕ್ರಿಯೆಯ ಬಗ್ಗೆ ಸಂಪೂರ್ಣವಾಗಿ ಅರಿವು ಹೊಂದಿದ್ದು, ಅದನ್ನು ಸ್ವಇಚ್ಛೆಯಿಂದ ಮಾಡುತ್ತಾನೆ.

KSRTC ಬಸ್‌ನಲ್ಲಿ ನಟಿ ಮುಂದೆ ಹಸ್ತಮೈಥುನ ಮಾಡ್ಕೊಂಡ ಯುವಕನಿಗೆ ಜೈಲಿನ ಬಳಿ ಅದ್ಧೂರಿ ಸ್ವಾಗತ!

ನೆಕ್ರೋಫಿಲಿಯಾ ಅಪರಾಧವೇ?
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಶವಾಗಾರಗಳಲ್ಲಿ ದೇಹಗಳಿಗೆ ಕಾವಲಾಗಿ ನಿಯೋಜಿತವಾಗಿರುವ ಕೆಲವು ಅಟೆಂಡರ್‌ಗಳು(Attenders) ದೇಹಗಳೊಂದಿಗೆ 'ಲೈಂಗಿಕ ಸಂಭೋಗ' ನಡೆಸುವುದನ್ನು ಗಮನಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ತನ್ನ ಅವಲೋಕನದಲ್ಲಿ ಗಮನಿಸಿದೆ. ಹೀಗಾಗಿ, ಇದನ್ನು ಪರಿಶೀಲಿಸಲು ನ್ಯಾಯಾಲಯವು ಭಾರತೀಯ ದಂಡ ಸಂಹಿತೆ (IPC) ಗೆ ಶಿಫಾರಸು ಮಾಡಿದೆ. ನೆಕ್ರೋಫಿಲಿಯಾವನ್ನು ಅಸ್ವಾಭಾವಿಕ(Unnatural) ಲೈಂಗಿಕ ಅಪರಾಧದ ಒಂದು ರೂಪವಾಗಿ ಸೇರಿಸುವುದು ಅಥವಾ ನೆಕ್ರೋಫಿಲಿಯಾವನ್ನು(Necrephilia) ಸ್ಪಷ್ಟವಾಗಿ ಅಪರಾಧೀಕರಿಸಲು ಹೊಸ ನಿಬಂಧನೆಯನ್ನು ಪರಿಚಯಿಸಲು ಹೈಕೋರ್ಟ್‌ ಸಲಹೆ ಮಾಡಿದೆ. ಇದನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಬೇಕಿದೆ.

ಯುನೈಟೆಡ್ ಕಿಂಗ್‌ಡಮ್, ಕೆನಡಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳು ನೆಕ್ರೋಫಿಲಿಯಾವನ್ನು ಅಪರಾಧವೆಂದು ಪರಿಗಣಿಸುವ ನಿರ್ದಿಷ್ಟ ಕಾನೂನುಗಳನ್ನು ಹೊಂದಿವೆ. ಆದರೆ ಇದುವರೆಗೂ ಭಾರತದಲ್ಲಿ, ಮೃತ ಮಹಿಳೆಯರ ದೇಹಗಳ ಘನತೆ ಮತ್ತು ಹಕ್ಕುಗಳ ವಿರುದ್ಧ ನಡೆಯುವ ಈ ವಿಕೃತಿಯನ್ನು ತಡೆಗಟ್ಟಲು IPC ಸೇರಿದಂತೆ ಯಾವುದೇ ಮೀಸಲಾದ ಶಾಸನವಿಲ್ಲ. ಮೃತರ ಘನತೆ ಕಾಪಾಡಲು ಕಾನೂನು ಕ್ರಮಗಳ ಅಗತ್ಯವನ್ನು ನ್ಯಾಯಾಲಯ ಒತ್ತಿ ಹೇಳಿದೆ.

ಕಲ್ಲು ಹೃದಯವೂ ಕರಗೀತು..! ಮೃತದೇಹಗಳ ರಾಶಿಯಲ್ಲಿ ಮುಸುಕು ತೆಗೆದು ಮಗನಿಗಾಗಿ ಹುಡುಕಾಡಿದ ತಂದೆ!

ಶವಾಗಾರಗಳಲ್ಲಿ ನಡೆಯುತ್ತದೆಯಾ?
ಈ ಮಧ್ಯೆ, ಶವಾಗಾರಗಳಲ್ಲಿ ವಿಶೇಷವಾಗಿ ಮಹಿಳೆಯರ ಶವಗಳ ಭದ್ರತೆ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ನ್ಯಾಯಪೀಠವು ರಾಜ್ಯ ಸರ್ಕಾರಕ್ಕೆ(State government) ನಿರ್ದೇಶನಗಳನ್ನು ನೀಡಿದೆ. ಆರು ತಿಂಗಳೊಳಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಶವಾಗಾರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದಿದೆ. ಈ ಕ್ರಮ ಶವಸಂಭೋಗ ತಡೆಗಟ್ಟುವ ಗುರಿಯನ್ನು ಹೊಂದಿದೆ.

ಜತೆಗೆ ಶವಾಗಾರಗಳನ್ನು ನಿಯಮಿತವಾಗಿ ಶುಚಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಶವಗಳ ಘನತೆಯನ್ನು ಎತ್ತಿಹಿಡಿಯಬೇಕು. ಶವಾಗಾರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ದೇಹಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವಷ್ಟು ಸಂವೇದನಾಶೀಲರಾಗಬೇಕು. ಗೌಪ್ಯತೆಯನ್ನು ಕಾಪಾಡಿಕೊಳ್ಳಲು, ಪೋಸ್ಟ್‌ಮಾರ್ಟಮ್ ಕೊಠಡಿಯನ್ನು ಸಾರ್ವಜನಿಕರಿಗೆ ಅಥವಾ ಸಂದರ್ಶಕರಿಗೆ ಗೋಚರಿಸದ ರೀತಿಯಲ್ಲಿ ವಿನ್ಯಾಸಗೊಳಿಸಬೇಕು. ಶವಾಗಾರಗಳಲ್ಲಿ ಮೂಲಭೂತ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಸೂಚಿಸಿದೆ.

ಭಾರತದಲ್ಲಿ ನೆಕ್ರೋಫಿಲಿಯಾ ನಿಭಾಯಿಸುವುದು ಹೇಗೆ?
ಪ್ರಸ್ತುತ ಭಾರತದಲ್ಲಿಯೂ ನೆಕ್ರೋಫಿಲಿಯಾವನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಆದರೆ ಇದಕ್ಕೆ ಯಾವುದೇ ನಿರ್ದಿಷ್ಟ ಕಾನೂನನ್ನು ಮೀಸಲಿಟ್ಟಿಲ್ಲ. ಬದಲಾಗಿ, ಭಾರತೀಯ ದಂಡ ಸಂಹಿತೆಯಲ್ಲಿ ಅಸ್ತಿತ್ವದಲ್ಲಿರುವ ನಿಬಂಧನೆಗಳನ್ನು ಬಳಸಿಕೊಂಡು ವ್ಯವಹರಿಸಲಾಗುತ್ತದೆ. ಸಾಮಾನ್ಯವಾಗಿ ಐಪಿಸಿ ಸೆಕ್ಷನ್‌ 297 ಮತ್ತು ಸೆಕ್ಷನ್‌ 377ಗಳನ್ನು ನೆಕ್ರೋಫಿಲಿಯಾ ಪ್ರಕರಣಗಳಲ್ಲಿ ಉಲ್ಲೇಖಿಸಲಾಗುತ್ತದೆ.

ಸೆಕ್ಷನ್ 297- ಯಾರೊಬ್ಬರ ಭಾವನೆಗಳನ್ನು ನೋಯಿಸುವ ಉದ್ದೇಶದಿಂದ ಯಾರಾದರೂ ಸ್ಮಶಾನದ ಮೇಲೆ ಅತಿಕ್ರಮಣ ಮಾಡಿದರೆ, ಧರ್ಮವನ್ನು(Religion) ಅಗೌರವಿಸಿದರೆ, ಅವರ ಕಾರ್ಯಗಳು ಆ ಸ್ಥಳದೊಂದಿಗೆ ಸಂಪರ್ಕ ಹೊಂದಿದ ಜನರ ಭಾವನೆಗಳನ್ನು ಘಾಸಿಗೊಳಿಸುತ್ತದೆ ಎಂದು ತಿಳಿದಿದ್ದರೆ, ಅದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಅತಿಕ್ರಮಣ ಕ್ರಿಯೆ ನಡೆದಿದ್ದರೆ ಮಾತ್ರ ನೆಕ್ರೋಫಿಲಿಯಾ ಪ್ರಕರಣಗಳಲ್ಲಿ ಈ ನಿಬಂಧನೆಯನ್ನು ಅನ್ವಯಿಸಬಹುದು.

ಸೆಕ್ಷನ್ 377- ಅಸ್ವಾಭಾವಿಕ ಲೈಂಗಿಕ ಅಪರಾಧಗಳೊಂದಿಗೆ(Sexual crime) ವ್ಯವಹರಿಸುತ್ತದೆ. ಇದು ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ಪ್ರಕೃತಿಯ ಕ್ರಮಕ್ಕೆ ವಿರುದ್ಧವಾದ ಸಂಭೋಗದ ಯಾವುದೇ ಕ್ರಿಯೆಯನ್ನು ಅಪರಾಧವೆಂದು ಪರಿಗಣಿಸುತ್ತದೆ. ಕೆಲವೊಮ್ಮೆ, ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ನಿಬಂಧನೆಗಳನ್ನು ಕೂಡ ಅನ್ವಯಿಸಲಾಗುತ್ತದೆ. ಆದರೂ ನೆಕ್ರೋಫಿಲಿಯಾಕ್ ಚಟುವಟಿಕೆ ಮತ್ತು ಅಪರಾಧಿಯನ್ನು ಸಮರ್ಪಕವಾಗಿ ಬಂಧಿಸಿ ಕಾನೂನು ಕ್ರಮ ಜರುಗಿಸಲು ಈ ನಿಬಂಧನೆಗಳು ಸಾಕಾಗುವುದಿಲ್ಲ.

Follow Us:
Download App:
  • android
  • ios