ಚುನಾವಣಾ ಸಂದರ್ಭದಲ್ಲಿ ಕುತೂಹಲ ಮೂಡಿಸಿದೆ ಸಿಎಂ-ದೇವೇಗೌಡರ ಭೇಟಿ

First Published 13, Apr 2018, 11:34 AM IST
Telangana CM Chandrasekhar Rao Meets Deve Gowda
Highlights

ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್  ದೇವೇಗೌಡರನ್ನ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.  ಚುನಾವಣಾ ಸಂದರ್ಭದಲ್ಲಿ ಇಬ್ಬರ ಭೇಟಿ ಬಗ್ಗೆ ರಾಜಕೀಯ ವಲಯದಲ್ಲಿ  ಕುತೂಹಲ ಮೂಡಿಸಿದೆ.

 

ಬೆಂಗಳೂರು (ಏ. 13): ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್  ದೇವೇಗೌಡರನ್ನ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.  ಚುನಾವಣಾ ಸಂದರ್ಭದಲ್ಲಿ ಇಬ್ಬರ ಭೇಟಿ ಬಗ್ಗೆ ರಾಜಕೀಯ ವಲಯದಲ್ಲಿ  ಕುತೂಹಲ ಮೂಡಿಸಿದೆ.

ಚರ್ಚೆ, ಮಾತುಕತೆ ವೇಳೆ ರಾಜ್ಯ ರಾಜಕೀಯದ ಬಗ್ಗೆಯೂ ಚರ್ಚೆ ನಡೆಯಲಿದೆ. ಜೆಡಿಎಸ್ ಗೆ ತೆಲಗುಭಾಷಿಕರ ಬೆಂಬಲ ಕೊಡಿಸುವಂತೆ  ದೇವೇಗೌಡರು  ಪ್ರಸ್ತಾಪ ಮಾಡುವ  ಸಾಧ್ಯತೆ ಇದೆ.  ತೃತೀಯರಂಗ ರಚನೆ ಕುರಿತಂತೆಯೂ ಮಹತ್ತರ ನಿರ್ಧಾರ ಕೈಗೊಳ್ಳಬಹುದು ಎನ್ನಲಾಗಿದೆ.  ಪದ್ಮನಾಭನಗರ ನಿವಾಸದಲ್ಲಿ  ದೇವೇಗೌಡರನ್ನು  ಭೇಟಿ ಆಗಲಿದ್ದಾರೆ.  

loader