ಪ್ರಿಯತಮೆ ಹಲ್ಲು ತೆಗೆಸಲು ಒತ್ತಾಯಿಸುತ್ತಿರುವ ಪ್ರಿಯಕರ : ಯಾಕೆ..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 5, Aug 2018, 1:30 PM IST
Man forces lover to remove teeth to look ugly
Highlights

ಇಲ್ಲೋರ್ವ ಪಾಗಲ್ ಪ್ರೇಮಿ ತನ್ನ ಪ್ರಿಯತಮೆ ಹಲ್ಲು ತೆಗೆಸಬೇಕು ಎಂದು ಒತ್ತಾಯಿಸುತ್ತಿದ್ದಾನೆ. ಆತ ಆಕೆಗೆ ಇಂತಹ ವಿಚಿತ್ರ ಬೇಡಿಕೆ ಇಡುವುದಕ್ಕೆ ಕಾರಣವೇನು ಗೊತ್ತೆ..?

ಅಹಮದಾಬಾದ್ : ಯಾವುದೇ ಯುವಕ ಅಥವಾ ಯುವತಿ ತಾನು ಪ್ರೀತಿಸುವವರು ಅಥವಾ ವರಿಸುವವರು ಸುಂದರವಾಗಿರ ಬೇಕು ಎಂದು ಅಪೇಕ್ಷಿಸುತ್ತಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಅಹಮದಾಬಾದ್ ನ ಆಟೋ ಚಾಲಕನಾದ 57 ವರ್ಷದ ಪಾಗಲ್ ಪ್ರೇಮಿ, ತನ್ನ 58 ವರ್ಷದ ಪ್ರಿಯತಮೆ ಇತರರಿಗೆ ಆಕೆ ಸಿಗಬಾರದು. 

ತನಗಷ್ಟೇ ಸಿಗಬೇಕು ಎಂಬ ಕ್ಷುಲ್ಲಕ ಕಾರಣಕ್ಕೆ ಮುಂದಿನ ಎರಡು ಹಲ್ಲುಗಳನ್ನು ತೆಗೆಯುವಂತೆ ಪೀಡಿಸಿದ್ದಾನೆ. ಕಳೆದ 15 ವರ್ಷಗಳ ಹಿಂದೆ ಆಟೋ ಚಾಲಕ ಮತ್ತು ಸಂತ್ರಸ್ತೆ ಗೀತಾಬೆನ್‌ಗೆ ಲವ್ವಾಗಿತ್ತು. ಆದರೆ, ಬೇರೊಬ್ಬರಿಗೆ ವಿವಾಹವಾಗಿದ್ದ ಇವರು, ಬಳಿಕ ಆ ಕುಟುಂಬವನ್ನು ತ್ಯಜಿಸಿ ಮತ್ತೆ ಒಂದಾಗಿದ್ದರು. 

loader