ಬೆಂಗಳೂರು[ಜ.11]  ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ಈಗಾಗಲೇ ಕಾಲು ಮೇಲೆ ಮಾಡಿ ತಲೆ ಕೆಳಗೆ ಮಾಡಿ ಪ್ರಯತ್ನ ಮಾಡಿದ್ದರೂ ಆಗಿಲ್ಲ. ಬಿಜೆಪಿ ತಿಪ್ಪರಲಾಗ  ಹಾಕಿದ್ದರೂ ಮೈತ್ರಿ ಸರ್ಕಾರ ಉರುಳಿಸಲು ಸಾಧ್ಯವಾಗಿಲ್ಲ. ಬಿಜೆಪಿಯ ಕೌಂಟ್ ಡೌನ್ ಆರಂಭವಾಗಿದೆ. ಹೀಗಿರುವಾಗ ಬಿಜೆಪಿ ಸೇರಲು ನಮ್ಮ ಶಾಸಕರು ಯಾರೂ ಹೋಗಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಹೇಳಿದ್ದಾರೆ.

ರಾಜಕೀಯದಲ್ಲಿ ಆಯಾರಾಮ್ ಗಯಾರಾಮ್ ಅನ್ನೋರು ತುಂಬಾ ಇದ್ದಾರೆ. ಬಿಜೆಪಿಯಿಂದ ನಮ್ಮ ಪಕ್ಷಕ್ಕೆ ಸೇರಲು ಕೆಲವರು ತುದಿಗಾಲಲ್ಲಿ ನಿಂತಿದ್ದಾರೆ. ಈಶ್ವರ್ ಖಂಡ್ರೆ ಕರೆದರೇ ಕೆಲವರು ಬರಲು ರೆಡಿ ಇದ್ದಾರೆ. ಯಾರು ಎಷ್ಟು ಜನ ಅಂತ ನಾನು ಈಗಲೇ ಹೇಳಲ್ಲ ಎಂದು ಖಂಡ್ರೆ ಬಾಂಬ್ ಹಾಕಿದ್ದಾರೆ.

ರಾಜ್ಯದ ಸಂಪುಟದಿಂದ ಪ್ರಭಾವಿ ಮಂತ್ರಿಗೆ ಗೇಟ್‌ ಪಾಸ್?

ಹಾಲಿ ಕಾಂಗ್ರೆಸ್ ಸಂಸದರಿರುವ ಕ್ಷೇತ್ರಗಳನ್ನ ನಮ್ಮಲ್ಲೇ ಉಳಿಸಿಕೊಳ್ತೇವೆ. ಸೀಟು ಹೊಂದಾಣಿಕೆ ಸಂದರ್ಭದಲ್ಲಿ ಹಾಲಿ ಕೈ ಸಂಸದರ ಕ್ಷೇತ್ರಗಳು ಚರ್ಚೆಗೆ ಬರಬಾರದು ಎಂಬುದು ಸರಿಯಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸಂಸದರು ರಾಹುಲ್ ಗಾಂಧಿ ಭೇಟಿ ಮಾಡಿ ಸರಿಯಾದ ಬೇಡಿಕೆ ಇಟ್ಟಿದ್ದಾರೆ.ಕಳೆದ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಬ್ಬರದ ನಡುವೆಯೂ ರಾಜ್ಯದಲ್ಲಿ ಕಾಂಗ್ರೆಸ್ 9 ಸ್ಥಾನ ಗೆದ್ದಿತ್ತು. ಅಂಥ ಕ್ಷೇತ್ರಗಳನ್ನು ಯಾಕೆ ಬಿಟ್ಟು ಕೊಡಬೇಕು ಎಂದು ಪ್ರಶ್ನೆ ಮಾಡಿ ಜೆಡಿಎಸ್‌ಗೂ ಟಾಂಗ್ ನೀಡಿದರು.