Asianet Suvarna News Asianet Suvarna News

ಅತ್ಯಾಚಾರ ಮಾಡಿ ಅಪ್ರಾಪ್ತೆಯನ್ನು ನದಿಗೆ ಎಸೆದ ಕಾಮುಕರು

ಕಾಮುಕರು ಅಪ್ರಾಪ್ತೆ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಬಳಿಕ ನದಿಗೆ ಎಸೆದಿರುವ  ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

5-yr old abducted, raped and thrown into river in Madhya pradesh
Author
Bengaluru, First Published Jun 9, 2019, 12:24 PM IST
  • Facebook
  • Twitter
  • Whatsapp

ಭೋಪಾಲ್‌, (ಜೂನ್.09): ಕಾಮುಕರು 5 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಬಳಿಕ  ನದಿಯಲ್ಲಿ ಎಸೆದು ಹೋಗಿರುವ ಘಟನೆ  ಮಧ್ಯಪ್ರದೇಶದಲ್ಲಿ ನಡೆದಿದೆ.

 ಮಧ್ಯಪ್ರದೇಶದ ಉಜ್ಜಯಿನಿಯಿಂದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ. ಇಷ್ಟಕ್ಕೆ ಬಿಡದ ಪಾಪಿಗಳು ಬಾಲಕಿಯನ್ನು ಶಿಪ್ರ ನದಿಗೆ ಎಸೆದಿದ್ದಾರೆ. 

ಶುಕ್ರವಾರದಿಂದ ಕಾಣೆಯಾಗಿ ಬಾಲಕಿ ದ್ದ ಆಕೆಯ ನಗ್ನ ದೇಹವು ಶಿಪ್ರ ನದಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಪಕ್ಕದ್ಮನೆ ಆಂಟಿಗೆ ಬೆತ್ತಲೆ ದೇಹ ತೋರಿಸಿ ಸೆಕ್ಸ್‌ಗೆ ಆಹ್ವಾನಿಸಿದ ಅಂಕಲ್

ಬಾಲಕಿ ದೇಹದ ಮೇಲಿನ ಹಲವಾರು ಗಾಯದ ಗುರುತುಗಳು ಕಂಡುಬಂದಿದ್ದು, ಕೊಲೆಯಾಗುವ ಮುನ್ನ ಆಕೆ ಮೇಲೆ ಅತ್ಯಾಚಾರ ನಡೆದಿದೆ ಎಂದು ಉಜ್ಜಯಿನಿ ಪೊಲೀಸ್‌ ವರಿಷ್ಠಾಧಿಕಾರಿ ಸಚಿನ್‌ ಅತುಲ್ಕರ್‌ ತಿಳಿಸಿದ್ದಾರೆ.

ಶುಕ್ರವಾರದಿಂದ ಬಾಲಕಿ ಕಾಣೆಯಾಗಿದ್ದಳು. ಇದರಿಂದ ಆತಂಕಗೊಂಡಿದ್ದ ಪೋಷಕರು ಸ್ಥಳೀಯ ಪೊಲೀಸರಿಗೆ ಬಾಲಕಿ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದರು. 

ಈ ಘಟನೆಯ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಚಿಕ್ಕಪ್ಪ ಸೇರಿದಂತೆ ಮೂವರನ್ನು ವಶಕ್ಕೆ ಪಡದುಕೊಂಡು ವಿಚಾರಣೆ ನಡೆಸಿದ್ದಾರೆ.

Follow Us:
Download App:
  • android
  • ios