ಧಾರವಾಡ(ಸೆ.17): ಯುವಕನೋರ್ವ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಗೊಲ್ಲರ ಕಾಲೋನಿಯಲ್ಲಿ ಮಂಗಳವಾರ ನಡೆದಿದೆ. ಗೊಲ್ಲರ ಕಾಲೋನಿಯ ಶಂಕರ ಪರಶುರಾಮ ಗೊಲ್ಲರ(25) ಎಂಬಾತನೇ ಕೃತ್ಯ ನಡೆಸಿದ್ದಾನೆ. =

ಬಾಲಕಿಗೆ ಮೊಬೈಲ್‌ ಆಸೆ ತೋರಿಸಿ ಈ ಕೃತ್ಯ ನಡಸಿದ್ದಾನೆ ಎನ್ನಲಾಗಿದೆ. ಮಂಗಳವಾರ ಮಧ್ಯಾಹ್ನ ಮನೆಯಿಂದ ತೆರಳಿದ್ದ ಬಾಲಕಿ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಪಾಲಕರು ಸಂಬಂಧಿಕರ ಮನೆ ಸೇರಿ ಎಲ್ಲೆಡೆ ಹುಡುಕಿದರೂ ಸಿಕ್ಕಿರಲಿಲ್ಲ. ಕೊನೆಗೆ ಶಂಕರ ಅವರ ಮನೆಯಲ್ಲಿ ಪತ್ತೆಯಾಗಿದ್ದಾಳೆ.

ಮನೆಗೆ ಹಿಂದಿರುಗುತ್ತಿದ್ದ ಯುವತಿ ಕಿಡ್ನಾಪ್; ಮದ್ಯ ಕುಡಿಸಿ ರೇಪ್

ಪಾಲಕರನ್ನು ಕಂಡು ಅಳುತ್ತಿದ್ದ ಬಾಲಕಿಯನ್ನ ವಿಚಾರಿಸಿದಾಗ ಘಟನೆ ಬಗ್ಗೆ ವಿವರಿಸಿದ್ದಾಳೆ. ಇದಲ್ಲದೆ ಪಾಲಕರಿಗೆ ವಿಷಯ ಹೇಳದಂತೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.