Asianet Suvarna News Asianet Suvarna News

ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಆರೋಪಿ ಡಾ.ಸತೀಶ್ ಸಾವಿನಿಂದ ತನಿಖೆಗೆ ಹಿನ್ನಡೆ?

ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರು ಆಲೆಮನೆ ಮೇಲೆ ದಾಳಿ ನಡೆಸಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ಬಯಲಿಗೆಳೆದ ನಂತರ ಮಂಡ್ಯ ಸಮೀಪವಿರುವ ಶಿವಳ್ಳಿಯಲ್ಲಿ ಆಯುರ್ವೇದಿಕ್ ಕ್ಲಿನಿಕ್ ನಡೆಸುತ್ತಿದ್ದ ಡಾ.ಸತೀಶ್ ಮೇಲೆ ಸಾಕಷ್ಟು ಅನುಮಾನಗಳು ಮೂಡಿದ್ದವು. ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಕೂಡ ನೀಡಲಾಗಿತ್ತು. ಅದರ ಬೆನ್ನಹಿಂದೆಯೇ ಅವರ ಸಾವು ಸಂಭವಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Probe Set Back due to the Death of Dr Satish the Accused in the Case of Female Fetus Killed grg
Author
First Published Dec 3, 2023, 10:15 PM IST

ಮಂಡ್ಯ(ಡಿ.03):  ಆಯುರ್ವೇದಿಕ್ ವೈದ್ಯನಾಗಿದ್ದ ಡಾ.ಸತೀಶ್ ಸಾವಿನಿಂದಾಗಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ತನಿಖೆಗೆ ಹಿನ್ನೆಡೆ ಉಂಟಾದಂತಾಗಿದೆ. ಇದರೊಂದಿಗೆ ಪ್ರಕರಣದ ಬಗೆಗಿನ ಅನೇಕ ಸತ್ಯ ಸಂಗತಿಗಳು ಆತನ ಸಾವಿನೊಂದಿಗೆ ಸಮಾಧಿಯಾಗಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಮಂಡ್ಯ ತಾಲೂಕಿನ ಹುಳ್ಳೇನಹಳ್ಳಿಯ ಆಲೆಮನೆಯಲ್ಲಿ ನಡೆಯುತ್ತಿತ್ತು ಎನ್ನಲಾದ ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಸಂಪೂರ್ಣವಾದ ಮಾಹಿತಿ ಡಾ.ಸತೀಶ್‌ಗೆ ಇತ್ತು. ಆಲೆಮನೆಗೆ ಗರ್ಭಿಣಿಯರನ್ನು ಎಲ್ಲೆಲ್ಲಿಂದ ಕರೆತರಲಾಗುತ್ತಿತ್ತು, ಭ್ರೂಣ ಪತ್ತೆ ಜೊತೆಗೆ ಹತ್ಯೆಯೂ ನಡೆಯುತ್ತಿತ್ತೇ. ಸ್ಥಳೀಯವಾಗಿ ಯಾರೆಲ್ಲಾ ಸಹಕರಿಸುತ್ತಿದ್ದರು, ಹೊರಗಿನ ವೈದ್ಯರೂ ಈ ಜಾಲದೊಂದಿಗೆ ಕೈಜೋಡಿಸಿದ್ದರೇ ಎಂಬೆಲ್ಲಾ ಮಹತ್ವದ ಸಂಗತಿಗಳು ದೊರಕುತ್ತಿದ್ದವು.

ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರು ಆಲೆಮನೆ ಮೇಲೆ ದಾಳಿ ನಡೆಸಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ಬಯಲಿಗೆಳೆದ ನಂತರ ಮಂಡ್ಯ ಸಮೀಪವಿರುವ ಶಿವಳ್ಳಿಯಲ್ಲಿ ಆಯುರ್ವೇದಿಕ್ ಕ್ಲಿನಿಕ್ ನಡೆಸುತ್ತಿದ್ದ ಡಾ.ಸತೀಶ್ ಮೇಲೆ ಸಾಕಷ್ಟು ಅನುಮಾನಗಳು ಮೂಡಿದ್ದವು. ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಕೂಡ ನೀಡಲಾಗಿತ್ತು. ಅದರ ಬೆನ್ನಹಿಂದೆಯೇ ಅವರ ಸಾವು ಸಂಭವಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕೊಡಗು: ಹೆಣ್ಣು ಭ್ರೂಣ ಹತ್ಯೆ ಕೇಸ್‌ನಲ್ಲಿ ಹೆಸರು ಕೇಳಿ ಬಂದಿದ್ದ ಡಾಕ್ಟರ್‌ ಆತ್ಮಹತ್ಯೆ?

ಆಲೆಮನೆಯಲ್ಲಿ ನಡೆಯುತ್ತಿದ್ದ ಚಟುವಟಿಕೆಗಳಿಗೂ ಡಾ.ಸತೀಶ್ ಅವರಿಗೂ ಸಂಬಂಧವಿತ್ತು ಎಂದು ಸಂಘಟನೆಗಳು ಆರೋಪಿಸಿದ್ದವು. ಆದರೆ, ಈ ಪ್ರಕರಣದಲ್ಲಿ ಡಾ.ಸತೀಶ್ ನೇರ ಪಾತ್ರವಿರುವುದು ಎಲ್ಲಿಯೂ ಕಂಡುಬಂದಿರಲಿಲ್ಲ. ವರ್ಷದ ಹಿಂದೆ ಮಂಡ್ಯದ ನಮ್ಮ ಮನೆ-ನಮ್ಮ ಕ್ಲಿನಿಕ್‌ನಲ್ಲಿ ನಡೆದಿದ್ದ ಭ್ರೂಣಹತ್ಯೆ ಪ್ರಕರಣದಲ್ಲಿ ಇವರನ್ನೂ ಆರೋಪಿಯನ್ನಾಗಿ ಪರಿಗಣಿಸಲಾಗಿತ್ತು ಎನ್ನಲಾಗಿದೆ. ಆಲೆಮನೆಯಲ್ಲಿ ಭ್ರೂಣಹತ್ಯೆ ಬೆಳಕಿಗೆ ಬಂದ ನಂತರದಲ್ಲಿ ಡಾ.ಸತೀಶ್ ಬಗ್ಗೆ ಅನುಮಾನಗಳು ಹೆಚ್ಚಾಗಿ ಆತನನ್ನು ವಿಚಾರಣೆ ಕರೆತರುವುದಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದರು.

ಆಘಾತಕಾರಿ ಮಾಹಿತಿ: ಹತ್ಯೆಗೈದ ಭ್ರೂಣ ಕಾವೇರಿ ನದಿಗೆಸೆಯುತ್ತಿದ್ದ ದುರುಳರು..!

ಇದರ ಮಧ್ಯದಲ್ಲೇ ಡಾ.ಸತೀಶ್ ಸಾವು ಸಂಭವಿಸಿದೆ. ಆಲೆಮನೆಯಲ್ಲಿ ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಒಂದೇ ಒಂದು ಕುರುಹು ಸಿಕ್ಕಿಲ್ಲ. ಸ್ಥಳೀಯವಾಗಿ ಯಾರು ಇದಕ್ಕೆ ಸಹಕಾರ ನೀಡುತ್ತಿದ್ದರೆಂಬ ಬಗ್ಗೆ ಮಾಹಿತಿಯೂ ಇಲ್ಲ. ವೈದ್ಯಾಧಿಕಾರಿಗಳು ಭ್ರೂಣ ಹತ್ಯೆ ತಂಡಕ್ಕೆ ನೆರವಾಗಿ ನಿಂತಿದ್ದರೇ ಎನ್ನುವುದೂ ತಿಳಿದಿಲ್ಲ. ಬೈಯ್ಯಪ್ಪನಹಳ್ಳಿ ಪೊಲೀಸರು ಆಲೆಮನೆ ಮಾಲೀಕರನ್ನು ಹೊರತುಪಡಿಸಿದರೆ ಸ್ಥಳೀಯವಾಗಿ ಇನ್ಯಾರನ್ನೂ ಬಂಧಿಸಿಲ್ಲ. ಸಣ್ಣ ಸುಳಿವನ್ನೂ ಬಿಡದೆ ಚಾಕಚಕ್ಯತೆಯಿಂದ ದಂಧೆ ನಡೆಸುತ್ತಿದ್ದರು ಎನ್ನುವುದು ಪ್ರಕರಣ ಬಯಲಿಗೆ ಬಂದ ನಂತರ ಜಿಲ್ಲಾಡಳಿತ ನಡೆಸಿದ ಪರಿಶೀಲನೆಯಿಂದ ಕಂಡುಬಂದಿದೆ.

ಡಾ.ಸತೀಶ್ ಬದುಕಿದ್ದರೆ ಹೆಚ್ಚಿನ ಮಾಹಿತಿಗಳು ದೊರಕುತ್ತಿತ್ತು. ತನಿಖೆ ದೃಷ್ಟಿಯಿಂದಲೂ ಹೆಚ್ಚು ಸಹಕಾರಿಯಾಗುತ್ತಿತ್ತು. ಸ್ಥಳೀಯವಾಗಿ ಯಾರ್ಯಾರು ಇದಕ್ಕೆ ಸಹಕಾರಿಯಾಗಿ ನಿಂತಿದ್ದರೋ ಅವರೆಲ್ಲರ ಹೆಡೆಮುರಿ ಕಟ್ಟಬಹುದಿತ್ತು. ಆದರೆ, ಸತೀಶ್ ಸಾವಿನೊಂದಿಗೆ ಅದೆಲ್ಲವೂ ಮಣ್ಣಾಗಿದ್ದು ದುರ್ದೈವದ ಸಂಗತಿ ಎಂದು ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಜನಾರ್ಧನ್ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios