Asianet Suvarna News Asianet Suvarna News

ಅಂತರ್ಲಿಂಗ ಮಕ್ಕಳು ವಯಸ್ಕರಾಗುವುದರೊಳಗೆ ಲಿಂಗ ನಿರ್ಣಯ ಶಸ್ತ್ರಚಿಕಿತ್ಸೆ ಮಾಡಬಹುದೇ? ಸುಪ್ರೀಂ ಅಂಗಳದಲ್ಲಿ ಪ್ರಶ್ನೆ

ಹೆಣ್ಣೂ ಅಲ್ಲದೆ, ಗಂಡೂ ಅಲ್ಲದೆ ಜನಿಸುವ ಅಂತರ್ಲಿಂಗ ಮಕ್ಕಳಿಗೆ ನಡೆಸಲಾಗುವ ಲಿಂಗ-ಮರುವಿನ್ಯಾಸ ಶಸ್ತ್ರಚಿಕಿತ್ಸೆಗಳನ್ನು ಅವರು ವಯಸ್ಕರಾಗುವವರೆಗೆ ಮಾಡಬಾರದು ಎಂಬ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಕುರಿತಾಗಿ ಸುಪ್ರೀಂ ಕೋರ್ಟ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

No sex operation till child attains age of consent SC to decide skr
Author
First Published Apr 9, 2024, 2:12 PM IST

ಹೆಣ್ಣೂ ಅಲ್ಲದೆ, ಗಂಡೂ ಅಲ್ಲದೆ ಜನಿಸುವ ಅಂತರ್ಲಿಂಗ ಮಕ್ಕಳಿಗೆ ನಡೆಸಲಾಗುವ ಲಿಂಗ-ಮರುವಿನ್ಯಾಸ ಶಸ್ತ್ರಚಿಕಿತ್ಸೆಗಳನ್ನು ಅವರು ವಯಸ್ಕರಾಗಿ, ಸ್ವತಃ ನಿರ್ಧರಿಸುವವರೆಗೆ ಮಾಡಲು ಬಿಡಬಾರದು ಎಂಬ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಿದೆ. ಇಂಟರ್ಸೆಕ್ಸ್ ಮಕ್ಕಳು ಮತ್ತು ವ್ಯಕ್ತಿಗಳ ಹಕ್ಕುಗಳನ್ನು ಗುರುತಿಸುವ ಕೇಂದ್ರ ಶಾಸನದ ಅಗತ್ಯವಿದೆ ಎಂದು ಕೋರ್ಟ್ ಹೇಳಿದೆ. 

ಪುರುಷ ಮತ್ತು ಸ್ತ್ರೀ ಜೈವಿಕ ಗುಣಲಕ್ಷಣಗಳ ಸಂಯೋಜನೆಯೊಂದಿಗೆ ಇಂಟರ್‌ಸೆಕ್ಸ್ ವ್ಯಕ್ತಿಯು ಜನಿಸುತ್ತಾನೆ ಮತ್ತು ಹುಟ್ಟಿನಿಂದಲೇ ನಿಗದಿಪಡಿಸಲಾದ ವ್ಯಕ್ತಿಯ ಲಿಂಗವು 'ಗಂಡು' ಮತ್ತು 'ಹೆಣ್ಣು' ಎಂಬ ನಿರ್ದಿಷ್ಟ ಸಾಮಾಜಿಕ ವರ್ಗಗಳಿಗೆ ಹೊಂದಿಕೆಯಾಗುವುದಿಲ್ಲ. ಇಂಥ ಸಂದರ್ಭದಲ್ಲಿ ಪೋಷಕರು ಅವರಿಗೆ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಆದರೆ, ಮಗುವು ತಿಳಿವಲಿಕೆ ಪಡೆದು ತಾನೇ ಸ್ವತಃ ನಿರ್ಧರಿಸುವವರೆಗೆ ಈ ಶಸ್ತ್ರಚಿಕಿತ್ಸೆ ನಡೆಸಲು ಅನುಮತಿಸುವುದು ಸರಿಯಲ್ಲ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹೇಳಲಾಗಿದೆ. 


 

ಆನ್‌ಲೈನ್ ಸರ್ಕಾರಿ ನೋಂದಣಿ ಅರ್ಜಿಗಳಲ್ಲಿ ಇಂಟರ್‌ಸೆಕ್ಸ್ ಮಕ್ಕಳ ಜನನ ಮತ್ತು ಸಾವಿನ ವಿವರಗಳನ್ನು ನೋಂದಾಯಿಸಲು ಯಾವುದೇ ಆಯ್ಕೆಯಿಲ್ಲದಿರುವುದರಿಂದ ಅಂತಹ ಮಕ್ಕಳು ಹುಟ್ಟಿದ ಹಂತದಿಂದ ತಾರತಮ್ಯವನ್ನು ಎದುರಿಸುತ್ತಾರೆ. ಜನಗಣತಿಯು ಅವರ ಪ್ರಾತಿನಿಧ್ಯವನ್ನು ಹೊರತುಪಡಿಸುತ್ತದೆ ಮತ್ತು ಅವರನ್ನು ಮತದಾರರೆಂದು ಗುರುತಿಸುವುದಿಲ್ಲ.  ಹಲವಾರು ರಾಜ್ಯಗಳಲ್ಲಿ ಶಿಶುಗಳ ಪೋಷಕರ ಒಪ್ಪಿಗೆಯೊಂದಿಗೆ ಲಿಂಗ-ನಿರ್ಧಾರದ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ ಎಂದು ಅರ್ಜಿದಾರರು ಎತ್ತಿ ತೋರಿಸಿದ್ದಾರೆ. 

ಇಂಟರ್ಸೆಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮಗುವಿನೊಂದಿಗೆ ವೈದ್ಯಕೀಯ ಮಧ್ಯಸ್ಥಿಕೆಗಳಿಂದ ಉಂಟಾಗುವ ಕಾಳಜಿಯನ್ನು ಪರಿಹರಿಸಲು ಶಾಸಕಾಂಗ ಕಾರ್ಯವಿಧಾನದ ಅವಶ್ಯಕತೆಯಿದೆ ಎಂದು ಅವರು ವಾದಿಸಿದ್ದಾರೆ.

ಯೂಟ್ಯೂಬರ್ ಆಗಿ ಮನೆ ಖರೀದಿಸಿದ ಟ್ರಕ್ ಡ್ರೈವರ್; ಇದಕ್ಕಿಂತ ಸ್ಪೂರ್ತಿ ಇನ್ನೇನು ಅಂದ್ರು ಆನಂದ್ ಮಹೀಂದ್ರ
 

ಅಂತರ್ಲಿಂಗೀಯ ಮಕ್ಕಳಿಗೆ ಅವರ ನಿಜವಾದ ಲಿಂಗ ಗುರುತಿಸಲು ಸಮಯ ಮತ್ತು ಜಾಗವನ್ನು ನೀಡಬೇಕು ಎಂದು ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಅವರ ಪೀಠವು ಅಭಿಪ್ರಾಯಪಟ್ಟಿದೆ. ಇಂಟರ್‌ಸೆಕ್ಸ್ ವ್ಯಕ್ತಿಗಳು ತಮಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಪ್ರಬುದ್ಧರಾಗುವವರೆಗೆ ಈ ಶಸ್ತ್ರಚಿಕಿತ್ಸೆ ಮುಂದೂಡಬೇಕೆಂಬ ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು.
ಸಿಜೆಐ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಅರ್ಜಿಯಲ್ಲಿ ನೋಟಿಸ್ ಜಾರಿಗೊಳಿಸಿತು ಮತ್ತು ನ್ಯಾಯಾಲಯಕ್ಕೆ ಸಹಾಯ ಮಾಡಲು ಹೆಚ್ಚುವರಿ ಸಾಲಿಸಿಟರ್ ಜನರಲ್ ಶ್ರೀಮತಿ ಐಶ್ವರ್ಯಾ ಭಾಟಿಗೆ ಮನವಿ ಮಾಡಿತು. 

Follow Us:
Download App:
  • android
  • ios