ನಿರ್ಭಯಾ ಹತ್ಯಾಚಾರಿಗಳ ಗಲ್ಲು ಮುಂದಕ್ಕೆ: ಡಿ. 18ಕ್ಕೆ ಅರ್ಜಿ ವಿಚಾರಣೆ!
ನಿರ್ಭಯಾ ಅತ್ಯಾಚಾರ ದೋಷಿಗಳ ಗಲ್ಲುಶಿಕ್ಷೆಗೆ ದಿನಗಣನೆ| ಅರ್ಜಿ ವಿಚಾರಣೆಯನ್ನು ಡಿ. 18ಕ್ಕೆ ಮುಂದೂಡಿದ ಪಟಿಯಾಲಾ ಹೈಕೋರ್ಟ್| ಡಿ. 16 ರಂದು ನಾಲ್ವರಿಗೂ ಆಗಬೇಕಿದ್ದ ಗಲ್ಲು ಶಿಕ್ಷೆ ಮತ್ತೆ ಮುಂದಕ್ಕೆ
ನವದೆಹಲಿ[ಡಿ.13]: ನಿರ್ಭಯಾ ಅತ್ಯಾಚಾರ ದೋಷಿಗಳ ಗಲ್ಲುಶಿಕ್ಷೆಗೆ ದಿನಗಣನೆ ಆರಂಭವಾಗಿತ್ತು. ಹೀಗಿರುವಾಗಲೇ ಪಟಿಯಾಲಾ ಹೈಕೋರ್ಟ್‌ನಲ್ಲಿ ನಿರ್ಭಯಾ ಪ್ರಕರಣ ಸಂಬಂಧ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಅರ್ಜಿ ವಿಚಾರಣೆಯನ್ನು ಡಿ. 18ಕ್ಕೆ ಮುಂದೂಡಿದೆ. ಈ ಮೂಲಕ ಡಿ. 16 ರಂದು ನಾಲ್ವರಿಗೂ ಆಗಬೇಕಿದ್ದ ಗಲ್ಲು ಶಿಕ್ಷೆ ಮತ್ತೆ ಮುಂದಕ್ಕೋಗಿದೆ,.
ಹೌದು ನಿರ್ಭಯಾ ಅತ್ಯಾಚಾರಿಗಳಿಗೆ ಒಂದೇ ಬಾರಿ ಗಲ್ಲಿಗೇರಿಸಬೇಕು, ಕೊಂಚವೂ ತಡ ಮಾಡಬಾರದೆಂದು ಕೋರಿ ತಾಯಿ ಆಶಾ ದೇವಿ ಪಟಿಯಾಲಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನಾಲ್ವರೂ ಅಪರಾಧಿಗಳನ್ನು ಸುರಕ್ಷತೆ ಹಿನ್ನೆಲೆ ವಿಡಿಯೋ ಕಾನ್ಫರೆನ್ಟ್ ಮೂಲಕ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು ಈಗಾಗಲೇ ದೋಷಿಗಳಲ್ಲೊಬ್ಬನಾದ ಅಕ್ಷಯ್ ಡೆತ್ ವಾರಂಟ್ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಸರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ಅಂತ್ಯವಾಗುವವರೆಗೂ ಯಾವುದೇ ತೀರ್ಪು ಪ್ರಕಟಿಸಲು ಸಾಧ್ಯವಿಲ್ಲ ಎಂದಿದೆ. ಅಲ್ಲದೇ ಅರ್ಜಿ ವಿಚಾರಣೆಯನ್ನು ಡಿ. 18ಕ್ಕೆ ಮುಂದೂಡಿಸಿದೆ.
ಅಕ್ಷಯ್ ಡೆತ್ ವಾರಂಟ್ ವಿರುದ್ಧ ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿರುವ ವಿಶೇಷ ಮೇಲ್ಮನವಿ ವಿಚಾರಣೆ ಡಿ. 17ಕ್ಕೆ ನಡೆಯಲಿದೆ.
ಪಟಿಯಾಲಾ ಹೈಕೋರ್ಟ್ ನೀಡಿರುವ ಆದೇಶದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿರ್ಭಯಾ ತಾಯಿ ಆಶಾ ದೇವಿ 'ನ್ಯಾಯಕ್ಕಾಗಿ ನಾವು 7 ವರ್ಷ ಹೋರಾಡಿದ್ದೇವೆ ಎಂದರೆ, ಇನ್ನೊಂದು ವಾರ ಕಾಯಲು ಸಾಧ್ಯವಿಲ್ಲವೇ? ಡಿ. 18ಕ್ಕೆ ಅವರಿಗೆ ಡೆತ್ ವಾರಂಟ್ ಸಿಗುವುದು ಖಚಿತ' ಎಂದಿದ್ದಾರೆ
ಡಿಸೆಂಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ