11:05 PM (IST) Sep 22

India Latest News Live:ವಿಮಾನದ ಚಕ್ರದ ಬಳಿ ಅಡಗಿ ಕುಳಿತು ದೆಹಲಿಗೆ ಬಂದಿಳಿದ ಅಫ್ಘಾನ್ ಬಾಲಕ, ಬದುಕುಳಿದಿದ್ದೇ ಪವಾಡ

ವಿಮಾನದ ಚಕ್ರದ ಬಳಿ ಅಡಗಿ ಕುಳಿತು ದೆಹಲಿಗೆ ಬಂದಿಳಿದ ಅಫ್ಘಾನ್ ಬಾಲಕ, ಬದುಕುಳಿದಿದ್ದೇ ಪವಾಡ, ಕಾಬೂಲ್‌ನಿಂದ ದೆಹಲಿಗೆ 94 ನಿಮಿಷಗಳ ಪ್ರಯಾಣ ಮಾಡಿದ್ದಾನೆ. ವೇಗ, ಗಾಳಿ, ಹವಾಮಾನ ಸೇರಿದಂತೆ ಅತ್ಯಂತ್ಯ ಪ್ರತಿಕೂಲ ಸ್ಥಿತಿಯಲ್ಲಿ 13 ವರ್ಷದ ಬಾಲಕ ಬದುಕುಳಿದಿದ್ದೇ ಹಲವರ ಅಚ್ಚರಿಗೆ ಕಾರಣವಾಗಿದೆ.

Read Full Story
10:47 PM (IST) Sep 22

India Latest News Live:10ನೇ ಕ್ಲಾಸ್ ಫೇಲ್, ಆದ್ರೆ 3 ಬಾರಿ ಸಿವಿಲ್ಸ್ ಪಾಸ್ ಮಾಡಿ IPS ಆದ್ರು.. ಇದಲ್ವಾ ಯಶಸ್ಸು!

10ನೇ ತರಗತಿಯಲ್ಲಿ ಫೇಲ್ ಆಗಿದ್ದ ರಾಜಸ್ಥಾನದ ಈಶ್ವರ್ ಗುರ್ಜರ್, ತಂದೆಯ ಪ್ರೋತ್ಸಾಹದಿಂದ ಮತ್ತೆ ಓದು ಮುಂದುವರೆಸಿದರು. ಶಿಕ್ಷಕರಾಗಿ ಕೆಲಸ ಮಾಡುತ್ತಲೇ UPSC ಪರೀಕ್ಷೆಗೆ ತಯಾರಿ ನಡೆಸಿ, ಸತತ ಪ್ರಯತ್ನಗಳ ನಂತರ IPS ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
Read Full Story
10:17 PM (IST) Sep 22

India Latest News Live:ತಿರುಪತಿಯಲ್ಲಿ ಭಕ್ತರ ಪರಿಸ್ಥಿತಿ ಇಷ್ಟೊಂದು ಭೀಕರವಾಗಿದೆಯೇ? ಸತ್ಯ ಬಿಚ್ಚಿಟ್ಟ ಬೆಂಗಳೂರಿನ ವ್ಯಕ್ತಿ

ಬೆಂಗಳೂರಿನ ಭಕ್ತರೊಬ್ಬರು ತಮ್ಮ ತಿರುಪತಿ ಯಾತ್ರೆಯಲ್ಲಿ ಎದುರಿಸಿದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಿರುಮಲಕ್ಕೆ ಬರುವ ಇತರ ಭಕ್ತರಿಗೆ ಜಾಗರೂಕರಾಗಿರಲು ಎಚ್ಚರಿಕೆ ನೀಡಿದ್ದಾರೆ.

Read Full Story
09:00 PM (IST) Sep 22

India Latest News Live:ಹೆಚ್‌ 1B ವೀಸಾ ಆಘಾತ - ಟೆಕ್ಕಿಗಳನ್ನು ಭಾರತಕ್ಕೆ ಮರಳಲು ಸಲಹೆ ನೀಡಿದ ಜೊಹೊ ಸಂಸ್ಥಾಪಕ

ಅಮೆರಿಕದ H-1B ವೀಸಾ ಶುಲ್ಕದಲ್ಲಿ ಭಾರೀ ಹೆಚ್ಚಳವಾದ ಹಿನ್ನೆಲೆಯಲ್ಲಿ, ಜೊಹೊ ಸಂಸ್ಥಾಪಕ ಶ್ರೀಧರ್ ವೆಂಬು ಅವರು ಅಮೆರಿಕದಲ್ಲಿರುವ ಭಾರತೀಯ ತಂತ್ರಜ್ಞರಿಗೆ ಭಾರತಕ್ಕೆ ಮರಳಲು ಕರೆ ನೀಡಿದ್ದಾರೆ. ಭಾರತದಲ್ಲಿ ಬೆಳೆಯುತ್ತಿರುವ ಅವಕಾಶಗಳನ್ನು ಬಳಸಿಕೊಂಡು ಯಶಸ್ವಿಯಾಗಲು ಅವರು ಸಲಹೆ ನೀಡಿದ್ದಾರೆ.

Read Full Story
08:57 PM (IST) Sep 22

India Latest News Live:ಹ್ಯಾರಿಸ್ ರೌಫ್ ಬಳಿಕ ಭಾರತ ಅಣಕಿಸಿದ ಪಾಕ್ ಫುಟ್ಬಾಲ್ ಪಟು, ಭುಗಿಲೆದ್ದೆ ಆಕ್ರೋಶ

ಹ್ಯಾರಿಸ್ ರೌಫ್ ಬಳಿಕ ಭಾರತ ಅಣಕಿಸಿದ ಪಾಕ್ ಫುಟ್ಬಾಲ್ ಪಟು, ಭುಗಿಲೆದ್ದೆ ಆಕ್ರೋಶ, ಕ್ರಿಕೆಟ್ ಬಳಿಕ ಫುಟ್ಬಾಲ್ ಪಂದ್ಯದಲ್ಲೂ ನೀಚ ಬುದ್ದಿಯನ್ನು ಪಾಕ್ ಆಟಗಾರರು ತೋರಿದ್ದಾರೆ. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಎಲ್ಲಾ ಪಂದ್ಯ ರದ್ದುಗೊಳಿಸಲು ಆಗ್ರಹ ಕೇಳಿಬರುತ್ತಿದೆ.

Read Full Story
08:10 PM (IST) Sep 22

India Latest News Live:ಬಾಡಿಗೆ ಮನೆಯಲ್ಲಿರುವಾಕೆಗೆ ಅಶ್ಲೀಲ ಸಿಡಿ ಕಲಕ್ಷೆನ್ ತೋರಿಸಿದ ಮಾಲೀಕ, ನೋವು ಹೇಳಿಕೊಂಡ ಯುವತಿ

ಬಾಡಿಗೆ ಮನೆಯಲ್ಲಿರುವಾಕೆಗೆ ಅಶ್ಲೀಲ ಸಿಡಿ ಕಲಕ್ಷೆನ್ ತೋರಿಸಿದ ಮಾಲೀಕ,ನೋವು ಹೇಳಿಕೊಂಡ ಯುವತಿ, ನಡೆದ ಘಟನೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಲಹೆ ಕೇಳಿದ್ದಾರೆ. ತನಗಾಗುತ್ತಿರುವ ಹಿಂಸೆಯನ್ನು ಹೇಳಿಕೊಂಡಿದ್ದಾಳೆ.

Read Full Story
06:32 PM (IST) Sep 22

India Latest News Live:Asia Cup 2025 - ಭಾರತ-ಪಾಕಿಸ್ತಾನ ನಡುವೆ ಮೂರನೇ ಸಲ ಫೈಟ್? ಫೈನಲ್‌ನಲ್ಲಿ ಮತ್ತೆ ಫೈಟ್?

ಏಷ್ಯಾಕಪ್‌ನಲ್ಲಿ ಈಗಾಗಲೇ ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿರುವ ಭಾರತ, ಫೈನಲ್‌ನಲ್ಲಿ ಮೂರನೇ ಬಾರಿಗೆ ಮುಖಾಮುಖಿಯಾಗುವ ನಿರೀಕ್ಷೆ ಹೆಚ್ಚಾಗಿದೆ.

Read Full Story
06:17 PM (IST) Sep 22

India Latest News Live:ನವರಾತ್ರಿ ಸಮಯದಲ್ಲಿ ಈ ಚಿಕ್ಕ ಕೆಲಸ ಮಾಡಿದ್ರೆ ನಿಮ್ಮ ಜೀವನ ಮಾಲಾಮಾಲ್! ಇಲ್ಲಿದೆ ನೋಡಿ ಸಿಂಪಲ್​ ಟಿಪ್ಸ್​...

ಸೆಪ್ಟೆಂಬರ್ 22 ರಿಂದ ಆರಂಭವಾಗುವ ನವರಾತ್ರಿ ಹಬ್ಬವು ಈ ಬಾರಿ 10 ದಿನಗಳ ಕಾಲ ನಡೆಯಲಿದ್ದು, ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸಲಾಗುತ್ತದೆ. ಖ್ಯಾತ ಜ್ಯೋತಿಷಿಯೊಬ್ಬರ ಪ್ರಕಾರ, ಈ ಸಮಯದಲ್ಲಿ ಪತ್ನಿಗೆ ಚಿಕ್ಕ ಉಡುಗೊರೆ ನೀಡುವುದರಿಂದ ಜೀವನದಲ್ಲಿ ಹಣದ ಕೊರತೆ ನೀಗಿ, ಸಂತೋಷ ನೆಲೆಸುತ್ತದೆ.
Read Full Story
06:06 PM (IST) Sep 22

India Latest News Live:ಮದುವೆಯಾಗಿ ಜೊತೆಯಲ್ಲಿ ಇದ್ದಿದ್ದು ಒಂದೇ ವರ್ಷ, ಆದರೂ 5 ಕೋಟಿ ಜೀವನಾಂಶ ಕೇಳಿದ ಪತ್ನಿ - ಸುಪ್ರೀಂ ಕೋರ್ಟ್‌ ಛೀಮಾರಿ

Supreme Court Rebukes Wife for Demanding ₹5 Cr Alimony After One Year of Marriage ಕೇವಲ ಒಂದು ವರ್ಷದ ದಾಂಪತ್ಯವನ್ನು ಕೊನೆಗೊಳಿಸಲು ಪತ್ನಿ 5 ಕೋಟಿ ರೂಪಾಯಿ ಜೀವನಾಂಶ ಕೇಳಿದ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್‌ ಆಕೆಯ ಬೇಡಿಕೆಯನ್ನು ಅಸಮಂಜಸ ಎಂದು ಪರಿಗಣಿಸಿ ಕಠಿಣ ಎಚ್ಚರಿಕೆ ನೀಡಿದೆ.

Read Full Story
05:48 PM (IST) Sep 22

India Latest News Live:ತಿರುಪತಿ ಹುಂಡಿಯಿಂದ ಕದ್ದ 100 ಕೋಟಿ ಹೋಗಿದ್ದೆಲ್ಲಿಗೆ? CCTV ದೃಶ್ಯ ಬಿಡುಗಡೆ

ವೈ.ಎಸ್. ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಪತಿ ದೇವಸ್ಥಾನದ ಹುಂಡಿಯಿಂದ 100 ಕೋಟಿ ರೂ.ಗೂ ಅಧಿಕ ಹಣ ಕಳ್ಳತನವಾಗಿದೆ ಎಂದು ಬಿಜೆಪಿ ನಾಯಕ ಭಾನು ಪ್ರಕಾಶ್ ರೆಡ್ಡಿ ಆರೋಪಿಸಿದ್ದಾರೆ. ಈ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿ, ಜಗನ್ ನಿವಾಸಕ್ಕೆ ಕಳುಹಿಸಲಾಗಿದೆ ಎಂದು ದೂರಿದ್ದಾರೆ.

Read Full Story
04:54 PM (IST) Sep 22

India Latest News Live:ಭಾರಿ ಇಳಿಕೆ ಕಂಡ ಟಾಟಾ ಪಂಚ್, ಮಾರುತಿ ಫ್ರಾಂಕ್ಸ್ ಸೇರಿ ಸಣ್ಣ ಕಾರು ಬೆಲೆ, ಜೊತೆಗೆ ಹಬ್ಬದ ಆಫರ್

ಭಾರಿ ಇಳಿಕೆ ಕಂಡ ಟಾಟಾ ಪಂಚ್, ಮಾರುತಿ ಫ್ರಾಂಕ್ಸ್ ಸೇರಿ ಸಣ್ಣ ಕಾರು ಬೆಲೆ, ಜೊತೆಗೆ ಹಬ್ಬದ ಆಫರ್, ಗ್ರಾಹಕರ ಸಂಭ್ರಮಕ್ಕೆ ಕಾರಣವಾಗಿದೆ. ಜಿಎಸ್‌ಟಿ ಪರಿಷ್ಕರಣೆಯಿಂದ ಸಣ್ಣ ಕಾರುಗಳ ಬೆಲೆ ಭಾರಿ ಇಳಿಕೆಯಾಗಿದೆ. ಜೊತೆಗೆ ಹಬ್ಬದ ಆಫರ್ ಕೂಡ ಇದೆ. ಹೀಗಾಗಿ ಖರೀದಿಗೆ ಇದೂ ಸೂಕ್ತ ಸಮಯವಾಗಿದೆ. 

Read Full Story
04:17 PM (IST) Sep 22

India Latest News Live:Asia Cup 2025 - ಭಾರತ ಎದುರು ಸೋತ ಪಾಕಿಸ್ತಾನಕ್ಕೆ ಈಗಲೂ ಇದೆ ಫೈನಲ್‌ಗೇರೋ ಚಾನ್ಸ್!

2025ರ ಏಷ್ಯಾಕಪ್ ಸೂಪರ್-4 ಹಂತದಲ್ಲಿ ಭಾರತದೆದುರು ಸೋತರೂ ಪಾಕಿಸ್ತಾನಕ್ಕೆ ಫೈನಲ್‌ಗೇರುವ ಅವಕಾಶ ಇನ್ನೂ ಇದೆ. ಶ್ರೀಲಂಕಾ ಮತ್ತು ಬಾಂಗ್ಲಾದೇಶದ ವಿರುದ್ಧದ ಮುಂದಿನ ಪಂದ್ಯಗಳನ್ನು ಗೆಲ್ಲುವುದು ಪಾಕ್‌ಗೆ ನಿರ್ಣಾಯಕವಾಗಿದೆ. ಇತ್ತ, ಟೀಂ ಇಂಡಿಯಾ ಫೈನಲ್ ಪ್ರವೇಶಿಸಲು ಇನ್ನೊಂದು ಗೆಲುವಿನ ನಿರೀಕ್ಷೆಯಲ್ಲಿದೆ.
Read Full Story
04:04 PM (IST) Sep 22

India Latest News Live:ತನ್ನದೇ ಜನರ ಮೇಲೆ ಏರ್‌ಸ್ಟ್ರೈಕ್‌ ಮಾಡಿ 30 ಜನರ ಕೊಂದ ಪಾಕಿಸ್ತಾನ ಏರ್‌ಪೋರ್ಸ್‌!

Pakistan Air Force Airstrike Kills 30 Civilians in Tribal Village ಪಾಕಿಸ್ತಾನ ವಾಯುಪಡೆಯು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಗ್ರಾಮವೊಂದರ ಮೇಲೆ ಬಾಂಬ್ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ನಾಗರಿಕರು ಸಾವನ್ನಪ್ಪಿದ್ದಾರೆ. 

Read Full Story
03:57 PM (IST) Sep 22

India Latest News Live:ಯಾರೋ ಮಾತಿಗೆ ಹಿಂದೂಗಳು ಮಾಂಸಾಹಾರ ಬಿಡ್ತೀರಾ, ನವರಾತ್ರಿ ವೇಳೆ ಕಾಂಗ್ರೆಸ್ ನಾಯಕ ವಿವಾದ

ಯಾರೋ ಮಾತಿಗೆ ಹಿಂದೂಗಳು ಮಾಂಸಾಹಾರ ಬಿಡ್ತೀರಾ, ನವರಾತ್ರಿ ವೇಳೆ ಕಾಂಗ್ರೆಸ್ ನಾಯಕ ವಿವಾದ, ನವರಾತ್ರಿ ವೇಳೆ ಮಾಂಸಾಹಾರ ಬ್ಯಾನ್ ಮಾಡುವ ಆಗ್ರಹಕ್ಕೆ ಕಾಂಗ್ರೆಸ್ ನಾಯಕ ಉದಿತ್ ರಾಜ್ ವಿವಾದಿತ ಹೇಳಿಕೆ ನೀಡಿದ್ದಾರೆ.

Read Full Story
03:43 PM (IST) Sep 22

India Latest News Live:ರೈಲ್ವೆಯ ಪ್ರತಿಷ್ಠಿತ ಎಸಿ ಕೋಚಲ್ಲಿ ಬೆಡ್‌ಶೀಟ್ ಕದ್ದು ಬ್ಯಾಗ್‌ಗೆ ತುಂಬಿಸಿ ಸಿಕ್ಕಿಬಿದ್ದ ಕುಟುಂಬ - ವೀಡಿಯೋ

ದೆಹಲಿ-ಒಡಿಶಾ ಪುರುಷೋತ್ತಮ್ ಎಕ್ಸ್‌ಪ್ರೆಸ್ ರೈಲಿನ ಫಸ್ಟ್ ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದು, ಬೆಡ್‌ಶೀಟ್‌ ಮತ್ತು ಟವೆಲ್‌ಗಳನ್ನು ಕದಿಯಲು ಯತ್ನಿಸಿ ಸಿಕ್ಕಿಬಿದ್ದಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story
02:27 PM (IST) Sep 22

India Latest News Live:135 ನಿಮಿಷದ ಹಾರರ್ ಸಿನಿಮಾ 16 ದಿನದಲ್ಲಿ ಗಳಿಸಿದ್ದು 3140 ಕೋಟಿ; ಭಾರತದಲ್ಲಿಯೂ ರಿಲೀಸ್ ಆಗಿದೆ!

ಇದು ಈ ಫ್ರಾಂಚೈಸಿಯ ಕೊನೆ ಚಿತ್ರ: ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಕಂಡಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರವು 15 ದಿನಗಳಲ್ಲಿ 3140 ಕೋಟಿ ಗಳಿಸಿದೆ.

Read Full Story
02:00 PM (IST) Sep 22

India Latest News Live:ಮಿಲಿಯನ್ ವೀವ್ಸ್‌ ಗಳಿಸಿದ ರೀಲ್ಸ್ ನೋಡಿ ಮನೆಗೆ ಬಂದ ಪೊಲೀಸರು - ಸಾಯುವುದಾಗಿ ಚಾಕು ಹಿಡಿದು ಬೆದರಿಸಿದ ಯುವತಿ

UP Police vs Influencer: ಯುವತಿಯೊಬ್ಬಳು ಪೊಲೀಸ್ ಠಾಣೆಯ ಮುಂದೆ ರೀಲ್ಸ್ ಮಾಡಿದ್ದಳು ಲಕ್ಷಾಂತರ ವೀವ್ಸ್ ಪಡೆದ ಈ ವಿಡಿಯೋವನ್ನು ಡಿಲೀಟ್ ಮಾಡುವಂತೆ ಪೊಲೀಸರು ಸೂಚಿಸಿದಾಗ, ಆಕೆ ಪ್ರಾಣ ಬಿಡುತ್ತೇನೆ ಹೊರತು ರೀಲ್ಸ್ ಡಿಲೀಟ್ ಮಾಡುವುದಿಲ್ಲ ಎಂದು ಪೊಲೀಸರಿಗೆಯೇ ಧಮ್ಕಿ ಹಾಕಿದ್ದಾಳೆ.

Read Full Story
01:38 PM (IST) Sep 22

India Latest News Live:ಗುರು ಕಾಣಿಕೆ - ಯುವರಾಜ್ ಸಿಂಗ್ ದಾಖಲೆ ಮುರಿದ ಬಿಗ್ ಹಿಟ್ಟರ್ ಅಭಿಷೇಕ್ ಶರ್ಮಾ!

ಏಷ್ಯಾಕಪ್ ಸೂಪರ್-4 ಹಂತದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಅಭಿಷೇಕ್ ಶರ್ಮಾ, ಕೇವಲ 24 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ತಮ್ಮ ಗುರು ಯುವರಾಜ್ ಸಿಂಗ್ ಅವರ ದಾಖಲೆಯನ್ನು ಮುರಿದರು.

Read Full Story
01:26 PM (IST) Sep 22

India Latest News Live:ಪತ್ನಿ ಜೊತೆ ಹನಿಮೂನ್​ಗೆ ಹೋದ ಪತಿ ಫಸ್ಟ್​ ನೈಟ್​ ಮಾಡಿದ್ದು ಸ್ನೇಹಿತನ ಜೊತೆ! ಬೆಚ್ಚಿಬೀಳಿಸೋ ಸ್ಟೋರಿ ಇದು...

ಸಾಫ್ಟ್‌ವೇರ್ ಎಂಜಿನಿಯರ್‌ನನ್ನು ಮದುವೆಯಾದ ಯುವತಿಗೆ ಹನಿಮೂನ್‌ನಲ್ಲಿ ಆಘಾತ ಕಾದಿತ್ತು. ಪತಿಗೆ ಹೆಣ್ಣಿನ ಚಟವಿಲ್ಲ ಎಂದು ಖುಷಿಪಟ್ಟಿದ್ದ ಕುಟುಂಬಕ್ಕೆ, ಆತ ಸಲಿಂಗಕಾಮಿ ಎಂಬ ಸತ್ಯ ತಿಳಿದುಬಂದಿದೆ.

Read Full Story
12:26 PM (IST) Sep 22

India Latest News Live:ಭಾರತದ್ದೇ ನೆಲದಲ್ಲಿರುವ ಈ ಹೊಟೇಲ್‌ಗೆ ಭಾರತೀಯರಿಗಿಲ್ಲ ಪ್ರವೇಶ...

ರಾಜಸ್ಥಾನದ ಜೋಧ್‌ಪುರದಲ್ಲಿರುವ ಡೈಲನ್ಸ್ ಕೆಫೆಯು, ಭಾರತೀಯ ಎಂಬ ಕಾರಣಕ್ಕೆ ಐಐಟಿ ವಿದ್ಯಾರ್ಥಿಯೊಬ್ಬರಿಗೆ ಪ್ರವೇಶ ನಿರಾಕರಿಸಿದೆ. ಕೇವಲ ವಿದೇಶಿಗರಿಗೆ ಮಾತ್ರ ಸೇವೆ ನೀಡುತ್ತೇವೆ ಎಂಬ ಹೊಟೇಲ್ ಮಾಲೀಕನ ಉದ್ಧಟತನದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 

Read Full Story