ಹ್ಯಾರಿಸ್ ರೌಫ್ ಬಳಿಕ ಭಾರತ ಅಣಕಿಸಿದ ಪಾಕ್ ಫುಟ್ಬಾಲ್ ಪಟು, ಭುಗಿಲೆದ್ದೆ ಆಕ್ರೋಶ, ಕ್ರಿಕೆಟ್ ಬಳಿಕ ಫುಟ್ಬಾಲ್ ಪಂದ್ಯದಲ್ಲೂ ನೀಚ ಬುದ್ದಿಯನ್ನು ಪಾಕ್ ಆಟಗಾರರು ತೋರಿದ್ದಾರೆ. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಎಲ್ಲಾ ಪಂದ್ಯ ರದ್ದುಗೊಳಿಸಲು ಆಗ್ರಹ ಕೇಳಿಬರುತ್ತಿದೆ.
ಕೊಲೊಂಬೊ(ಸೆ.22) ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಹಲವು ಹೈಡ್ರಾಮಗಳು ನಡೆದಿತ್ತು. ಭಾರತ ಭರ್ಜರಿ ಗೆಲುವು ದಾಖಲಿಸಿ ಸಂಭ್ರಮಿಸಿತ್ತು. ಪಾಕಿಸ್ತಾನ ಸೋಲು ಖಚಿತವಾಗುತ್ತಿದ್ದಂತೆ ತಮ್ಮ ನೀಚ ಬುದ್ದಿ ತೋರಿಸಿದ್ದರು. ಸ್ಲೆಡ್ಜಿಂಗ್, ಪೆಹಲ್ಗಾಂ ದಾಳಿಯನ್ನು ಸಂಭ್ರಮಿಸಿದ ರೀತಿಯ ಸೆಲೆಬ್ರೆಶನ್, ಜೊತೆಗೆ ಆಪರೇಶನ್ ಸಿಂದೂರ್ ವೇಳೆ ಭಾರತದ 6 ಯುದ್ಧ ವಿಮಾನ ಹೊಡೆದುರುಳಿಸಲಾಗಿದೆ ಎಂದು ಸಿಗ್ನಲ್ ತೋರಿಸಿ ಭಾರತವನ್ನು ಅಣಕಿಸುವ ಪ್ರಯತ್ನ ನಡೆದಿತ್ತು. ಪಾಕಿಸ್ತಾನ ಬೌಲರ್ ಹ್ಯಾರಿಸ್ ರೌಫ್, ಬೌಂಡರಿ ಲೈನ್ ಬಳಿ ನಿಂತು 6-0, ಯುದ್ದ ವಿಮಾನ ಹೊಡೆದುರುಳಿಸಿದ್ದೇವೆ ಎಂದು ಅಣಕವಾಡಿದ್ದರು. ಇದರ ಬೆನ್ನಲ್ಲೇ ಅಂಡರ್ 17 ಫುಟ್ಬಾಲ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಫುಟ್ಬಾಲ್ ಪಟು ಇದೇ ರೀತಿ ಸಿಗ್ನಲ್ ತೋರಿಸಿ ಭಾರತ ಅಣಕಿಸಿದ್ದಾರೆ. ಪಾಕಿಸ್ತಾನ ಕ್ರೀಡಾಪಟುಗಳ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಫುಟ್ಬಾಲ್ ಟೂರ್ನಿಯಲ್ಲಿ ಪಾಕ್ ಪಟುಗಳು ಉದ್ಧಟತನ
ಕೊಲೊಂಬೊದಲ್ಲಿ ನಡೆದ SAFF U17 ಫುಟ್ಬಾಲ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಈ ಘಟನೆ ನಡೆದಿದೆ. ರೋಚಕ ಫುಟ್ಬಾಲ್ ಪಂದ್ಯದಲ್ಲಿ ಭಾರತ ಒಂದು ಸೋಲು ಸಿಡಿಸಿ ಮುನ್ನಡೆಯಲ್ಲಿತ್ತು. ಈ ವೇಳೆ ಸಿಕ್ಕ ಪೆನಾಲ್ಟಿ ಅವಾಕಾಶದಲ್ಲಿ ಪಾಕಿಸ್ತಾನ ಒಂದು ಗೋಲು ಸಿಡಿಸಿತ್ತು. ಪಾಕಿಸ್ತಾನ ಫುಟ್ಬಾಲ್ ಪಟುಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಮೊಹಮ್ಮದ್ ಅಬ್ದುಲ್ಲಾ ಗೋಲು ಸಿಡಿಸಿ ಇಡೀ ಮೈದಾನದಲ್ಲಿ ಸಂಭ್ರಮಾಚರಣೆ ಮಾಡಿದ್ದರು. ಇದೇ ವೇಳೆ ಮೊಹಮ್ಮದ್ ಅಬ್ದುಲ್ಲಾ, ಕ್ರಿಕೆಟಿಗ ಹ್ಯಾರಿಸ್ ರೌಫ್ ರೀತಿಯಲ್ಲೇ ಭಾರತದ ಯುದ್ಧ ವಿಮಾನ ಹೊಡೆದುರುಳಿಸಿದ್ದೇವೆ ಎಂದು ಅಣಕಿಸುವ ಸಂಭ್ರಮಾಚರಣೆ ಮಾಡಿದ್ದಾರೆ.
ಹಾಫ್ ಸೆಂಚುರಿ ಸಂಭ್ರಮದಲ್ಲಿ ಪೆಹಲ್ಗಾಂ ಉಗ್ರ ದಾಳಿ ಸಂತ್ರಸ್ತರ ಅಣಕಿಸಿದ ಫರ್ಹಾನ್, ಭಾರಿ ವಿವಾದ
ಭಾರತದ ರಾಫೆಲ್ ಜೆಟ್ ಹಾರಿ ಬಂದು ನೆಲಕ್ಕಪ್ಪಳಿಸುವ ಈ ಸಂಭ್ರಮಾಚರಣೆ ಭಾರತೀಯರನ್ನು ಮತ್ತಷ್ಟು ಕೆರಳಿಸಿದೆ. ಪಾಕಿಸ್ತಾನ ಜೊತೆ ಯಾವ ಪಂದ್ಯವೂ ಬೇಡ, ಭಯೋತ್ಪಾದಕ ರಾಷ್ಟ್ರದ ಜೊತೆ ಅಂತಾರಾಷ್ಟ್ರೀಯ ಪಂದ್ಯಗಳೂ ಬೇಡ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕೆಟ್‌ನಲ್ಲಿ ಮುಖಭಂಗ, ಫುಟ್ಬಾಲ್‌ನಲ್ಲಿ ಕಪಾಳಮೋಕ್ಷ
ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟಿಗರು ಭಾರತವನ್ನು ಹಲವು ಬಾರಿ ಅಣಕಿಸಿದ್ದಾರೆ. ಪಾಕಿಸ್ತಾನ ಆರಂಭಿಕ ಬ್ಯಾಟರ್ ಫರ್ಹಾನ್ ಹಾಫ್ ಸೆಂಚುರಿ ಸಿಡಿಸಿ ಗನ್ ಫೈರಿಂಗ್ ಸಂಬ್ರಮಾಚರಣೆ ನಡೆಸಿದ್ದರು. ಈ ಮೂಲಕ ಪೆಹಲ್ಗಾಂ ಉಗ್ರ ದಾಳಿಯ ಸಂತ್ರಸ್ತರನ್ನು ಅಣಕಿಸಿದ್ದರು. ಇಷ್ಟೇ ಅಲ್ಲ ಪೆಹಲ್ಗಾಂ ಉಗ್ರ ದಾಳಿಯನ್ನು ಸಂಭ್ರಮಿಸುವ ರೀತಿಯಲ್ಲಿ ಆಚರಿಸಿದ್ದರು. ಇತ್ತ ಅಭಿಶೇಷ್ ಶರ್ಮಾ, ಶುಬಮನ್ ಗಿಲ್‌ಗೆ ಸ್ಲೆಡ್ಜಿಂಗ್ ಮಾಡಿದರೂ ಪ್ರಯೋಜನವಾಗಲಿಲ್ಲ. ಪಾಕಿಸ್ತಾನಕ್ಕೆ ತಕ್ಕ ರೀತಿ ಉತ್ತರ ನೀಡಿದ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತ್ತು. ಪಾಕಿಸ್ತಾನ ಸೋಲಿನ ಮುಖಭಂಗ ಅನುಭವಿಸಿತ್ತು. ಇತ್ತ ಅಂಡರ್ 17 ಫುಟ್ಬಾಲ್ ಪಂದ್ಯದಲ್ಲೂ ಇದೇ ಕತೆ. ತಮ್ಮ ಪೌರುಷ ಈ ರೀತಿ ಅಣಕಿಸುವುದರಲ್ಲೇ ತೋರಿಸಿದ್ದರು. ಆದರೆ ಭಾರತ ವಿರುದ್ಧದ ಫುಟ್ಬಾಲ್ ಪಂದ್ಯದಲ್ಲಿ ಅಬ್ದುಲ್ಲಾ ಈ ಸಂಭ್ರಮಾಚರಣೆ ಬಳಿಕ ಪಾಕಿಸ್ತಾನಕ್ಕೆ ತಕ್ಕೆ ತಿರುಗೇಟು ನೀಡಲಾಗಿತ್ತು. ಮತ್ತೆರೆಡು ಗೋಲು ಸಿಡಿಸಿದ ಭಾರತ 3-2 ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತ್ತು.
ಜಗಳಕ್ಕಿಳಿದ ಪಾಕ್ ಬೌಲರ್ಸ್‌ಗೆ ಬ್ಯಾಟ್ ಜೊತೆಗೆ ಅವರದ್ಧೇ ಭಾಷೆಯಲ್ಲಿ ಉತ್ತರ ಕೊಟ್ಟ ಅಭಿಷೇಕ್
