MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Education
  • 10ನೇ ಕ್ಲಾಸ್ ಫೇಲ್, ಆದ್ರೆ 3 ಬಾರಿ ಸಿವಿಲ್ಸ್ ಪಾಸ್ ಮಾಡಿ IPS ಆದ್ರು.. ಇದಲ್ವಾ ಯಶಸ್ಸು!

10ನೇ ಕ್ಲಾಸ್ ಫೇಲ್, ಆದ್ರೆ 3 ಬಾರಿ ಸಿವಿಲ್ಸ್ ಪಾಸ್ ಮಾಡಿ IPS ಆದ್ರು.. ಇದಲ್ವಾ ಯಶಸ್ಸು!

10ನೇ ತರಗತಿಯಲ್ಲಿ ಫೇಲ್ ಆಗಿದ್ದ ರಾಜಸ್ಥಾನದ ಈಶ್ವರ್ ಗುರ್ಜರ್, ತಂದೆಯ ಪ್ರೋತ್ಸಾಹದಿಂದ ಮತ್ತೆ ಓದು ಮುಂದುವರೆಸಿದರು. ಶಿಕ್ಷಕರಾಗಿ ಕೆಲಸ ಮಾಡುತ್ತಲೇ UPSC ಪರೀಕ್ಷೆಗೆ ತಯಾರಿ ನಡೆಸಿ, ಸತತ ಪ್ರಯತ್ನಗಳ ನಂತರ IPS ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

1 Min read
Author : Mahmad Rafik
Published : Sep 22 2025, 10:47 PM IST
Share this Photo Gallery
  • FB
  • TW
  • Linkdin
  • Whatsapp
15
ಈಶ್ವರ್ ಗುರ್ಜರ್ IPS
Image Credit : ishwargurjar/instagram

ಈಶ್ವರ್ ಗುರ್ಜರ್ IPS

10, 12ನೇ ಕ್ಲಾಸ್ ಫೇಲಾದರೆ ಕೆಲವರು ಆತ್ಮ*ಹತ್ಯೆ ಮಾಡಿಕೊಂಡು ಜೀವನವನ್ನು ಕೊನೆಗೊಳಿಸುತ್ತಾರೆ. ಆದ್ರೆ ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಯಶಸ್ಸು ಸಾಧಿಸಿದವರೂ ನಮ್ಮ ಜೊತೆಯಲ್ಲಿದ್ದಾರೆ. 10ನೇ ಕ್ಲಾಸ್ ಫೇಲಾಗಿದ್ದ ಈಶ್ವರ್ ಗುರ್ಜರ್ IPS ಆಗಿದ್ದಾರೆ.

25
ಮಧ್ಯಮ ವರ್ಗ
Image Credit : X/PintuJangid901

ಮಧ್ಯಮ ವರ್ಗ

ರಾಜಸ್ಥಾನದ ಭಿಲ್ವಾರಾದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಈಶ್ವರ್, 10ನೇ ತರಗತಿಯಲ್ಲಿ ಫೇಲ್ ಆಗಿದ್ದವರು ಅಂದ್ರೆ ನೀವು ನಂಬಲೇಬೇಕು. 10ನೇ ಕ್ಲಾಸ್‌ನಲ್ಲಿ ಫೇಲ್ ಆಗಿದ್ದರಿಂದ ನಿರಾಶೆಗೊಂಡು ಓದು ಬಿಡಲು ಈಶ್ವರ್ ಗುರ್ಜರ್ ಯೋಚಿಸಿದ್ದರು. ಆದರೆ ತಂದೆಯ ಪ್ರೋತ್ಸಾಹ ಅವರ ಜೀವನಕ್ಕೆ ಹೊಸ ತಿರುವು ನೀಡಿತು. ತಂದೆಯ ಪ್ರೋತ್ಸಾಹದಿಂದ ಈಶ್ವರ್ ಗುರ್ಜರ್ ಇಂದು ಎಲ್ಲರಿಗೂ ಮಾದರಿಯಾಗಿದ್ದಾರೆ.

Related Articles

Related image1
ಅನುಭವಿ ವೃತ್ತಿಪರರಿಗೆ ಕೇಂದ್ರ ಸರ್ಕಾರಿ ಸೇವೆಗೆ ಅವಕಾಶ: ಯುಪಿಎಸ್‌ಸಿ ಹೊಸ ನೇಮಕಾತಿ ಅಧಿಸೂಚನೆ
Related image2
ಯುಪಿಎಸ್‌ಸಿ ಟಾಪರ್ ಶಕ್ತಿ ದುಬೆ ಬೆಸ್ಟ್ ಸಲಹೆ 'ಕಡಿಮೆ ಓದಿ, ಪದೇ ಪದೆ ಓದಿ'
35
ಸರ್ಕಾರಿ ಶಾಲಾ ಶಿಕ್ಷಕ
Image Credit : Instagram

ಸರ್ಕಾರಿ ಶಾಲಾ ಶಿಕ್ಷಕ

ತಂದೆಯ ಮಾತಿನಂತೆ 2012ರಲ್ಲಿ ಮತ್ತೆ 10ನೇ ಕ್ಲಾಸ್ ಪರೀಕ್ಷೆ ಬರೆದು 54% ಅಂಕಗಳೊಂದಿಗೆ ಈಶ್ವರ್ ಗುರ್ಜರ್ ಪಾಸ್ ಆಗುತ್ತಾರೆ. ಪದವಿ ಮುಗಿಸಿ 2019ರಲ್ಲಿ ಸರ್ಕಾರಿ ಶಾಲಾ ಶಿಕ್ಷಕರಾಗಿ ಕೆಲಸಕ್ಕೆ ಈಶ್ವರ್ ಗುರ್ಜರ್ ಸೇರತ್ತಾರೆ. ಇಲ್ಲಿಗೆ ಈಶ್ವರ್ ಅವರ ಜೀವನ ಒಂದು ಹಂತದಲ್ಲಿ ಸೆಟ್ ಆಗಿತ್ತು.

ಇದನ್ನೂ ಓದಿ: ಬುದ್ಧಿವಂತರಿಗೆ ಮಾತ್ರ 8 ಟ್ರಿಕ್ಕಿ ಪ್ರಶ್ನೆಗಳು, ನಿಮ್ಮ ಮೆದುಳಿನ ಶಕ್ತಿ ಪರೀಕ್ಷಿಸಿ

45
IPS ಅಧಿಕಾರಿ
Image Credit : Getty

IPS ಅಧಿಕಾರಿ

ಶಿಕ್ಷಕ ವೃತ್ತಿಯಲ್ಲೇ ಈಶ್ವರ್ ಗುರ್ಜರ್ ಯುಪಿಎಸ್‌ಸಿ ತಯಾರಿ ಆರಂಭಿಸಿದರು. ಸತತ ವೈಫಲ್ಯಗಳ ನಂತರ, 2022ರಲ್ಲಿ 644ನೇ ರ್ಯಾಂಕ್, 2023ರಲ್ಲಿ 555ನೇ ರ್ಯಾಂಕ್, 2024ರಲ್ಲಿ 483ನೇ ರ್ಯಾಂಕ್ ಪಡೆದು IPS ಅಧಿಕಾರಿಯಾಗಿದ್ದಾರೆ.

ಇದನ್ನೂ ಓದಿ: ತಮ್ಮ ಮಗುವಿಗೆ UPSC ಎಂದು ಹೆಸರಿಟ್ಟ ದಂಪತಿ, ಕಾರಣ ಕೇಳಿದ್ರೆ ನೀವೂ ತಲೆಕೆಡಿಸಿಕೊಳ್ತೀರಿ

55
ಯಶಸ್ಸಿನ ಕಥೆ ಕಠಿಣ ಪರಿಶ್ರಮ
Image Credit : stockPhoto

ಯಶಸ್ಸಿನ ಕಥೆ ಕಠಿಣ ಪರಿಶ್ರಮ

ಈಗ ಈಶ್ವರ್ ಗುರ್ಜರ್ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈಶ್ವರ್ ಅವರ ಯಶಸ್ಸಿನ ಕಥೆ ಕಠಿಣ ಪರಿಶ್ರಮ, ತಾಳ್ಮೆ ಮತ್ತು ಛಲದಿಂದ ಏನನ್ನಾದರೂ ಸಾಧಿಸಬಹುದು ಎಂದು ನಿರೂಪಿಸುತ್ತದೆ.

ಇದನ್ನೂ ಓದಿ: UPSC ಸಂದರ್ಶನದಲ್ಲಿ ಕೇಳಿದ ಪ್ರಶ್ನೆ ಬಹಿರಂಗಪಡಿಸಿದ ವಿದೇಶಾಂಗ ಸಚಿವ ಜೈಶಂಕರ್

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಯುಪಿಎಸ್ಸಿ
ಯಶಸ್ಸಿನ ಕಥೆ
ಶಿಕ್ಷಣ

Latest Videos
Recommended Stories
Recommended image1
ಗುಲ್ಬರ್ಗ ವಿವಿ ಘಟಿಕೋತ್ಸವ: ರೈತನ ಮಗಳು ಚೆನ್ನಮ್ಮಗೆ 11, ಕೂಲಿಕಾರನ ಮಗ ರಾಹುಲ್‌ಗೆ 9 ಗೋಲ್ಡ್ ಮೆಡಲ್!
Recommended image2
ಶಾಲಾ ಮಕ್ಕಳಿಗೆ ಫ್ರೀ ನೋಟ್‌ಬುಕ್‌ ಪ್ರಸ್ತಾವ ಜೀವಂತ, 50 ಲಕ್ಷ ಮಕ್ಕಳಿಗೆ ನೋಟ್‌ಬುಕ್‌ ನೀಡಲು ಬೇಕು 75 ಕೋಟಿ ರು.
Recommended image3
ಚನ್ನಪಟ್ಟಣ ತಾಲೂಕಿನಲ್ಲಿ ಸಂಜೆ ಆದ್ರೆ ಸಾಕು ವಿದ್ಯಾರ್ಥಿಗಳ ಮನೆ ಬಾಗಿಲು ತಟ್ಟೋ ತಹಶೀಲ್ದಾರ್!
Related Stories
Recommended image1
ಅನುಭವಿ ವೃತ್ತಿಪರರಿಗೆ ಕೇಂದ್ರ ಸರ್ಕಾರಿ ಸೇವೆಗೆ ಅವಕಾಶ: ಯುಪಿಎಸ್‌ಸಿ ಹೊಸ ನೇಮಕಾತಿ ಅಧಿಸೂಚನೆ
Recommended image2
ಯುಪಿಎಸ್‌ಸಿ ಟಾಪರ್ ಶಕ್ತಿ ದುಬೆ ಬೆಸ್ಟ್ ಸಲಹೆ 'ಕಡಿಮೆ ಓದಿ, ಪದೇ ಪದೆ ಓದಿ'
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved