ಸಾಫ್ಟ್‌ವೇರ್ ಎಂಜಿನಿಯರ್‌ನನ್ನು ಮದುವೆಯಾದ ಯುವತಿಗೆ ಹನಿಮೂನ್‌ನಲ್ಲಿ ಆಘಾತ ಕಾದಿತ್ತು. ಪತಿಗೆ ಹೆಣ್ಣಿನ ಚಟವಿಲ್ಲ ಎಂದು ಖುಷಿಪಟ್ಟಿದ್ದ ಕುಟುಂಬಕ್ಕೆ, ಆತ ಸಲಿಂಗಕಾಮಿ ಎಂಬ ಸತ್ಯ ತಿಳಿದುಬಂದಿದೆ.  

ಆತ ಸಾಫ್ಟ್​ವೇರ್​ ಎಂಜಿನಿಯರ್​, ವೆಲ್​ ಸೆಟಲ್ಡ್​. ಆಕೆ ಕೂಡ ಉದ್ಯೋಗಸ್ಥೆ. ಅವಳ ಮನೆಯಲ್ಲಿ ಮದುವೆಗಾಗಿ ಹುಡುಗನ ಹುಡುಕುತ್ತಿದ್ದಾಗ ಸಿಕ್ಕಿದ್ದೇ ಈ ಟೆಕ್ಕಿ. ಅವನ ಬಗ್ಗೆ ಸಾಮಾನ್ಯವಾಗಿ ಎಲ್ಲ ಹೆಣ್ಣುಮಕ್ಕಳ ಅಪ್ಪ-ಅಮ್ಮ ವಿಚಾರಿಸುವಂತೆ ಹುಡುಗಿಯ ಮನೆಯವರೂ ವಿಚಾರಿಸಿದ್ದಾರೆ. ಒಳ್ಳೆಯ ಹುಡುಗ, ಏನೂ ಚಟ ಇಲ್ಲ, ಅದರಲ್ಲಿಯೂ ಮುಖ್ಯವಾಗಿ ಹುಡುಗಿಯರ ಶೋಕಿ, ಚಟ ಇಲ್ಲ ಎನ್ನುವುದು ತಿಳಿದಿದೆ. ಏಕೆಂದರೆ, ಚಿಕ್ಕ ವಯಸ್ಸಿನಲ್ಲಿಯೇ ಕೈತುಂಬಾ ದುಡ್ಡು ಬಂದರೆ ಆ ಚಟ, ಈ ಚಟದ ಜೊತೆಗೆ ಹುಡುಗಿಯರ ಚಟ ಶುರುವಾಗುವುದು ಹೊಸ ವಿಷಯವನೇಲ್ಲ. ಇಂಥ ಯುವಕರನ್ನೇ ಬುಟ್ಟಿಗೆ ಹಾಕಿಕೊಳ್ಳಲು ಇಂದಿನ ಹುಡುಗಿಯರೂ ತುದಿಗಾಲಿನಲ್ಲಿ ನಿಲ್ಲುವುದು ತಿಳಿಯದ ವಿಷಯವೇನಲ್ಲ. ಆದ್ದರಿಂದ ಹುಡುಗಿಯರ ವಿಷಯದಲ್ಲಿ ಆತನ ಬಗ್ಗೆ ವಿಚಾರಿಸಿದಾಗ ಅಂಥ ಶೋಕಿ ಇಲ್ಲ ಎಂದು ತಿಳಿದಿದೆ.

ಹನಿಮೂನ್​ನಲ್ಲಿ ಆಗಿದ್ದೇ ಬೇರೆ...

ಸರಿ ಮದುವೆಯಾಯಿತು. ಹನಿಮೂನ್​ಗೆ ಪ್ಲ್ಯಾನ್​ ಮಾಡಿತು ಈ ಜೋಡಿ. ಒಂದು ಜಾಗವನ್ನೂ ಗೊತ್ತು ಮಾಡಿದರು. ಅವರ ಪಕ್ಕದ ರೂಮಿನಲ್ಲಿಯೇ ಪತಿಯ ಸ್ನೇಹಿತ ಕೂಡ ಪತ್ನಿ ಜೊತೆ ಹನಿಮೂನ್​ಗೆ ಬಂದಿದ್ದ. ಅವನ ಮದುವೆ ಇವನ ಮದುವೆಗಿಂತಲೂ ಒಂದು ತಿಂಗಳು ಮುಂಚೆಯೇ ಆಗಿತ್ತು. ಆದರೆ ಇಬ್ಬರೂ ಒಟ್ಟಿಗೇ ಹನಿಮೂನ್​ಗೆ ಹೋಗುವ ಪ್ಲ್ಯಾನ್​ ಮಾಡಿದ್ದರಿಂದ ಒಟ್ಟಿಗೇ ಹೋಗಿ, ಅಕ್ಕ-ಪಕ್ಕದ ರೂಮ್​ ಮಾಡಿದ್ದರು.

ಪತಿಯಂದಿರಿಬ್ಬರೂ ಕಾಣೆ...

ರಾತ್ರಿಯಾಗುತ್ತಿದ್ದಂತೆಯೇ ಈ ಸಾಫ್ಟ್​ವೇರ್​ ಪತಿ, ತನ್ನ ಪತ್ನಿಗೆ ಪಕ್ಕದ ರೂಮಿನ ಸ್ನೇಹಿತನನ್ನು ಮಾತನಾಡಿಸಿ ಬರುತ್ತೇನೆ ನೀನು ಇಲ್ಲೇ ಇರು ಎಂದು ಹೋದ. ಅತ್ತ ಪಕ್ಕದ ರೂಮಿನ ಪತಿದೇವ ಕೂಡ ಪತ್ನಿಯನ್ನು ಸ್ನೇಹಿತನ ಪತ್ನಿಯ ಜೊತೆ ಮಾತನಾಡುವಂತೆ ಹೇಳಿ, ತನ್ನ ಕೋಣೆಗೆ ಸ್ನೇಹಿತನನ್ನು ಕರೆಸಿಕೊಂಡ. ಎಷ್ಟು ಹೊತ್ತಾದರೂ ಪತಿಯಂದಿರ ಸುಳಿವೇ ಇರಲಿಲ್ಲ. ಬಾಗಿಲು ಹಾಕಿಕೊಂಡಿತ್ತು. ತುಂಬಾ ಸಮಯದ ಬಳಿಕ ಸಿಕ್ಕಿರೋ ಕಾರಣದಿಂದ ಮಾತನಾಡ್ತಾ ಇರಬಹುದು ಎಂದು ಇಬ್ಬರೂ ಪತ್ನಿಯರು ತಮ್ಮ ತಮ್ಮ ಗಂಡನಿಗಾಗಿ ಕಾದು ಸುಸ್ತಾಗಿ ಮಲಗಿದರು. ಬೆಳಿಗ್ಗೆ ಪತಿಯಂದಿರು ಪ್ರತ್ಯಕ್ಷ ಆದಾಗ ಏನೇನೋ ಸಬೂಬು ಹೇಳಿ ತಪ್ಪಿಸಿಕೊಂಡರು. ಆದರೆ ಎರಡನೆಯ ದಿನವೂ ಅದೇ ಆಯ್ತು. ಇಷ್ಟಾದರೂ ಇಬ್ಬರೂ ಪತ್ನಿಯಂದಿರಿಗೆ ಸಂಶಯವೇ ಬರಲಿಲ್ಲ.

ಲ್ಯಾಪ್​ಟಾಪ್​ನಲ್ಲಿತ್ತು ರಹಸ್ಯ

ಪತಿಯ ಜೊತೆ ಜಗಳ ಆಡಿದ ಸಾಫ್ಟ್​ವೇರ್​ ಪತ್ನಿ ಹನಿಮೂನ್​ ಕಟ್ ಮಾಡಿ ಮನೆಗೆ ಬಂದಳು. ತನ್ನನ್ನು ಟಚ್​ ಮಾಡದ ಗಂಡನ ಮೇಲೆ ಆಕೆಗೆ ಬೇರೆಯ ರೀತಿಯದ್ದೇ ಸಂಶಯ ಬರತೊಡಗಿತ್ತು. ಏನಿದಕ್ಕೆ ಕಾರಣ ಎಂದು ಮಾತ್ರ ತಿಳಿದಿರಲಿಲ್ಲ. ಕೊನೆಗೆ ಅಲ್ಲಿಯೇ ಇದ್ದ ಗಂಡನ ಲ್ಯಾಪ್​ಟಾಪ್​ ಓಪನ್ ಮಾಡಿ ನೋಡಿದರೆ ಅದರಲ್ಲಿ ಇಬ್ಬರು ಗಂಡಸರು ದೈಹಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋಗಳೇ ತುಂಬಿ ಹೋಗಿದ್ದವು. ಅದನ್ನು ನೋಡಿ ಪತ್ನಿಗೆ ಶಾಕ್​ ಆಗೋಯ್ತು. ಇದರ ಅರ್ಥ ಅಂದು ಹನಿಮೂನ್​ಗೆ ಹೋದಾಗ ಸ್ನೇಹಿತ ಮತ್ತು ಈತ ಇಬ್ಬರೂ..... ಎನ್ನೋದನ್ನು ನೆನೆಸಿಕೊಂಡೇ ಅವಳಿಗೆ ಸುಸ್ತಾಗಿ ಹೋಯಿತು. ಕೊನೆಗೆ ಆ ಸ್ನೇಹಿತ ಕೂಡ ಪ್ಲ್ಯಾನ್​ ಮಾಡಿಕೊಂಡೇ ಇಬ್ಬರೂ ಸೇರಲು ಪತ್ನಿಯಂದಿರನ್ನು ಹನಿಮೂನ್​ ನೆಪದಲ್ಲಿ ಕರೆದುಕೊಂಡು ಬಂದಿದ್ದು ತಿಳಿಯಿತು.

ಡಿವೋರ್ಸ್​ಗೆ ಅರ್ಜಿ

ಕೊನೆಗೆ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದಳು ಪತ್ನಿ. ಅಷ್ಟಕ್ಕೂ ಈ ಸ್ಟೋರಿ ಹೇಳಿದ್ದು, ಈ ಕೇಸ್​ ಅನ್ನು ಹ್ಯಾಂಡಲ್​ ಮಾಡಿರೋ ವಕೀಲ ಬಿ.ಎನ್​.ನಾಗರಾಜು ಅವರು. ಮದುವೆ ಮಾಡಿಸುವ ಸಂದರ್ಭದಲ್ಲಿ ಹೆಣ್ಣಿನ ಮನೆಯವರು ಸಾಮಾನ್ಯವಾಗಿ, ಗಂಡಿನ ಸಂಬಳ ಎಷ್ಟು, ಅವನು ವೆಲ್​ ಸೆಟಲ್​ಡಾ? ಅವನ ಗುಣ ಹೇಗಿದೆ, ಎಷ್ಟು ಖರ್ಚು ಮಾಡ್ತಾನೆ? ಹೆಣ್ಣುಮಕ್ಕಳ ಶೋಕಿ ಇದ್ಯಾ... ಹೀಗೆ ಏನೇನೋ ವಿಚಾರಿಸ್ತಾರೆ. ಇದೆಲ್ಲಾ ವಿಚಾರಿಸಿದ್ರೂ ಪ್ರತಿಸಲವೂ ಎಲ್ಲವೂ ಗೊತ್ತಾಗಲ್ಲ ಬಿಡಿ. ಆದರೂ ಒಂದು ಮಟ್ಟಿಗೆ, ಇವೆಲ್ಲಾ ತಿಳಿದುಕೊಳ್ಳಬಹುದು. ಆದರೆ ಹೆಣ್ಣುಮಕ್ಕಳ ಶೋಕಿನಾ ಎಂದು ವಿಚಾರಿಸುವ ಹೆಣ್ಣಿನ ಅಪ್ಪ-ಅಮ್ಮ ಅವನಿಗೆ ಆ ಶೋಕಿ ಇಲ್ಲ ಎಂದು ತಿಳಿದ ತಕ್ಷಣ ಬಹಳ ಖುಷಿಯಾಗಿ ಬಿಡ್ತಾರೆ, ನನ್ನ ಗಂಡನಾಗುವವ ತುಂಬಾ ಒಳ್ಳೆಯವ ಎಂದು ಯುವತಿ ಅಂದುಕೊಂಡರೆ, ಇಂಥ ಶೋಕಿ-ಗೀಕಿ ಇಲ್ಲದ ಹುಡುಗ, ನನ್ನ ಮಗಳಿಗೆ ಸೂಟ್​ ಆಗ್ತಾನೆ ಎಂದು ಅಪ್ಪ-ಅಮ್ಮ ಖುಷಿ ಪಡ್ತಾರೆ. ಸರಿ, ಅವನಿಗೆ ಹೆಣ್ಣುಮಕ್ಕಳ ಚಟ ಇಲ್ಲ, ಆದ್ರೆ ಗಂಡು ಮಕ್ಕಳ ಚಟ ಇದ್ಯಾ ಎನ್ನೋದನ್ನು ಯಾರೂ ತಿಳಿದುಕೊಳ್ಳಲ್ಲ ಎಂದು ವಕೀಲರು ಹೇಳಿದ್ದಾರೆ. ಆದ್ದರಿಂದ ಈ ಬಗ್ಗೆಯೂ ತಿಳಿದುಕೊಂಡೇ ಮದುವೆ ಮಾಡಿಸಬೇಕು ಎನ್ನುವುದು ಅವರ ಮಾತು.

ಸರಿಯಾಗಿ ವಿಚಾರಿಸಿ ಮದುವೆ ಮಾಡಿ

ಅಷ್ಟಕ್ಕೂ, ಗಂಡಸರಿಗೆ ಗಂಡಸರ ಜೊತೆ ಹೆಣ್ಣುಮಕ್ಕಳಿಗೆ ಹೆಣ್ಣುಮಕ್ಕಳ ಜೊತೆ ಅಟ್ರಾಕ್ಷನ್​ ಆಗುವ ಹಲವಾರು ಉದಾಹರಣೆಗಳು ಇವೆ. ಸಲಿಂಗಕಾಮಿಗಳು ಎಂದು ಕರೆಯುವ ಇವರ ಪೈಕಿ ಹಲವರು ತಮ್ಮ ಲಿಂಗದವರನ್ನೇ ಮದುವೆಯಾಗಿರುವ ಉದಾಹರಣೆಗಳೂ ಇವೆ. ಆದರೆ ಅವುಗಳ ಬಗ್ಗೆ ಹೆಣ್ಣಿನ ಅಥವಾ ಗಂಡಿನ ಮನೆಯವರು ವಿಚಾರಿಸೋದೇ ಇಲ್ವಲ್ಲಾ? ಅಷ್ಟಕ್ಕೂ ಇದನ್ನು ವಿಚಾರಿಸುವುದು ಕೂಡ ಸುಲಭ ಅಲ್ಲ ಹೌದಾದರೂ, ಅಂಥ ಯೋಚನೆಯೇ ಬರುವುದಿಲ್ಲವಲ್ಲ! ಇದೇ ಕಾರಣಕ್ಕೆ ಇಂದು ಮದುವೆಯಾದ ಮೇಲೆ ಡಿವೋರ್ಸ್​ ಆಗ್ತಿರೋದು ಹೆಚ್ಚುತ್ತಿದೆ ಎಂದಿರುವ ವಕೀಲ ಬಿ.ಎನ್​.ನಾಗರಾಜು ಅವರು ಈ ಕುರಿತು ಮೇಲೆ ಹೇಳಿದ ಘಟನೆಯನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ಮದ್ವೆ ಫಿಕ್ಸ್​ ಆಗ್ತಿದ್ದಂಗೆಯೇ ಯುವತಿಯರು Googleನಲ್ಲಿ ಮೊದಲು ಹುಡುಕೋದು ಇದೇಯಂತೆ! ಏನಪ್ಪಾ ಅದು?

View post on Instagram