- Home
- News
- India News
- Tirupati Temple Experience: ತಿರುಪತಿಯಲ್ಲಿ ಭಕ್ತರ ಪರಿಸ್ಥಿತಿ ಇಷ್ಟೊಂದು ಭೀಕರವಾಗಿದೆಯೇ? ಸತ್ಯ ಬಿಚ್ಚಿಟ್ಟ ಬೆಂಗಳೂರಿನ ವ್ಯಕ್ತಿ
Tirupati Temple Experience: ತಿರುಪತಿಯಲ್ಲಿ ಭಕ್ತರ ಪರಿಸ್ಥಿತಿ ಇಷ್ಟೊಂದು ಭೀಕರವಾಗಿದೆಯೇ? ಸತ್ಯ ಬಿಚ್ಚಿಟ್ಟ ಬೆಂಗಳೂರಿನ ವ್ಯಕ್ತಿ
ಬೆಂಗಳೂರಿನ ಭಕ್ತರೊಬ್ಬರು ತಮ್ಮ ತಿರುಪತಿ ಯಾತ್ರೆಯಲ್ಲಿ ಎದುರಿಸಿದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಿರುಮಲಕ್ಕೆ ಬರುವ ಇತರ ಭಕ್ತರಿಗೆ ಜಾಗರೂಕರಾಗಿರಲು ಎಚ್ಚರಿಕೆ ನೀಡಿದ್ದಾರೆ.

ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ
ತಿರುಮಲದ ಏಳು ಬೆಟ್ಟಗಳ ಮೇಲೆ ನೆಲೆಸಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಪ್ರತಿನಿತ್ಯ ಲಕ್ಷಾಂತರ ಜನರು ಬರುತ್ತಾರೆ. ಆಂಧ್ರ ಪ್ರದೇಶ ಮಾತ್ರವಲ್ಲ ದೇಶದ ಮೂಲೆ ಮೂಲೆಗಳಿಂದಲೂ ತಿರುಪತಿಗೆ ಭಕ್ತರು ಬರುತ್ತಾರೆ. ಭಗವಂತನ ದರ್ಶನಕ್ಕಾಗಿ ಭಕ್ತರು ಗಂಟೆಗಟ್ಟಲೇ ಕಾಯುತ್ತಾರೆ. ಶ್ರೀನಿವಾಸನ ದರ್ಶನ ಸಿಗುತ್ತಿದ್ದಂತೆ ಸರತಿ ಸಾಲಿನಲ್ಲಿ ನಿಂತ ಎಲ್ಲಾ ದಣಿವು ಮಾಯವಾಗುತ್ತದೆ.
ಭಕ್ತರೇ ಹೋಟೆಲ್‌ಗಳ ಗ್ರಾಹಕರು
ದರ್ಶನಕ್ಕಾಗಿ ಭಕ್ತರು ಕೆಲ ಸಮಯ ಸರತಿ ಸಾಲಿನಲ್ಲಿ ನಿಲ್ಲಲೇಬೇಕು. ಇದೀಗ ಕೆಲವರು ವೆಂಕಟೇಶ್ವರ ಸ್ವಾಮಿಯ ಮೇಲಿನ ಭಕ್ತರ ನಂಬಿಕೆಯನ್ನೇ ತಮ್ಮ ವ್ಯವಹಾರಕ್ಕಾಗಿ ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ತಿರುಪತಿಯಲ್ಲಿನ ಹೋಟೆಲ್‌ಗಳು ಭಕ್ತರಿಂದ ತುಂಬಿರುತ್ತವೆ.
ಭಕ್ತರಿಂದ ಹಣ ವಸೂಲಿ
ಆದ್ರೆ ಇಲ್ಲಿಯ ಕೆಲವು ಹೋಟೆಲ್‌ಗಳು ಭಕ್ತರನ್ನು ವಂಚಿಸಲು ಮುಂದಾಗುತ್ತಿದ್ದಾರೆ. ಈ ಸಂಬಂಧ ಭಕ್ತರೊಬ್ಬರು ತಿರುಮಲದಲ್ಲಿನ ತಮ್ಮ ಕಹಿ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದೆ.
ತಿರುಪತಿಯಲ್ಲಿ ಭಕ್ತರ ಪರಿಸ್ಥಿತಿ ಇಷ್ಟೊಂದು ಭೀಕರವಾಗಿದೆಯೇ?
ಬೆಂಗಳೂರಿನ ಭಕ್ತರೊಬ್ಬರು ಪತ್ನಿಯೊಂದಿಗೆ ತಿರುಮಲಕ್ಕೆ ಆಗಮಿಸಿದ್ದರು. ಈ ವೇಳೆ ಎದುರಿಸಿದ ತಮ್ಮ ಕಹಿ ಅನುಭವಗಳನ್ನು ಎಂದಿಗೂ ಮರೆಯಲೂ ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಹೋಟೆಲ್‌ಗಳು ಸ್ವಚ್ಛವಾಗಿರಲಿಲ್ಲ. ಇಲ್ಲಿಯ ಹೋಟೆಲ್ ಪರಿಸ್ಥಿತಿ ನೋಡಿ ನಾವು ಮೋಸ ಹೋಗಿದ್ದೇವೆ ಎಂದು ತಿಳಿಯಿತು. ಆದ್ದರಿಂದ ವೆಂಕಟೇಶ್ವರನ ದರ್ಶನಕ್ಕೆ ಬರುವ ಭಕ್ತರು ಯಾವಾಗಲೂ ಜಾಗರೂಕರಾಗಿರಬೇಕು ಎಂದು ಬೆಂಗಳೂರಿನ ವ್ಯಕ್ತಿ ಸಲಹೆ ನೀಡಿದ್ದಾರೆ
ಸಾಲು ಸಾಲು ಸಮಸ್ಯೆಗಳು ಎದುರಿಸಿ ಭಕ್ತ
ಕುಟುಂಬದ ಜೊತೆ ಬೆಂಗಳೂರಿನಿಂದ ರೈಲಿನ ಮೂಲಕ ತಿರುಪತಿಗೆ ಬರುತ್ತಾರೆ. ರೈಲ್ವೆ ನಿಲ್ದಾಣದಲ್ಲಿರುವ ಹೋಟೆಲ್‌ಗೆ ಊಟ ಮಾಡಲು ಹೋದಾಗ ಸಮಸ್ಯೆಗಳು ಆರಂಭವಾದವು. ಆಹಾರ ರುಚಿಕರವಾಗಿರಲಿಲ್ಲ ಮತ್ತು ಸುತ್ತಲಿನ ವಾತಾವರಣ ಶುಚಿಯಾಗಿರಲಿಲ್ಲ. ಹೋಟೆಲ್ ಸಿಬ್ಬಂದಿ ನಡವಳಿಕೆಯೂ ಚೆನ್ನಾಗಿರಲಿಲ್ಲ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದರು.
ಕಳಪೆ ಆಹಾರ
ಆ ಹೋಟೆಲ್‌ನಲ್ಲಿ ತಿಂದ ಎರಡು ಚಪಾತಿಗಳು ಉಪ್ಪಿನಿಂದ ತುಂಬಿತ್ತು. ಅಲ್ಲಿಯ ಸೆಟ್ ದೋಸೆ ಕೆಟ್ಟದಾಗಿತ್ತು. ಆಹಾರ ರುಚಿಯಾಗಿಲ್ಲ ಎಂದು ಹೇಳಿದಾಗ ಯಾವ ಸಿಬ್ಬಂದಿಯೂ ಸರಿಯಾಗಿ ಪ್ರತಿಕ್ರಿಯಿಸಿಲಿಲ್ಲ. ಕೊನೆಗೂ ಹೋಟೆಲ್‌ನಲ್ಲಿಯೂ ಪಾತ್ರೆ, ತಟ್ಟೆ ಮತ್ತು ಚಮಚಗಳು ಕ್ಲೀನ್ ಆಗಿರಲಿಲ್ಲ ಎಂದು ಅಲ್ಲಿಯ ಪರಿಸ್ಥಿತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ದುಪ್ಪಟ್ಟು ಬಿಲ್
ಕಳಪೆ ಆಹಾರ ನೀಡಿದ್ದಕ್ಕೆ ಫೈವ್ ಸ್ಟಾರ್ ಹೋಟೆಲ್ ರೀತಿಯಲ್ಲಿ ಬಿಲ್ ನೀಡಿದ್ದರು. ಕೇವಲ ಎರಡು ಚಪಾತಿ ಮತ್ತು ಒಂದು ಸೆಟ್ ದೋಸೆಗೆ 480 ರೂಪಾಯಿ ಬಿಲ್ ನೀಡಿದರು. ನಾನು ಬಿಲ್ ನೋಡಿ ಏನು ಮಾತನಾಡದೇ ಹಣ ಪಾವತಿಸಿ ಬಂದೆ ಎಂದು ಹೇಳಿಕೊಂಡಿದ್ದಾರೆ.
ಹೋಟೆಲ್ ಸಿಬ್ಬಂದಿ ನಿಂದನೆ
ಆ ದಿನ ಅಲ್ಲಿಯೇ ಉಳಿದುಕೊಳ್ಳಲು ಆನ್‌ಲೈನ್ ಮುಖಾಂತರ ಹೋಟೆಲ್ ನೋಡಿ ರೂಮ್ ಬುಕ್ ಮಾಡಿದೆ. ಆದ್ರೆ ಅಲ್ಲಿ ಹೋಗಿ ನೋಡಿದಾಗ ಶಾಕ್ ಆಯ್ತು. ರೂಮ್ ತುಂಬಾ ಕೊಳಕಾಗಿದ್ದವು. ಅಲ್ಲಿಂದ ಹೊರಡಲು ಮುಂದಾದ್ರೆ ಹೋಟೆಲ್ ಸಿಬ್ಬಂದಿ ತಮ್ಮನ್ನು ಬೆದರಿಸಿ ತೆಲುಗಿನಲ್ಲಿ ತುಂಬಾ ಅಸಹ್ಯಕರ ರೀತಿಯಲ್ಲಿ ನಿಂದಿಸಿದರು ಎಂದು ಭಕ್ತ ಹೇಳಿಕೊಂಡಿದ್ದಾರೆ.
ಹೆಚ್ಚಿನ ಹಣಕ್ಕೆ ಡಿಮ್ಯಾಂಡ್
ಈ ಹೋಟೆಲ್‌ನಲ್ಲಿ ಒಂದು ರಾತ್ರಿ ತಂಗಲು 1000 ರೂ. ಶುಲ್ಕ ವಿಧಿಸುವುದಾಗಿ ಆನ್‌ಲೈನ್‌ನಲ್ಲಿ ತೋರಿಸಲಾಗಿತ್ತು. ಆದರೆ ಅಲ್ಲಿಯ ಸಿಬ್ಬಂದಿ 1500 ರೂ.ಗೆ ಬೇಡಿಕೆ ಇರಿಸಿದರು. ಕೊನೆಗೆ ಏನು ಮಾಡಲಾಗದೇ ಹಲ್ಲಿ, ಸೊಳ್ಳೆ, ಜಿರಳೆ, ಇಲಿ ಮತ್ತು ಜೇಡ ಗೂಡುಗಳಿರುವ ಆ ಅಶುದ್ಧ ಕೋಣೆಯಲ್ಲಿ ಇರಬೇಕಾಯಿತು ಎಂದಿದ್ದಾರೆ.
ಇದನ್ನೂ ಓದಿ: ಮೈಸೂರಿನ ಜನತೆಗಾಗಿ ತಿರುಪತಿಗೆ KSTDC ವಿಶೇಷ ಟೂರ್ ಪ್ಯಾಕೇಜ್; ಟಿಕೆಟ್ ಬೆಲೆ ಎಷ್ಟು?
ಬೆಂಗಳೂರಿನ ಭಕ್ತ
ಆ ದಿನ ರಾತ್ರಿ ಹೋಟೆಲ್‌ನಲ್ಲಿ ಉಳಿದುಕೊಂಡು ಮರುದಿನ ಶ್ರೀನಿವಾಸನ ದರ್ಶನ ಪಡೆದುಕೊಂಡಿದ್ದಾರೆ. ಬಾಲಾಜಿ ದರ್ಶನ ಸಿಗುತ್ತಿದ್ದಂತೆ ಭಕ್ತರು ಬೆಂಗಳೂರಿಗೆ ಹಿಂದಿರುಗಿದ್ದಾರೆ. ಬೆಂಗಳೂರು ತಲುಪಿದ ಬಳಿಕ ತಿರುಪತಿಯಲ್ಲಿನ ತಮ್ಮ ಅನುಭವಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ತಿರುಪತಿಗೆ 1 ಕೋಟಿ ರೂ ನಗದು, 25 ಲಕ್ಷ ರೂ ಚಿನ್ನಾಭರಣ ಕಾಣಿಕೆ ನೀಡಿದ ಬೆಂಗಳೂರು ಭಕ್ತ
ತಿರುಮಲ ಭಕ್ತರೇ, ಜಾಗರೂಕರಾಗಿರಿ!
- ತಿರುಮಲದ ವೆಂಕಟೇಶ್ವರನ ದರ್ಶನಕ್ಕಾಗಿ ತಿರುಪತಿಯಲ್ಲಿ ತಂಗುವ ಭಕ್ತರು, ವಿಶೇಷವಾಗಿ ರೈಲು ನಿಲ್ದಾಣದ ಬಳಿಯಲ್ಲಿರುವ ಹೋಟೆಲ್‌ಗಳ ಬಗ್ಗೆ ಜಾಗರೂಕರಾಗಿರಬೇಕು. ಅಧಿಕೃತ ಆಪ್ ಮೂಲಕವೇ ಕೋಣೆಗಳನ್ನು ಬುಕ್ ಮಾಡಿಕೊಳ್ಳಿ.
- ತಿರುಮಲಕ್ಕೆ ಹೋಗುವ ಮುನ್ನ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಿ. ಹೋದ ನಂತರ ಸುಮ್ಮನೆ ಸಮಸ್ಯೆಗೆ ಸಿಲುಕಬೇಡಿ.
- ತಿರುಪತಿಗೆ ಹೋದರೆ, ನೈರ್ಮಲ್ಯವಿಲ್ಲದ ಪರಿಸ್ಥಿತಿಗಳು ಮತ್ತು ವಂಚನೆಗಳನ್ನು ಎದುರಿಸಲು ಸಿದ್ಧರಾಗಿರಬೇಕು.
- ದರ್ಶನಕ್ಕಾಗಿ ತಿರುಪತಿಗೆ ಪ್ರಯಾಣಿಸುವ ಇತರ ರಾಜ್ಯಗಳ ಭಕ್ತರಿಗೆ ಭಾಷಾ ಅಡೆತಡೆಗಳು ಎದುರಾಗಬಹುದು.
KSTDC ಪ್ಯಾಕೇಜ್
ಬೆಂಗಳೂರು ಮತ್ತು ಮೈಸೂರು ಜನತೆಗೆ KSTDC ತಿರುಪತಿ ಭಕ್ತರಿಗಾಗಿ ವಿಶೇಷ ಪ್ಯಾಕೇಜ್‌ಗಳನ್ನು ನೀಡುತ್ತಿದೆ. ಭಕ್ತರು ಹೆಚ್ಚಿನ ಮಾಹಿತಿಗಾಗಿ KSTDCವೆಬ್‌ಸೈಟ್‌ಗೆ ಭೇಟಿ ನೀಡಬಹುದು.